ಸಂಪಾಜೆ, ಜು. ೧೯: ಲಯನ್ಸ್ ಕ್ಲಬ್‌ಗಳ ೩ ಪ್ರಾಂತ್ಯಗಳ ಪದಾಧಿಕಾರಿಗಳ ವಿಚಾರಗೋಷ್ಠಿ ಉಡಾನ್, ಸಂಪಾಜೆ ಲಯನ್ಸ್ ಕ್ಲಬ್‌ನ ಆತಿಥ್ಯದಲ್ಲಿ ಪಯಸ್ವಿನಿ ಸಹಕಾರ ಭವನದಲ್ಲಿ ತಾ. ೧೭ ರಂದು ನಡೆಯಿತು.

ವಿಚಾರಗೋಷ್ಠಿಯನ್ನು ಲಯನ್ಸ್ ಜಿಲ್ಲಾ ೩೧೭ರ ಗವರ್ನರ್ ಸಂಜೀವ ಶೆಟ್ಟಿ ಉದ್ಘಾಟಿಸಿದರು. ಎಂ.ಬಿ. ಸದಾಶಿವರವರು ಮುಖ್ಯ ಅತಿಥಿಗಳಾಗಿ, ಪ್ರಾಂತ್ಯ ೮ರ ಅಧ್ಯಕ್ಷೆ ಸಂಧ್ಯಾ ಸಚಿತ್ ರೈ, ಪ್ರಾಂತ್ಯ ೪ರ ಅಧ್ಯಕ್ಷರಾದ ಶಾಶ್ವತ್ ಬೋಪಣ್ಣ ಮತ್ತು ಪ್ರಾಂತ್ಯ ೭ ರ ಅಧ್ಯಕ್ಷ ಸುದರ್ಶನ ಪಡಿಯಾರ್ ಭಾಗವಹಿಸಿದ್ದರು.

ಮಡಿಕೇರಿ ತಾಲೂಕಿನ ೧೪ ಲಯನ್ಸ್ ಕ್ಲಬಿನ ಪದಾಧಿಕಾರಿಗಳು, ಸುಳ್ಯ, ಪುತ್ತೂರು, ವಿಟ್ಲ ತಾಲೂಕಿನಿಂದ ೧೨ ಲಯನ್ಸ್ ಕ್ಲಬಿನ ಪದಾಧಿಕಾರಿಗಳು ಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಜಿಲ್ಲಾ ಜಿ.ಎಲ್.ಟಿ. ಸಂಘಟಕ ಅರವಿಂದ ಶೆಣೈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.