ಕಡAಗ, ಜು. ೧೮: ಸಮೀಪದ ಎಡಪಾಲ ಫೋರ್ ಸ್ಟಾರ್ ಮತ್ತು ಕಿಕ್ಕರೆ ಫ್ರೆಂಡ್ಸ್ ಇವರ ವತಿಯಿಂದ ಎಡಪಾಲ ಸಮೀಪದ ಕಿಕ್ಕರೆ ಗ್ರಾಮದ ಗದ್ದೆಯಲ್ಲಿ ಮೊದಲನೇ ವರ್ಷದ ಕೆಸರುಗದ್ದೆ ಫುಟ್ಬಾಲ್ ನಡೆಯಿತು.

ಸುಮಾರು ೨೫ ತಂಡಗಳು ಪಾಲ್ಗೊಂಡಿದ್ದವು. ಫೈನಲ್ ಪಂದ್ಯಾಟವು ಕಡಂಗ ಸಿಟಿ ಬ್ರದರ್ಸ್ ಮತ್ತು ಕುಂಜಿಲ ಕೌ ಟೈಗರ್ಸ್ ನಡುವೆ ನಡೆದು, ೫-೩ ಗೋಲುಗಳ ಅಂತರದಲ್ಲಿ ಸಿಟಿ ಬ್ರದರ್ಸ್ ಕಡಂಗ ತಂಡ ಜಯಗಳಿಸಿತು.

ಉತ್ತಮ ಆಟಗಾರನಾಗಿ ಅರ್ಸಿದ್ ಕಡಂಗ, ಶಿಸ್ತಿನ ಆಟಗಾರ ನಾಗಿ ಮಾಮು ಕುಂಜಿಲ, ಉತ್ತಮ ಡಿಫೆಂಡರ್ ಆಗಿ ನೌಶಾದ್ ಕಡಂಗ, ಉತ್ತಮ ಗೋಲ್ ಕೀಪರ್ ಆಗಿ ಹಸೀಕ್ ಕಡಂಗ ಬಹುಮಾನ ಪಡೆ ದರು. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪಂಚಾಯತ್ ಸದಸ್ಯರಾದ ಮಮ್ಮಧ್, ಸುಬೀರ್ ಮತ್ತಿತರರು ಆಗಮಿಸಿದ್ದರು. ಕಾರ್ಯಕ್ರಮವನ್ನು ಅನೀಫ ಎಡಪಾಲ ನಿರ್ವಹಿಸಿದರು.