ಮುಳ್ಳೂರು, ಜು. ೧೭: ಸಮೀಪದ ಬ್ಯಾಡಗೊಟ್ಟ ಗ್ರಾ.ಪಂ.ನ ೨೦೨೨-೨೩ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ಗ್ರಾ.ಪಂ. ಆವರಣದಲ್ಲಿ ಗ್ರಾ.ಪಂ. ಅಧ್ಯಕ್ಷೆ ಲೀನಾ ಪರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.

ಸಭೆಯಲ್ಲಿ ಎಂಜಿಎನ್‌ಆರ್‌ಇಜಿ ಯೋಜನೆ ಹಾಗೂ ೧೫ನೇ ಹಣಕಾಸು ಯೋಜನೆಯ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಲಾಯಿತು. ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಸೋಮವಾರಪೇಟೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸ್ವಾಮಿ ಕಾರ್ಯನಿರ್ವಹಿಸಿದರು. ಲೆಕ್ಕ ಪರಿಶೋಧನಾ ಸಂಯೋಜನಾಧಿಕಾರಿ ದಿನೇಶ್ ವರದಿ ಮಂಡಿಸಿದರು.

ಗ್ರಾ.ಪಂ. ಉಪಾಧ್ಯಕ್ಷೆ ರೇಣುಕಾ ಮೇದಪ್ಪ, ಸದಸ್ಯರಾದ ಎಂ.ಎA. ಹನೀಫ್, ವಿನೋದಾ ಆನಂದ್, ಪಾವನ ಗಗನ್, ದಿನೇಶ್‌ಕುಮಾರ್, ಮೋಕ್ಷಿತ್ ರಾಜ್, ದೊಡ್ಡಯ್ಯ, ದಾಕ್ಷಾಯಿಣಿ, ಗ್ರಾ.ಪಂ. ಪಿಡಿೆÆÃ ಗಿರೀಶ್, ಕಾರ್ಯದರ್ಶಿ ದೇವರಾಜ್ ಪ್ರಮುಖರಾದ ಡಿ.ಆರ್. ವೇದಕುಮಾರ್, ಸುಲೈಮಾನ್, ಸಂಜೀವಿನ ಒಕ್ಕೂಟದ ಅಧ್ಯಕ್ಷೆ ಸರೋಜಮ್ಮ, ಕುಮಾರಸ್ವಾಮಿ, ಸುಬ್ರಮಣ್ಯ, ಯೋಗೇಶ್, ಆದಂ ಬ್ಯಾಡಗೊಟ್ಟ ಮುಂತಾದವರು ಸಭೆಯಲ್ಲಿ ಹಾಜರಿದ್ದರು.