ಕೂಡಿಗೆ, ಜು. ೧೭: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರಿನ ಶ್ರೀ ವಿನಾಯಕ ಯುವಕ ಸಂಘದ ವತಿಯಿಂದ ಚಿಕ್ಕತ್ತೂರಿನ ಆನೆ ಕೆರೆಗೆ ಬಾಗಿನ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಸರ್ವ ಧರ್ಮೀಯರು ಪಾಲ್ಗೊಂಡು ಕೆರೆಗೆ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು.
ಚಿಕ್ಕತ್ತೂರಿನ ಗ್ರಾಮದೇವತೆ ಶ್ರೀ ಕನ್ನಿಕಾ ಚೌಡೇಶ್ವರಿ ದೇವಾಲಯದಲ್ಲಿ ಪ್ರಥಮ ಪೂಜೆ ಸಲ್ಲಿಸಿದ ಬಳಿಕ ಕಳಸ ಹೊತ್ತ ಮುತ್ತೆöÊದೆಯರು ಮೆರವಣಿಗೆ ಮೂಲಕ ಸಾಗಿ ಬಂದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಮಂಗಳವಾದ್ಯ ಸಹಿತ ಗ್ರಾಮಸ್ಥರು ಮೆರವಣಿಗೆ ಮೂಲಕ ಕೆರೆದಂಡೆಗೆ ಆಗಮಿಸಿದರು.

ಪುಷ್ಪಾಲಂಕಾರ ಮಾಡಿ ಅಲಂಕರಿಸಲಾಗಿತ್ತು.
ಯುವಕ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಾತನಾಡಿ, ೨೦೧೮ರಲ್ಲಿ ಕೆರೆ ಭರ್ತಿಯಾದ ಬಳಿಕ ಇದೀಗ ಮತ್ತೆ ಕೆರೆ ತುಂಬಿ ಹರಿದಿದೆ. ಈ ನಿಟ್ಟಿನಲ್ಲಿ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರು ಸಮೃದ್ಧಿ ಕರುಣಿಸಲು ಪ್ರಾರ್ಥನೆ ಸಲ್ಲಿಸಿದರು ಎಂದು ತಿಳಿಸಿದರು.
ಯುವಕ ಸಂಘದ ಅಧ್ಯಕ್ಷ ಸುನಿಲ್, ಕಾರ್ಯದರ್ಶಿ ಕೃಷ್ಣಕಾಂತ್, ಖಜಾಂಚಿ ಶ್ರೀನಿವಾಸ್, ಮಾಜಿ ಅಧ್ಯಕ್ಷ ದಿನೇಶ್, ಸದಸ್ಯರಾದ ಗಣೇಶ್, ಕೃಷ್ಣ, ಶ್ರೀನಿವಾಸ್, ಪಾಪಣ್ಣ, ಕೂಡುಮಂಗಳೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ರಮೇಶ್, ಪಿಡಿಒ ಸಂತೋಷ್, ಸದಸ್ಯರಾದ ಭಾಗ್ಯರವಿ, ಫಿಲೋಮಿನಾ, ಖತಿಜಾ, ಮಣಿ, ಗಿರೀಶ್, ಚಂದ್ರು ಮೂಡ್ಲಿಗೌಡ, ಪಾರ್ವತಮ್ಮ, ಮಾಜಿ ಉಪ ಅಧ್ಯಕ್ಷ ಗುಜೇಂದ್ರ, ತಾ.ಪಂ. ಮಾಜಿ ಸದಸ್ಯ ಗಣೇಶ್, ಕುಮಾರಸ್ವಾಮಿ, ದೇವಾಲಯ ಸಮಿತಿಯ ಅಧ್ಯಕ್ಷ ಸಿ.ಕೆ. ನಾಗೇಶ್, ಯುವಕ ಸಂಘದ ಸದಸ್ಯರಾದ ಶಿವಕುಮಾರ್, ಹೇಮಂತ್ ಕುಮಾರ್, ವಿನು, ಯೋಗೇಶ್, ನಿರ್ಮಲ, ಪುಷ್ಪ ಮತ್ತಿತರರು ಇದ್ದರು. ಸಾರ್ವಜನಿಕರಿಗೆ ಅನ್ನಸಂತರ್ಪಣೆ ನೆರವೇರಿಸಲಾಯಿತು.