ಸುಂಟಿಕೊಪ್ಪ, ಜು. ೧೮: ಲಯನ್ಸ್ ಸಂಸ್ಥೆಯು ತನ್ನದೆಯಾದ ತತ್ವ ಆದರ್ಶಗಳಿಂದ ಸಮಾಜ ಸೆೆÃವೆಯನ್ನು ಸಲ್ಲಿಸುತ್ತಿದ್ದು ಇದರಿಂದ ಸಂಸ್ಥೆಯು ಸಮಾಜದಲ್ಲಿ ತನ್ನದೆಯಾದ ಗೌರವವನ್ನು ಕಾಯ್ದುಕೊಂಡಿದೆ ಎಂದು ಎಂ.ಎ. ನಿರಂಜನ್ ಹೇಳಿದರು.
ಗುಂಡುಗುಟ್ಟಿ ಮಂಜುನಾಥಯ್ಯ ಸಹಕಾರ ಭವನದಲ್ಲಿ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯು ಸಾಮಾಜಿಕ ಕಾರ್ಯಚಟು ವಟಿಕೆಗಳಿಂದ ಬೆಳೆದಿದೆ. ಮುಂದಿನ ದಿನಗಳಲ್ಲಿ ಸಮಾಜ ಸೇವೆಯ ಜೊತೆಯಲ್ಲಿ ಯುವಕರನ್ನು ಸಂಘಟಿಸಿ ಆ ಮೂಲಕ ಸಮಾಜದ ಏಳಿಗೆಗೆ ಪಣ ತೊಡುವಂತೆ ಕರೆ ನೀಡಿದರು.
ನಂತರ ಅವರು ನೂತನ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಇದೇ ಸಂದರ್ಭ ನೂತನ ಅಧ್ಯಕ್ಷರಾದ ದಾಸಂಡ ಚಮನ್ ಚೆಟ್ಟಿಯಪ್ಪ ಅವರಿಗೆ ನಿಕಟಪೂರ್ವ ಅಧ್ಯಕ್ಷ ಕೋಟೆರ ಶಾಶ್ವತ್ ಅಧಿಕಾರ ಹಸ್ತಾಂತರಿಸಿದರು. ಕಾರ್ಯದರ್ಶಿಯಾಗಿ ಲಯನ್ ಶಶಾಂಕ್ ಶ್ರೀನಿವಾಸ್, ಖಜಾಂಚಿ ಯಾಗಿ ಲಯನ್ ದರ್ಶನ್. ನೂತನ ಸದಸ್ಯರಾಗಿ ಪ್ರೀತಂ ಪ್ರಭಾಕರ್, ಜಗ್ಗಂಡ ಅಪ್ಪಚ್ಚು ಆಯ್ಕೆಯಾದರು.