ಗೋಣಿಕೊಪ್ಪಲು, ಜು. ೧೭: ಕಳೆದ ಕೆಲವು ತಿಂಗಳ ಹಿಂದೆ ಹುಣಸೂರು ಬಳಿ ಭೀಕರ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡಿದ್ದ ಮೂವರು ಕುಟುಂಬದ ಸದಸ್ಯರಿಗೆ ತಲಾ ರೂ. ೫ ಲಕ್ಷದಂತೆ ಪರಿಹಾರವನ್ನು ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ವಿತರಿಸಿದರು.

ಹುಣಸೂರು ಸಮೀಪದ ಬಂಧುಗಳ ವಿವಾಹ ಕಾರ್ಯಕ್ಕೆ ಜೀಪಿನಲ್ಲಿ ತೆರಳಿದ್ದ ಪಾಲಿಬೆಟ್ಟ, ಮೇಕೂರು, ಹೊಸ್ಕೇರಿ ಗ್ರಾಮದ ನಿವಾಸಿಗಳಾದ ಕೆ.ಬಿ. ಸಂತೋಷ್, ಟಿ.ಕೆ. ವಿನಿಧ ಹಾಗೂ ಬಿ.ಎಸ್. ದಯಾನಂದ ಕುಟುಂಬದ ಸದಸ್ಯರಿಗೆ ಕಾರ್ಮಿಕ ಇಲಾಖೆಯ ವತಿಯಿಂದ ಪರಿಹಾರ ವಿತರಿಸಲಾಯಿತು.

ಪರಿಹಾರ ವಿತರಣಾ ಸಂದರ್ಭ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಪುಲಿಯಂಡ ಬೋಪಣ್ಣ, ಕಾರ್ಮಿಕ ಅಧಿಕಾರಿ ಅನಿಲ್ ಬಗಟಿ, ಶಾಸಕರ ಆಪ್ತ ಸಹಾಯಕ ಮಲ್ಲಂಡ ಮಧು ದೇವಯ್ಯ ಉಪಸ್ಥಿತರಿದ್ದರು.