ಮಡಿಕೇರಿ, ಜು. ೨೦: ಕೊಡಗು ಜಿಲ್ಲಾ ವುಶು ಅಸೋಸಿಯೇಷನ್ ವತಿಯಿಂದ ಮಾದಾಪುರದಲ್ಲಿ ನಡೆದ ೪ನೇ ಜಿಲ್ಲಾಮಟ್ಟದ ವುಶು ಚಾಂಪಿಯನ್ ಶಿಪ್ನಲ್ಲಿ ಸಿದ್ದಾಪುರ ವುಶು ಸಂಸ್ಥೆಯ ವಿದ್ಯಾರ್ಥಿಗಳು ೩ ಚಿನ್ನ, ೪ ಬೆಳ್ಳಿ ಮತ್ತು ೨ ಕಂಚಿನ ಪದಕ ಗೆದ್ದಿದ್ದಾರೆ.
ಸಂಸ್ಥೆಯ ವಿದ್ಯಾರ್ಥಿಗಳಾದ ಓ.ಎಸ್. ಪ್ರಜ್ವಲ್, ಕೆ.ಎಸ್. ಶ್ರೀಚರಣ್, ಎನ್.ಎಸ್. ಆಕಾಶ್ ಚಿನ್ನದ ಪದಕ, ಕೆ.ಎಸ್. ಶ್ರೀಕುಮಾರ್, ಎಂ.ಎ. ರಾಹುಲ್, ಎ. ಅವಿನಾಶ್, ಕೆ.ಎಸ್. ಸ್ವಣಿಕ ಬೆಳ್ಳಿ ಪದಕ, ಸಿ.ಎಸ್. ಯದುನಂದನ್ ಹಾಗೂ ಎ. ಆಯುಷ್ ಕೃಷ್ಣ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಇವರಿಗೆ ರಾಜ್ಯ ತರಬೇತುದಾರ ಎನ್.ಸಿ. ಸುದರ್ಶನ್ ತರಬೇತಿ ನೀಡಿದರು.