ವೀರಾಜಪೇಟೆ, ಜು. ೨೦: ಪೌರ ಕಾರ್ಮಿಕರ ಶ್ರಮದಿಂದ ನಗರ ಸ್ವಚ್ಛವಾಗಲು ಸಾಧÀ್ಯ, ಅವರ ಪರಿಶ್ರಮಕ್ಕೆ ಸರಿಯಾಗಿ ಸರ್ಕಾರ ಕೂಡ ಸ್ಪಂದಿಸುತ್ತಿದೆ ಎಂದು ಶಾಸಕ ಕೆ.ಜಿ ಬೋಪಯ್ಯ ಹೇಳಿದರು. ಪುರಸಭೆ ಸಭಾಂಗಣದಲ್ಲಿ ಪೌರ ಕಾರ್ಮಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಮಳೆಗಾಲದ ಕಿಟ್ ವಿತರಣೆ ಮಾಡಿ ಅವರು ಮಾತನಾಡಿದರು. ಈ ಸಂದರ್ಭ ತಾಲೂಕು ಅಕ್ರಮ ಸಕ್ರಮ ಅಧÀ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಪುರಸಭೆ ಅಧ್ಯಕ್ಷೆ ಸುಶ್ಮಿತಾ, ತಹಶೀಲ್ದಾರ್ ಯೋಗಾನಂದ್, ಮುಖ್ಯಾಧಿಕಾರಿ ಚಂದ್ರಕುಮಾರ್ ಪುರಸಭೆೆ ಸದಸ್ಯರು ಹಾಜರಿದ್ದರು.