ಸೋಮವಾರಪೇಟೆ,ಜು.೧೭: ತಮ್ಮ ಸ್ವಂತ ಹಣದಿಂದ ಹೂಳು ತೆಗೆಸಿ ಕಾಯಕಲ್ಪ ನೀಡಿದ ಪಟ್ಟಣದ ಆನೆಕೆರೆ ಮತ್ತು ಯಡೂರು ಗ್ರಾಮದ ದೇವರ ಕೆರೆಗೆ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ ಅವರು ಬಾಗಿನ ಅರ್ಪಿಸಿ ಪೂಜೆ ಸಲ್ಲಿಸಿದರು.ಹೂಳು ತುಂಬಿದ್ದ ಈ ಎರಡೂ ಕೆರೆಗಳನ್ನು ರವೀಂದ್ರ ಅವರು ತಮ್ಮ ಸ್ವಂತ ಹಣದಿಂದ ಲಕ್ಷಾಂತರ ರೂಪಾಯಿ ವ್ಯಯಿಸಿ ಹೂಳು ತೆಗೆಸಿದ್ದು, ನಂತರದ ವರ್ಷಗಳಲ್ಲಿ ಎರಡೂ ಕೆರೆಗಳಲ್ಲಿ ನೀರಿನ ಶೇಖರಣೆ ಮತ್ತು ಜಲ ಅಧಿಕಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ತುಂಬಿರುವ ಆನೆಕೆರೆ ಮತ್ತು ಯಡೂರು ಕೆರೆಗಳಿಗೆ ಪೂಜೆ ಸಲ್ಲಿಸಿದ ರವೀಂದ್ರ ಅವರು ಬಾಗಿನ ಅರ್ಪಿಸಿದರು.

ಈ ಸಂದರ್ಭ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹೆಚ್.ಕೆ. ಗಂಗಾಧರ್, ಮಾಜೀ ಅಧ್ಯಕ್ಷ ಮೋಹನ್, ಮೋಟಾರ್ ಯೂನಿಯನ್ ಮಾಜೀ ಅಧ್ಯಕ್ಷ ಸಿ.ಸಿ. ನಂದ, ಕಾಂಗ್ರೆಸ್ ಮುಖಂಡ ನಂದಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.