ಗೋಣಿಕೊಪ್ಪಲು, ಜು. ೨೦: ಅಂತರರಾಜ್ಯ ಗಡಿ ಭಾಗಗಳ ಅಧಿಕಾರಿಗಳ ಸಭೆಯು ಗೋಣಿಕೊಪ್ಪಲುವಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ನಡೆಯಿತು. ವೀರಾಜಪೇಟೆ ತಾಲೂಕು ಪೊಲೀಸ್ ಉಪ ವಿಭಾಗದ ಅಧೀಕ್ಷಕ ನಿರಂಜನ್ ರಾಜೇ ಅರಸ್ ಅಧ್ಯಕ್ಷತೆಯಲ್ಲಿ ನಡೆದ ಗಡಿ ಭಾಗಗಳ ಅಪರಾಧ ತಡೆ ಸಭೆಯಲ್ಲಿ ಕೇರಳ ರಾಜ್ಯದ ಇರಿಟ್ಟಿ, ಮಾನಂದವಾಡಿ, ಪೊಲೀಸ್ ಅಧಿಕಾರಿಗಳು, ತಾಲೂಕಿನ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಅಧಿಕಾರಿಗಳು ಪರಸ್ಪರ ಮಾಹಿತಿ ಸಂಗ್ರಹಿಸಿ ಅಪರಾಧಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ನಡೆಸಿದರು. ಕಾನೂನಿನ ಕಣ್ತಪ್ಪಿಸಿ ಅಲೆದಾಡುತ್ತಿರುವ ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳನ್ನು ಹಾಗೂ ವಾರೆಂಟ್ ಜಾರಿಯಾಗಿದ್ದರೂ ಪೊಲೀಸರ ಕೈಗೆ ಸಿಗದೆ ಇರುವ ವ್ಯಕ್ತಿಗಳ ಬಗ್ಗೆ ಹಾಗೂ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಅಪರಾಧಗಳನ್ನು ಆಗಿಂದಾಗ್ಗೆ ಅಪರಾಧಗಳನ್ನು ನಡೆಸುವವರ ಬಗ್ಗೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.ಯಾವುದೇ ಅಪರಾಧ ಹಿನ್ನೆಲೆವುಳ್ಳ ಸಂಶಯಾಸ್ಪದ ವ್ಯಕ್ತಿಗಳನ್ನು ಕಂಡಲ್ಲಿ ಆಯಾ ಭಾಗದ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ನಡೆಸಿ ತನಿಖೆಗೆ ಒಳಪಡಿಸುವಂತೆ ಡಿವೈಎಸ್ಪಿ ನಿರಂಜನ್ ರಾಜೇ ಅರಸ್ ತಿಳಿಸಿದರು.
ಸಭೆಯಲ್ಲಿ ಮಡಿಕೇರಿ ವಿಭಾಗದ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಮಾನಂದವಾಡಿ ಉಪವಿಭಾಗದ ಪೊಲೀಸ್ ಉಪ ಅಧೀಕ್ಷಕ ಎ.ಪಿ.ಚಂದ್ರನ್, ತಿರುನೆಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಸೈಜು, ಮಡಿಕೇರಿ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ವೈನಾಡು ಜಿಲ್ಲೆಯ ಪಿಎಸ್‌ಐ ಪ್ರಭಾಕರನ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್, ಕುಟ್ಟ ವೃತ್ತ ನಿರೀಕ್ಷಕ ಮಂಜಪ್ಪ,
(ಮೊದಲ ಪುಟದಿಂದ) ವೀರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ, ಅಬಕಾರಿ ಇನ್ಸ್ಪೆಕ್ಟರ್ ಎಂ.ಎನ್. ನಟರಾಜ್, ಅಬಕಾರಿ ನಿರೀಕ್ಷಕ ಬಿ.ಎಸ್. ಮೋಹನ್ ಕುಮಾರ್, ಡಿಆರ್‌ಎಫ್‌ಒ ಎಸ್.ಸಿ. ಶ್ರೀನಿವಾಸ್, ಗೋಣಿಕೊಪ್ಪ ಠಾಣಾಧಿಕಾರಿ ದೀಕ್ಷಿತ್‌ಕುಮಾರ್, ಪೊನ್ನಂಪೇಟೆ ಠಾಣಾಧಿಕಾರಿ ಡಿ. ಕುಮಾರ್, ಕುಟ್ಟ ಠಾಣಾಧಿಕಾರಿ ಹೆಚ್.ಕೆ. ಮಹಾದೇವ್, ಸಿದ್ದಾಪುರ ಠಾಣೆಯ ಮೋಹನ್ ರಾಜ್, ಶ್ರೀಮಂಗಲ ಠಾಣಾಧಿಕಾರಿ ಶಿವಕುಮಾರ್, ವೀರಾಜಪೇಟೆ ನಗರ ಠಾಣಾಧಿಕಾರಿ ಸಿ.ವಿ. ಶ್ರೀಧರ್, ಗ್ರಾಮಾಂತರ ಠಾಣೆಯ ರವಿಕುಮಾರ್, ಅರಣ್ಯ ಇಲಾಖೆಯ ನಾಗರಹೊಳೆ ವನ್ಯ ಜೀವಿ ವಿಭಾಗದ ಆರ್‌ಎಫ್‌ಒ ಮಹಮ್ಮದ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. -ಹೆಚ್.ಕೆ.ಜಗದೀಶ್