ಮಡಿಕೇರಿ, ಜು. ೨೦: ಪೊನ್ನಂಪೇಟೆ ಕೊಡವ ಸಮಾಜದ ನೂತನ ಅಧ್ಯಕ್ಷರಾಗಿ ಹಾಗೂ ನಿರ್ದೇಶಕರಾಗಿ ಆಯ್ಕಗೊಂಡಿರುವ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳಾದ ಕಾಳಿಮಾಡ ಎಂ. ಮೋಟಯ್ಯ ಹಾಗೂ ಕಳ್ಳಿಚಂಡ ಕಟ್ಟಿ ಪೂಣಚ್ಚ ಅವರನ್ನು ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಇವರಿಬ್ಬರು ವೇದಿಕೆಯ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಿಗ್ಗಟ್ಟ್ನಾಡ್ ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಕೊಟ್ಟುಕತ್ತೀರ ಸೋಮಣ್ಣ, ಉಪಾಧ್ಯಕ್ಷ ಮಂಡೇಚAಡ ಗಣೇಶ್ ಗಣಪತಿ, ಕಾರ್ಯದರ್ಶಿ ಚೇಂದೀರ ಬೋಪಣ್ಣ, ಐನಂಡ ಮಂದಣ್ಣ, ಹಿರಿಯ ಸಲಹೆಗಾರರು ಮತ್ತು ಖಜಾಂಚಿ, ಬೊಳ್ಳಿಯಂಗಡ ದಾದು ಪೂವಯ್ಯ ಆಂತರಿಕ ಲೆಕ್ಕ ಪರಿಶೋಧಕರು, ಹಿರಿಯರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಸಂಸ್ಥಾಪಕ ಕಾರ್ಯದರ್ಶಿ, ಚೆಕ್ಕೇರ ಸನ್ನಿ ಸುಬ್ಬಯ್ಯ, ಸಂಸ್ಥಾಪಕ ಅಧ್ಯಕ್ಷರು ಮದ್ರೀರ ಸಿ. ಕರುಂಬಯ್ಯ, ಕಾಟಿಮಾಡ ಡಿಕ್ಕಿ ಅಣ್ಣಯ್ಯ ಸಲಹೆಗಾರರು, ಬಾನಂಡ ರಮೇಶ್, ಹಿರಿಯ ಸಲಹೆಗಾರರು ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ತೀತಿರ ಜಯ ಅಯ್ಯಪ್ಪ, ಮಾನಿಪಂಡ ಪಾರ್ವತಿ, ಹೆಚ್.ಬಿ. ಬೋಜಮ್ಮ, ಮಾಚಿಮಾಡ ಲೌಲಿ ಸೋಮಯ್ಯ, ಕೇಚಟ್ಟೀರ ಕಾಮುಣಿ ಪೂಣಚ್ಚ ಉಪಸ್ಥಿತರಿದ್ದರು.