ನಾಪೋಕ್ಲು, ಜು. ೧೮: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ಮಳೆಯ ಅಬ್ಬರ ತಗ್ಗಿದ್ದÄ ಜಲಾವೃತವಾದ ರಸ್ತೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆಯಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ. ಸತತವಾಗಿ ಸುರಿದ ಮಳೆಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದೆ. ಜಲಾವೃತಗೊಂಡ ಹಲವು ರಸ್ತೆಗಳು ತೆರವುಗೊಂಡಿದ್ದು ವಾಹನಗಳ ಸಂಚಾರ ಎಂದಿನAತೆ ಆರಂಭಗೊAಡವು. ಕಾಫಿ ತೋಟಗಳಲ್ಲಿ ಅಪಾರ ಪ್ರಮಾಣದಲ್ಲಿ ಕಾಯಿಗಳು ಉದುರುತ್ತಿವೆ.
ಸಮೀಪದ ಬೊಳಿಬಾಣೆಯಲ್ಲಿ ಭಾನುವಾರ ಸಂಜೆ ನೀರಿನ ಪ್ರವಾಹ ಇಳಿಮುಖಗೊಂಡಿರಲಿಲ್ಲ. ಕಾವೇರಿ ನೀರಿನ ಪ್ರವಾಹದಿಂದ ಜಲಾವೃತವಾಗಿದ್ದ ರಸ್ತೆಯಲ್ಲಿ ನೀರಿನ ಮಟ್ಟ ಕಡಿಮೆ ಇರಬಹುದು ಎಂದು ಭಾವಿಸಿ ಜೀಪು ಚಾಲಿಸಲು ಯತ್ನಿಸಿದ ಚಾಲಕನೊಬ್ಬ ಜೀಪನ್ನು ಅರ್ಧದಲ್ಲಿಯೇ ಬಿಟ್ಟು ಸಾಗಿದ ಘಟನೆ ಭಾನುವಾರ ಸಂಜೆ ನಡೆದಿದೆ. ಮೂರ್ನಾಡುವಿನಿಂದ ನಾಪೋಕ್ಲು ಮೂಲಕ ಅಯ್ಯಂಗೇರಿಗೆ ತೆರಳುತ್ತಿದ್ದ ಜೀಪು ಬೊಳಿಬಾಣೆಯಲ್ಲಿ ನೀರಿನಲ್ಲಿ ಸಾಗುತ್ತಿದ್ದಂತೆ ನಿಂತು ಹೋಗಿದ್ದು ಪ್ರಯಾಣಿಕರು ಭಯಭೀತರಾಗಿದ್ದರು. ಸ್ಥಳಕ್ಕೆ ಪ್ರವಾಹ ವೀಕ್ಷಣೆಗೆ ಬಂದ ಕೊಟ್ಟಮುಡಿಯ ನಿವಾಸಿಗಳಾದ ಮಹಮದ್ ಮತ್ತು ಅಬ್ದುಲ್ಲ ಮತ್ತಿತರ ಗ್ರಾಮಸ್ಥರ ನೆರವಿನಿಂದ ಜೀಪನ್ನು ನೀರಿನಿಂದ ಎಳೆದು ಪ್ರಯಾಣಿಕರನ್ನು ರಕ್ಷಿಸಲಾಯಿತು.