ಕುಶಾಲನಗರ, ಜು. ೧೭: ಸಮಾಜದಲ್ಲಿ ಧರ್ಮ ಶಿಕ್ಷಣದ ಕೊರತೆ ಸೃಷ್ಟಿಯಾಗಿದ್ದು, ಧರ್ಮಾಚರಣೆಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ ಎಂದು ವಕೀಲ ದೀಪಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು, ಸನಾತನ ಸಂಸ್ಥೆ ಆಶ್ರಯದಲ್ಲಿ ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಪೂರ್ಣಿಮೆ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರತಿಯೊಬ್ಬರು ಕೃತಿಗಳ ಮೂಲಕ ಧರ್ಮ ಶಿಕ್ಷಣವನ್ನು ಅಳವಡಿಸುವುದರೊಂದಿಗೆ ಸ್ವಾಸ್ಥö್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು. ಸನಾತನ ಸಂಸ್ಥೆಯ ಪ್ರಮುಖರಾದ ಸಂಗೀತ ಶಶಿಧರ್ ಮಾತನಾಡಿದರು.

ಜೀವನದಲ್ಲಿ ಧರ್ಮಾಚರಣೆ ಮತ್ತು ಅಧ್ಯಾತ್ಮಿಕ ಬಲದ ಅಗತ್ಯತೆ ಇದೆ, ಸಾಧನೆ ಮೂಲಕ ಅದನ್ನು ಅಂತರ್ಗತಗೊಳಿಸುವ ವಿಧಾನದ ಬಗ್ಗೆ ಅವರು ತಿಳಿಹೇಳಿದರು. ಈ ಸಂದರ್ಭ ಡಾ. ಅಠವಳೆ ಅವರ ಮಾರ್ಗದರ್ಶನದ ವೀಡಿಯೋ ಪ್ರದರ್ಶನಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆ ಪ್ರಕಟಿಸಿದ ಗ್ರಂಥಗಳ ಪ್ರದರ್ಶನ ಮತ್ತು ಸಾತ್ವಿಕ ವಸ್ತುಗಳ ಉತ್ಪಾದನೆಯ ಪ್ರದರ್ಶನಗಳನ್ನು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೂ ಮುನ್ನ ಸನಾತನ ಸಂಸ್ಥೆಯ ಭಕ್ತರಾಜ, ಮಹಾರಾಜರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು.