ಸೋಮವಾರಪೇಟೆ, ಜು. ೧೭: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಜಾಗೃತಿ ಸಮಿತಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತಾಲೂಕು ಆಡಳಿತ ಇವರ ಆಶ್ರಯದಲ್ಲಿ ‘ಕನ್ನಡ ಕಾಯಕ ವರ್ಷಾಚರಣೆ’ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆದ ಸಮಾರೋಪ ಸಮಾರಂಭ ದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ಕಿರಿಯ ಪ್ರಾಥಮಿಕ ಶಾಲಾ ಮಕ್ಕಳ ಚಿತ್ರಕಲೆ ವಿಭಾಗದಲ್ಲಿ ಸಂತ ಜೋಸೆಫರ ಪ್ರಾಥಮಿಕ ಶಾಲೆಯ ರಿಯೋನಾ ಸಿಕ್ವೇರಾ ಪ್ರಥಮ, ವಿಶ್ವಮಾನವ ಕುವೆಂಪು ಶಾಲೆಯ ಸಿ.ಜಿ. ಸಿರಿ ದ್ವಿತೀಯ, ಬಿ.ವಿ. ವೈಷ್ಣವಿ ತೃತೀಯ ಸ್ಥಾನ ಪಡೆದರು. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸೆಕ್ರೆಡ್ ಹಾರ್ಟ್ ಶಾಲೆಯ ಬಿ.ಡಿ. ಪ್ರಕೃತಿ (ಪ್ರ), ಶ್ರೀವತ್ಸ ಎಂ. ಅಚಾರ್ಯ (ದ್ವಿ), ಗೌಡಳ್ಳಿ ಬಿ.ಜಿ.ಎಸ್. ಶಾಲೆಯ ಅಕ್ಷರ್ ದಿಲೀಪ್ (ತೃ) ಸ್ಥಾನಗಳಿಸಿದರು. ಕನ್ನಡ ಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಶನಿವಾರಸಂತೆ ವಿಘ್ನೇಶ್ವರ ಗೋಲ್ಡನ್ ಆಂಗ್ಲ ಮಾಧ್ಯಮ ಶಾಲೆ (ಪ್ರ), ಯಡೂರು ಪ್ರಾಥಮಿಕ ಶಾಲೆಯ ವೈಭವಿ ತಂಡ (ದ್ವಿ), ಗೌಡಳ್ಳಿ ಬಿ.ಜಿ.ಎಸ್. ತಂಡ (ತೃ) ಸ್ಥಾನಗಳಿಸಿತು.

ಪ್ರಬಂಧ ಸ್ಫರ್ಧೆಯ ಪ್ರೌಢಶಾಲಾ ವಿಭಾಗದಲ್ಲಿ ಸೋಮವಾರಪೇಟೆ ಜ್ಞಾನವಿಕಾಸ ಶಾಲೆಯ ಬಿ.ಪಿ. ಸಿಂಚನ (ಪ್ರ) ವಿಘ್ನೇಶ್ವರ ಶಾಲೆಯ ಎಸ್.ವಿ. ಮೌಲ್ಯ (ದ್ವಿ), ಸೆಕ್ರೇಡ್ ಹಾರ್ಟ್ ಶಾಲೆಯ ಬಿ.ಎಂ. ವರ್ಷ (ತೃ) ಸ್ಥಾನ ಗಳಿಸಿದ್ದಾರೆ. ಪ್ರೌಢಶಾಲಾ ವಿಭಾಗದ ಕನ್ನಡ ಗೀತೆಗಳ ಸಮೂಹ ಗಾಯನ ಸ್ಪರ್ಧೆಯಲ್ಲಿ ಕುವೆಂಪು ಶಾಲೆಯ ಅಭಿಷಾ ತಂಡ (ಪ್ರ), ಜ್ಞಾನವಿಕಾಸ ಶಾಲೆಯ ಪ್ರತೀಕ್ಷಾ ತಂಡ (ದ್ವಿ), ಸೋಮವಾರಪೇಟೆ ಜೂನಿಯರ್ ಕಾಲೇಜು ತಂಡ (ತೃ) ಸ್ಥಾನಗಳಿಸಿತು.

ಕಾಲೇಜು ವಿಭಾಗದ ಪ್ರಬಂಧ ಸ್ಫರ್ಧೆಯಲ್ಲಿ ಸಂತ ಜೋಸೆಫರ ಕಾಲೇಜಿನ ಕೆ.ಎಂ. ಸುದರ್ಶನ್ (ಪ್ರ), ಕೆ.ಯು. ಮೌಲ್ಯ (ದ್ವಿ), ಚಾಣಕ್ಯ ಕಾಲೇಜಿನ ಡಿ.ಪಿ. ಮಿಂಚಿತ (ತೃ) ಸ್ಥಾನಗಳಿಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಬೇಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ್, ಪ್ರಾಧಿಕಾರದ ಕಾರ್ಯದರ್ಶಿ ಡಾ. ಸಂತೋಷ ಹಾನಗಲ್ಲ ಸೇರಿದಂತೆ ಇತರರು ಉಪಸ್ಥಿತರಿದ್ದು, ವಿಜೇತರಿಗೆ ಬಹುಮಾನ ವಿತರಿಸಿದರು.