ಸೋಮವಾರಪೇಟೆ, ಜು. ೨೦: ಭಾರೀ ಮಳೆ-ಗಾಳಿಯಿಂದ ಮನೆ ಹಾನಿ ಸಂಭವಿಸಿದ ಕುಡಿಗಾಣ ಗ್ರಾಮದ ಕುಶಾಲಪ್ಪ ಅವರಿಗೆ ಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಹರಪಳ್ಳಿ ರವೀಂದ್ರ ಅವರು ಆರ್ಥಿಕ ಸಹಾಯ ನೀಡಿದರು.

ಕುಡಿಗಾಣ ಗ್ರಾಮಕ್ಕೆ ಪ್ರಸಕ್ತ ವರ್ಷ ೧೫೦ ಇಂಚಿಗೂ ಅಧಿಕ ಮಳೆಯಾಗಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಮಳೆಯಿಂದಾಗಿ ಗ್ರಾಮದ ಕುಶಾಲಪ್ಪ ಅವರಿಗೆ ಸೇರಿದ ವಾಸದ ಮನೆ ಕುಸಿದು ನಷ್ಟ ಸಂಭವಿಸಿದೆ. ಬಡ ಕೃಷಿಕರಾಗಿರುವ ಕುಶಾಲಪ್ಪ ಅವರ ಮನೆಗೆ ಭೇಟಿ ನೀಡಿದ ರವೀಂದ್ರ ಅವರು ಆರ್ಥಿಕ ಸಹಾಯ ನೀಡಿದರು. ಈ ಸಂದರ್ಭ ಪ್ರಮುಖರಾದ ಅಶ್ವಥ್, ಪ್ರಸ್ಸಿ, ವಿರೂಪಾಕ್ಷ, ಬಸಪ್ಪ, ಪ್ರಣೀತ್, ಪ್ರಸಾದ್ ಅವರುಗಳು ಉಪಸ್ಥಿತರಿದ್ದರು.