ಪೊನ್ನಂಪೇಟೆ, ಜು. ೨೦: ಆನೆಯೊಂದು ಪಟ್ಟಣದ ಬಸ್ ನಿಲ್ದಾಣದ ಸಮೀಪದ ಆಲೆಮಾಡ ಪೂಣಚ್ಚ ಅವರ ಮನೆಯ ಕಾಂಪೌAಡ್ಗೆ ನುಗ್ಗಿ ಹಾನಿಪಡಿಸಿದ ಘಟನೆ ನಡೆದಿದೆ.
ಅಲ್ಲದೆ, ಪಕ್ಕದಲ್ಲಿದ್ದ ಹಲಸಿನ ಮರದಲ್ಲಿದ್ದ ಹಣ್ಣನ್ನು ತಿನ್ನುವ ಸಂದರ್ಭದಲ್ಲಿ ವ್ಯಾಪಾರಿ ದೊರೆ ಕಾಡಾನೆ ಕಂಡು ಓಡಿದ್ದಾರೆ. ನಂತರ ಆನೆ ಹಲಸಿನ ಹಣ್ಣನ್ನು ತಿಂದು ಪಕ್ಕದ ತೋಟದಲ್ಲಿ ಮರೆಯಾಗಿದೆ. ಇದರಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. -ಶಿವಣ್ಣ