ಮಡಿಕೇರಿ, ಜು. ೨೦: ನಿನ್ನೆ ರಾತ್ರಿ ಮರಗೋಡುವಿನಲ್ಲಿ ಅಕ್ರಮ ಗೋ ಸಾಗಾಟಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸಬೇಕೆAದು ಹಿಂದೂಪರ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು.
ನಿನ್ನೆ ದಿನ ರಾತ್ರಿ ೧೦ ಗಂಟೆ ವೇಳೆಗೆ ದುಷ್ಕರ್ಮಿಗಳು ನೀತಮ್ ಎಂಬವರ ಕೊಟ್ಟಿಗೆಯಿಂದ ಗೋವುಗಳನ್ನು ಪಿಕ್‌ಅಪ್ (ಕೆ.ಎ. ೧೨ ಎ. ೧೬೧೩) ವಾಹನದಲ್ಲಿ ತುಂಬಿ ಕೊಂಡು ಅಕ್ರಮ ಸಾಗಾಟ ಮಾಡುತ್ತಿದ್ದ ವೇಳೆ ಈ ಬಗ್ಗೆ ಮಾಹಿತಿ ಪಡೆದ ನೀತಮ್ ಹಾಗೂ ಅವರ ಸಹೋದರ ಗೌತಮ್ ಎಂಬವರುಗಳು ಪಿಕ್‌ಅಪ್ ವಾಹನವನ್ನು ಹಿಂಬಾಲಿಸಿ ದ್ದಾರೆ. ಈ ಸಂದರ್ಭ ಗೋವುಗಳನ್ನು ಸಾಗಿಸುತ್ತಿದ್ದ ಪಿಕ್‌ಅಪ್ ವಾಹನ ಕಟ್ಟೆಮನೆ ರಾಕ್ ಎಸ್ಟೇಟ್‌ನ ಮುಂಭಾಗ ಮಗುಚಿ ಬಿದ್ದಿದ್ದು, ವಾಹನದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನೀತಮ್ ಹಾಗೂ ಗೌತಮ್ ಪಿಕ್‌ಅಪ್ ಬಳಿಗೆ ತೆರಳುತ್ತಿ ದ್ದಂತೆ ಅದರಲ್ಲಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಬಳಿಕ ಮನೆಯವರು ಗೋವುಗಳನ್ನು ರಕ್ಷಣೆ ಮಾಡಿ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರತಿಭಟನೆ ನಿನ್ನೆ ರಾತ್ರಿ ನಡೆದ ಈ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು, ಬಿಜೆಪಿ ಗ್ರಾಮಾಂತರ ಮಂಡಲ, ಸ್ಥಳೀಯರಿಂದ ಮರಗೋಡಿನಲ್ಲಿ ಪ್ರತಿಭಟನೆ ನಡೆಯಿತು. ಕೊಡಗಿನಲ್ಲಿ ಗೋಹತ್ಯೆ ಹಾಗೂ ಗೋ ಸಾಗಾಟದಂತಹ ಪ್ರಕರಣಗಳು ಆಗಿಂದಾಗ್ಗೆ ನಡೆಯುತ್ತಿದ್ದರೂ ಕೂಡ, ಇದಕ್ಕೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಿನ್ನೆ ನಡೆದ ಪ್ರಕರಣದ
(ಮೊದಲ ಪುಟದಿಂದ) ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಗೋವು ಕಳ್ಳರಿಗೆ ಗುಂಡಿಕ್ಕಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನಾ ಸ್ಥಳಕ್ಕೆ ಎಸ್‌ಪಿ, ಡಿವೈಎಸ್‌ಪಿ ಆಗಮಿಸ ಬೇಕೆಂದು ಪಟ್ಟು ಹಿಡಿದರು. ಪ್ರತಿಭಟನೆ ಕಾವೇರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಗೋ ಸಾಗಾಟ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಶ್ರಮಿಸುತ್ತದೆ. ಅಕ್ರಮ ಗೋ ಸಾಗಾಟ ದಂತಹ ಕೃತ್ಯಗಳಲ್ಲಿ ಭಾಗಿಯಾ ದವರನ್ನು
ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಪೊಲೀಸ್ ಇಲಾಖೆ ಎಂದಿಗೂ ಗೋ ಕಳ್ಳರನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದರು. ಈ ವೇಳೆ ವೃತ್ತ ನಿರೀಕ್ಷಕ ರವಿಕಿರಣ್ ಹಾಜರಿದ್ದರು. ಅಕ್ರಮ ಗೋ ಸಾಗಾಟ ಸಂಬAಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಡಿವೈಎಸ್‌ಪಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಕ್ತಾಯ ಕಂಡಿತು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಪ್ರಚಾರ ಪ್ರಮುಖ್ ಕುಮಾರ್, ಮಡಿಕೇರಿ ತಾಲೂಕು ಸಂಯೋಜಕ್ ಎಂ. ಬೆಳ್ಳಿಯಪ್ಪ, ಸಹ ಸಂಯೋಜಕ್ ಮನುರೈ, ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್, ಪ್ರಮುಖರಾದ ಸುನಿಲ್ ಮಾದಾಪುರ, ವಿನಯ್, ಎಂ. ಚಿದಂಬರ, ಬಿ. ಮೋಹನ್, ರಘು ಆನಂದ, ಪ್ರಭುಶೇಖರ್ ಮತ್ತಿತರರು ಪಾಲ್ಗೊಂಡಿದ್ದರು.