ಸೋಮವಾರಪೇಟೆ, ಜು. ೨೦: ಲಯನ್ಸ್ ಕ್ಲಬ್ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಸಿ.ಕೆ. ರೋಹಿತ್, ಕಾರ್ಯದರ್ಶಿಯಾಗಿ ಕೆ.ಎನ್. ತೇಜಸ್ವಿ, ಖಜಾಂಚಿಯಾಗಿ ಜಿ.ಟಿ. ಯೋಗೇಂದ್ರ ಆಯ್ಕೆಯಾದರು. ವಲಯದ ಮಾಜಿ ರಾಜ್ಯಪಾಲ ಹೆಚ್.ಎಸ್. ಮಂಜುನಾಥಮೂರ್ತಿ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಪದಾಧಿಕಾರಿಗಳಾಗಿ ಎಸ್.ಕೆ. ಲಿಂಗರಾಜು, ಸಿ.ಕೆ. ಶಿವಕುಮಾರ್, ಎಂ.ಎ. ಹರೀಶ್, ಪದ್ಮಾಕರ್ ರಾಜ್ ಅರಸ್, ಎನ್.ಬಿ. ರಾಮಚಂದ್ರ, ಡಿ.ಟಿ. ರಾಜೇಶ್, ರಾಮಶೆಟ್ಟಿ, ಕೆ.ಡಿ. ವೀರಪ್ಪ, ಜೆ.ಸಿ. ಶೇಖರ್, ಎಸ್.ಬಿ. ಲೀಲಾರಾಂ, ಶಶಿಕಲಾ ಚೌಟ, ಪ್ರಭಾ ಹರೀಶ್, ರಾಜರಾಮ್, ಡಿ. ಲಿಂಗಪ್ಪ, ಕೆ.ಎಂ. ಜಗದೀಶ್, ಎ.ಎಸ್. ಮಹೇಶ್, ಬಿ.ಎಂ. ಪವನ್, ಮಂಜುನಾಥಚೌಟ, ಜಲಜಾ ಶೇಖರ್, ರಾಣಿ ಪ್ರತಾಪ್, ಲಿಯೋ ಅಧ್ಯಕ್ಷರಾಗಿ ಅಜಯ್ ಆಯ್ಕೆಯಾದರು. ಪ್ರಮಾಣ ವಚನ ಸಂದರ್ಭ ಮಾಜಿ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಮತ್ತಿತರರು ಇದ್ದರು.