ಕೂಡಿಗೆ, ಜು. ೧೯: ಮಹಿಳೆಯರ ಬಟ್ಟೆ ಧರಿಸಿ ದೇವಾಲಯದ ಹುಂಡಿ ಒಡೆದು ಹಣ ಕಳ್ಳತನ ಮಾಡಿದ್ದ ಆರೋಪಿಯನ್ನು ಕುಶಾಲನಗರ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೂಡಿಗೆಯ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಬಟ್ಟೆ ಧರಿಸಿ ಬಂದು ಆರೆಯಿಂದ ಮೀಟಿ ಹಣ ಕಳ್ಳತನ ಮಾಡಿದ ಮಹಮ್ಮದ್ ಗೌಸ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.
ದೇವಾಲಯದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಳ್ಳತನ ನಡೆದಿತ್ತು. ಕೂಡುಮಂಗಳೂರು ನಿವಾಸಿ ಮಹಮ್ಮದ್ ಗೌಸ್ ಎಂಬಾತ ಮಹಿಳೆಯರ ವೇಷದಲ್ಲಿ ಬಂದು ಹುಂಡಿ ಒಡೆದು ಕಳ್ಳತನ ಮಾಡಿದ್ದು, ಈ ಕೃತ್ಯ ದೇವಾಲಯದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇದರ ಆಧಾರದಲ್ಲಿ ತನಿಖೆ ಕೈಗೊಂಡು ಅರೋಪಿಯನ್ನು ಪೊಲೀಸ್ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ತಂಡ ಬಂಧಿಸಿದೆ.
ಆರೋಪಿ ಮಹಮ್ಮದ್ ಗೌಸ್‌ನ ಮೇಲೆ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಮತ್ತು ನಗರ ಠಾಣೆಯಲ್ಲಿ ೪ ಪ್ರಕರಣ ಈ ಮೊದಲು ಇದೆ.