ಚೆಯ್ಯಂಡಾಣೆ, ಜು. ೧೭: ಎಡಪಾಲದ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ತಂಡದಿAದ ಎಡಪಾಲದ ಕಡಂಗ ನಾಪೋಕ್ಲು ಮುಖ್ಯ ರಸ್ತೆಯ ಅಂಗನವಾಡಿ, ದರ್ಗಾ ಸಮೀಪ, ಬಸ್ ತಂಗುದಾಣ, ಹೊಳೆಯ ಬದಿಗಳಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿರುವುದನ್ನು ಮನಗಂಡು ಚರಂಡಿಯನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಿ ರಸ್ತೆ ಬದಿಯ ಕಾಡುಗಳನ್ನು ಕಡಿದು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭ ಎಸ್.ಕೆ.ಎಸ್.ಎಸ್.ಎಫ್. ವಿಖಾಯ ಕಾರ್ಯದರ್ಶಿ ಅಸ್ಲಂ, ಹನೀಫ, ಹ್ಯಾರಿಸ್ ಬಾಖವಿ, ಮನಾಫ್, ಅಫ್ರಿದ್, ಯಾಸಿನ್, ನಿಜಾಮ್, ಸಿದ್ದೀಕ್, ಸ್ವಲಾವುದ್ದೀನ್ ಹಾಜರಿದ್ದರು.