ಮಡಿಕೇರಿ, ಜು. ೨೦ : ಮಡಿಕೇರಿ ಸೇರಿದಂತೆ ರಾಜ್ಯದ ೧೨ ನಗರಾಭಿವೃದ್ಧಿ ಪ್ರಾಧಿಕಾರಗಳ ಅಧ್ಯಕ್ಷರುಗಳ ನಾಮ ನಿರ್ದೇಶನ ರದ್ದುಗೊಳಿಸಿ ಸರಕಾರ ಆದೇಶ ಹೊರಡಿಸಿದ್ದು, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ರಮೇಶ್ ಹೊಳ್ಳ ಅವರ ನಾಮ ನಿರ್ದೇಶನ ಕೂಡ ರದ್ದಾಗಿದೆ.

ಇತ್ತೀಚೆಗಷ್ಟೇ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರ ನಾಮ ನಿರ್ದೇಶನ ರದ್ದು ಮಾಡಿದ್ದ ಸರಕಾರ ಇದೀಗ ಮೂಡಾ ಅಧ್ಯಕ್ಷರ ನಾಮ ನಿರ್ದೇಶನವನ್ನೂ ಕೂಡ ರದ್ದುಪಡಿಸಿ ಆದೇಶ ಹೊರಡಿಸಿದೆ.

(ಮೊದಲ ಪುಟದಿಂದ) ತೆರವಾಗಿರುವ ಸ್ಥಾನಗಳಿಗೆ ನೇಮಕಾತಿ ಮಾಡಿಲ್ಲ. ತೆರವಾಗಿರುವ ಸ್ಥಾನಗಳಿಗೆ ನೇಮಕ ಮಾಡುವಂತೆ ಬಿಜೆಪಿ ಪಾಳಯದಲ್ಲಿ ಭಾರೀ ಲಾಭಿ ಆರಂಭಗೊAಡಿದೆ.

ತೃಪ್ತಿ ಇದೆ

ಅಧ್ಯಕ್ಷನಾಗಿ ನೇಮಕಗೊಂಡ ಬಳಿಕ ಬಹಳಷ್ಟು ಕೆಲಸ ಕಾರ್ಯಗಳನ್ನು ಮಾಡುವ ನಿರೀಕ್ಷೆಗಳಿದ್ದವು. ಆದರೆ ನಿರೀಕ್ಷಿಸಿದಷ್ಟು ಕೆಲಸಗಳಾಗಿಲ್ಲ. ಆದರೂ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ ಎಂದು ನಿರ್ಗಮಿತ ಅಧ್ಯಕ್ಷ ರಮೇಶ್ ಹೊಳ್ಳ ಹೇಳಿದರು. ‘ಶಕ್ತಿ’ಯೊಂದಿಗೆ ಅಭಿಪ್ರಾಯ ಹಂಚಿಕೊAಡ ಅವರು, ಮೂಡಾ ಕಚೇರಿಯಲ್ಲಿ ಅಧಿಕಾರಿಗಳಿರಲಿಲ್ಲ. ಆಯುಕ್ತರ ನೇಮಕವಾಗಿ ಒಂದು ತಿಂಗಳಾಗಿದೆಯಷ್ಟೇ. ತುಂಬಾ ಕೆಲಸ ಮಾಡುವ ನಿರೀಕ್ಷೆಯಿತ್ತು. ಆದರೂ ಕೆಲವೊಂದು ಕುಂದು ಕೊರತೆಗಳಿಗೆ ಸ್ಪಂದಿಸಿ ಕಾನೂನಿನ ಇತಿಮಿತಿಯೊಳಗಡೆ ಕೆಲಸ ಮಾಡಿದ್ದೇನೆ. ಕೆಲವು ಕಾಣದ ಕೈಗಳ ಕೈವಾಡಗಳಿಂದಾಗಿ ದಿಢೀರಾಗಿ ಸ್ಥಾನ ರದ್ದುಪಡಿಸಲಾಗಿದೆ. ಈ ಬಗ್ಗೆ ಸಂಘ ಪರಿವಾರದವರೊಂದಿಗೆ ಕಾರಣ ಕೇಳುತ್ತೇನೆ, ಬಿಜೆಪಿ ಮೂಲಕ ಸ್ಥಾನ ಸಿಕ್ಕಿದ್ದಲ್ಲ, ನನ್ನಿಂದ ತಪ್ಪುಗಳಾಗಿದ್ದಲ್ಲಿ ತಿದ್ದಿಕೊಳ್ಳಲು ಅವಕಾಶವಾದಂತಾಗುತ್ತದೆ. ಯಾವದೇ ಕಾರಣಕ್ಕೂ ಸಂಘದ ಕೆಲಸ ಬಿಡುವದಿಲ್ಲ. ಕಳೆದ ೪೫ ವರ್ಷಗಳಿಂದ ಸಂಘದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಂಘ ಹೇಳುವ ಕೆಲಸ ಮಾಡಿಕೊಂಡಿರುವದಾಗಿ ಹೇಳಿದರು. ಯಾವದೇ ಸಂದರ್ಭದಲ್ಲೂ ಕೂಡ ಅಧಿಕಾರಕ್ಕೆ ಅಂಟಿಕೊAಡು ಕುಳಿತುಕೊಳ್ಳುವ ಜಾಯಮಾನ ತನ್ನದಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು.