ನಾಪೋಕ್ಲು, ಜು. ೧೭: ‘ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಹಾಳಾಗುತ್ತಿದೆ ರಸ್ತೆ ಸೂಕ್ತ ಕ್ರಮಕ್ಕೆ ಒತ್ತಾಯ’ ಎಂಬ ಶೀರ್ಷಿಕೆಯಡಿ ಶಕ್ತಿ ಪತ್ರಿಕೆಯಲ್ಲಿ ತಾ. ೧೬ ರಂದು ಪ್ರಕಟಗೊಂಡಿದ್ದ ವರದಿ ಗಮನಿಸಿ ಎಚ್ಚೆತ್ತುಕೊಂಡು ಸಮಸ್ಯೆ ಸರಿಪಡಿಸಲಾಗಿದೆ. ನಾಪೋಕ್ಲು ರಸ್ತೆಗಳ ದುರಾವಸ್ಥೆಯ ಬಗ್ಗೆ ವರದಿ ಗಮನ ಸೆಳೆದಿತ್ತು. ತಕ್ಷಣ ಸ್ಪಂದಿಸಿದ ಲೋಕೋಪಯೋಗಿ ಇಲಾಖೆ ವರುಣನ ಅಬ್ಬರದ ನಡುವೆ ಭಾನುವಾರ ಮುಖ್ಯರಸ್ತೆಯ ಎರಡು ಬದಿಗಳಲ್ಲಿರುವ ಗಿಡಗಂಟಿಗಳನ್ನು ಕಡಿದು ಚರಂಡಿ ಸ್ವಚ್ಛಗೊಳಿಸಿದರು.