ಮಡಿಕೇರಿ, ಜು. ೧೮: ರೋಟರಿ ಜಿಲ್ಲೆ ೩೧೮೧ ರ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷರಾಗಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಅನಿಲ್ ಎಚ್.ಟಿ ನೇಮಕವಾಗಿದ್ದಾರೆ.
ಕೊಡಗು, ಮೈಸೂರು, ಮಂಗಳೂರು, ಚಾಮರಾಜನಗರ ಕಂದಾಯ ಜಿಲ್ಲೆಗಳನ್ನೊಳಗೊಂಡ ರೋಟರಿ ಜಿಲ್ಲೆ ೩೧೮೧ ನ ೮೯ ರೋಟರಿ ಕ್ಲಬ್ ಗಳ ವ್ಯಾಪಿಗೆ ಈ ರೋಟರಿ ವರ್ಷಕ್ಕೆ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷರನ್ನಾಗಿ ಅನಿಲ್ ಅವರನ್ನು ನೇಮಕ ಮಾಡಲಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ತಿಳಿಸಿದ್ದಾರೆ.
ಅಂರ್ರಾಷ್ಟಿçÃಯ ರೋಟರಿಯ ೧೧೭ ವರ್ಷಗಳ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಮಹಿಳಾ ಅಧ್ಯಕ್ಷೆಯಾಗಿ ಕೆನಡಾ ಮೂಲದ ಜೆನಿಫರ್ ಜೋನ್ಸ್ ಕಾರ್ಯನಿರ್ವಹಿಸುತ್ತಿದ್ದು. ಜೆನಿಫರ್ ಜೋನ್ಸ್ ಇದೇ ಮೊದಲ ಬಾರಿಗೆ ತಾ. ೨೦ ರಿಂದ ಪುಣೆಯಲ್ಲಿ ಲಕ್ಷö್ಯ ಹೆಸರಿನ ರಾಷ್ಟಿçÃಯ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಾಗಾರಕ್ಕೆ ರೋಟರಿ ಜಿಲ್ಲೆಯನ್ನು ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷರಾಗಿ ಪ್ರತಿನಿಧಿಸಲು ಅನಿಲ್ ಆಯ್ಕೆಯಾಗಿದ್ದಾರೆ.