ನಾಲ್ಕನೇ ಬಾರಿ ಅಧ್ಯಕ್ಷೀಯ ಪದವಿಯನ್ನು ಗಳಿಸಿ ರಷ್ಯಾದ ಸಾರ್ವಭೌಮನಾಗಿ ಏಕ ಚಕ್ರಾಧಿಪತಿಯಂತೆ ಮೆರೆಯುತ್ತಿರುವ ವ್ಲಾಡಿಮೀರ್ ಪುಟೀನ್ ನೆರೆ ರಾಷ್ಟç ಉಕ್ರೇನ್‌ನ ವಿರುದ್ಧ ವ್ಯವಸ್ಥಿತ ಧಾಳಿಗೆ ೨೦೨೧ ಸೆಪ್ಟೆಂಬರ್‌ನÀಲ್ಲ್ಲಿ ನಿರ್ಧರಿಸಿದರು. ಇದಕ್ಕೂ ಮುನ್ನ ೨೦೧೪ ನವೆಂಬರ್‌ನಲ್ಲಿಯೂ ಧಾಳಿ ನಡೆಸಿ ಉಕ್ರೇನ್‌ನ ಹಲವು ಪ್ರಾಂತಗಳನ್ನು ವಶಪಡಿಸಿಕೊಂಡಿದ್ದರು.

ಪುಟೀನ್ ಪ್ರÀಥಮವಾಗಿ ಅಧ್ಯಕ್ಷ ಸ್ಥಾನವನ್ನು ೨೦೦೦ ರಲ್ಲಿ ಪಡೆದರು. ೨೦೦೦-೨೦೦೪ ರವರೆಗೆ ಮೊದಲ ಅಧ್ಯಕ್ಷೀಯ ಅವಧಿ ಅವರದ್ದಾಗಿದೆ.

೨೦೦೦ ಮೇ ೭ ರಂದು, ಮಾಜಿ ಅಧ್ಯಕ್ಷ ಬೋರಿಸ್ ಯೆಲ್ಟಿ÷್ಸನ್ ಅವರ ಜೊತೆಗೆ ವ್ಲಾಡಿಮಿರ್ ಪುಟಿನ್ ಅಧ್ಯಕ್ಷೀಯ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಅವರು ಹಣಕಾಸು ಸಚಿವ ಮಿಖಾಯಿಲ್ ಕಸ್ಯಾನೋವ್ ಅವರನ್ನು ಪ್ರಧಾನ ಮಂತ್ರಿಯಾಗಿ ನೇಮಿಸಿದರು.

ಪುಟಿನ್ ಜನಪ್ರಿಯತೆಗೆ ಮೊದಲ ಪ್ರಮುಖ ಸವಾಲು ೨೦೦೦ ಆಗಸ್ಟ್ನÀಲ್ಲಿ ಬಂದಿತು, ಅವರು ಕುರ್ಸ್ಕ್ ಜಲಾಂತರ್ಗಾಮಿ ದುರಂತವನ್ನು ತಪ್ಪಾಗಿ ನಿರ್ವಹಿಸಿದ್ದಾರೆ ಎಂದು ಸಾರ್ವತ್ರಿಕ ಟೀಕೆ ಕೇಳಿಬಂದಿತು . ಅಲ್ಲದೆ, ಅಂತಹ ಸಂದರ್ಭ ಪುಟಿನ್ ರಜೆಯಲ್ಲಿದ್ದು, ದುರಂತದ ಸಂದರ್ಭವೂ ರಜೆಯನ್ನು ಮೊಟಕುಗೊಳಿಸಲಿಲ್ಲ . ಮಾತ್ರವಲ್ಲ, ದುರಂತದ ಸ್ಥಳಕ್ಕೆ ಸಕಾಲದಲ್ಲಿ ತೆರಳಲಿಲ್ಲ. ಹಲವಾರು ದಿನಗಳನ್ನು ತೆಗೆದುಕೊಂಡ ಕಾರಣ ಆ ಟೀಕೆ ಹೆಚ್ಚಾಗಿತ್ತು. ಆದರೆ, ೨೦೦೦ ಮತ್ತು ೨೦೦೪ ರ ನಡುವೆ, ಪುಟಿನ್ ದೇಶದ ಬಡಸ್ಥಿತಿಯಲ್ಲ್ಲಿದ್ದ ರಷ್ಯಾ ದೇಶದ ಪುನರ್ನಿರ್ಮಾಣವನ್ನು ಪ್ರಾರಂಭಿಸಿದರು, ಈ ನಡುವೆ ಸ್ಪಷ್ಟವಾಗಿ ರಷ್ಯಾದ ಅಧಿಕಾರ ಪ್ರಭಾವವನ್ನು ಹೊಂದಿದ್ದ ಬಲಿಷ್ಠರ ಗುಂಪು ‘ಒಲಿಗಾರ್ಚ್’ ಗಳೊಂದಿಗೆ ಅನಿವಾರ್ಯವಾಗಿ ಪುಟಿನ್ ಅಧಿಕಾರದ ಹೊಂದಾಣಿಕೆ ಮಾಡಿಕೊಂಡರು. ಇದರಿಂದಾಗಿ ಸರ್ಕಾರದಲ್ಲಿ ವಿಶೇಷ ಅಧಿಕಾರದ ಅವಕಾಶ ಆ ಬಲಷ್ಠ ಗುಂಪಿಗೂ ಕಲ್ಪಿಸುವುದರೊಂದಿಗೆ ಪುಟಿನ್ ಪೂರ್ಣ ಸ್ವತಂತ್ರರಾಗಿ ಅಧಿಕಾರ ನಡೆಸಲು ಸಾಧ್ಯವಾಗಲಿಲ್ಲ. ೨೦೦೨ ಅಕ್ಟೋಬರ್‌ನÀಲ್ಲಿ ಮಾಸ್ಕೋ ಥಿಯೇಟರ್ ಒತ್ತೆಯಾಳು ಬಿಕ್ಕಟ್ಟು ಸಂಭವಿಸಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ವಿಶೇಷ ಪಡೆಗಳ ರಕ್ಷಣಾ ಕಾರ್ಯಾಚರಣೆಯಲ್ಲಿ ೧೩೦ ಒತ್ತೆಯಾಳುಗಳ ಸಾವು ಅಧ್ಯಕ್ಷ ಪುಟಿನ್ ಅವರ ಜನಪ್ರಿಯತೆಯನ್ನು ತೀವ್ರವಾಗಿ ಹಾನಿಗೊಳಿಸಿತು.

೨೦೦೩ ರಲ್ಲಿ, ಚೆಚೆನ್ಯಾದಲ್ಲಿ ಜನಾಭಿಪ್ರಾಯ ಸಂಗ್ರಹಣೆಯನ್ನು ನಡೆಸಲಾಯಿತು, ಚೆಚೆನ್ಯಾ ಗಣರಾಜ್ಯವು ರಷ್ಯಾದ ಒಂದು ಭಾಗವಾಗಿದೆ ಎಂದು ಘೋಷಿಸುವ ಹೊಸ ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು. ಮತ್ತೊಂದೆಡೆ, ಚೆಚೆನ್ಯಾ ಪ್ರದೇಶವು ಸ್ವಾಯತ್ತತೆಯನ್ನು ಪಡೆದುಕೊಂಡಿತು.

೨೦೦೪-೨೦೦೮: ಎರಡನೇ ಅಧ್ಯಕ್ಷೀಯ ಅವಧಿ

೨೦೦೪ ಮಾರ್ಚ್ ೧೪ ರಂದು ಪುಟಿನ್ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾದರು, ೭೧% ಮತಗಳನ್ನು ಪಡೆದರು.

೨೦೦೬ ಅಕ್ಟೋಬರ್ ೭ ರಂದು, ಅನ್ನಾ ಪೊಲಿಟ್ಕೊವ್ಸ÷್ಕಯಾ, ರಷ್ಯಾದ ಸೈನ್ಯದಲ್ಲಿನ ಭ್ರಷ್ಟಾಚಾರ ಮತ್ತು ಚೆಚೆನ್ಯಾದಲ್ಲಿ ಅದರ ನಡವಳಿಕೆಯನ್ನು ಬಹಿರಂಗಪಡಿಸಿದ ಪತ್ರಕರ್ತೆಯನ್ನು ಪುಟಿನ್ ಅವರ ಜನ್ಮದಿನದಂದು ಅವರ ಅಪಾರ್ಟ್ಮೆಂಟ್ ಕಟ್ಟಡದ ಲಾಬಿಯಲ್ಲಿ ಗುಂಡು ಹಾರಿಸಿ ಹತ್ಯೆ ಮಾಡಲಾಯಿತು. ಪೊಲಿಟ್ಕೊವ್ಸ÷್ಕಯಾ ಅವರ ಸಾವು ಅಂತರರಾಷ್ಟಿçÃಯ ಟೀಕೆಗೆ ಕಾರಣವಾಯಿತು,

೨೦೦೮-೨೦೧೨ ಎರಡನೇ ಬಾರಿ ಪ್ರಧಾನಿ

ರಷ್ಯಾ ಸಂವಿಧಾನದ ಅನ್ವಯ ಸತತವಾಗಿ ಮೂರು ಬಾರಿ ಏಕ ವ್ಯಕ್ತಿ ಅಧ್ಯಕ್ಷ ಗಾದಿಯನ್ನು ಏರುವಂತಿಲ್ಲ. ಒಂದು ಅವಧಿಗೆ ಅವರು ಬಿಡುವು ನೀಡಬೇಕು. ಹೀಗಾಗಿ ಪುಟಿನ್ ಅವರನ್ನು ಸತತ ಮೂರನೇ ಅವಧಿಗೆ ಅಧ್ಯಕ್ಷ ಸ್ಥಾನ ಏರದಂತೆ ಸಾಂವಿಧಾನಾತ್ಮಕವಾಗಿ ತಡೆಯಲಾಯಿತು . ಮೊದಲ ಉಪ ಪ್ರಧಾನ ಮಂತ್ರಿಯಾಗಿದ್ದ ಡಿಮಿಟ್ರಿ ಮೆಡ್ವೆಡೆವ್ ಅವರು ಅಧ್ಯಕ್ಷ ಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ೨೦೦೮ ರ ಮೇ೮ ರಂದು ಅಧಿಕಾರ ಬದಲಾಯಿಸುವ ಕಾರ್ಯಾಚರಣೆಯಲ್ಲಿ , ಅಧ್ಯಕ್ಷ ಸ್ಥಾನವನ್ನು ಮೆಡ್ವೆಡೆವ್ಗೆ ಹಸ್ತಾಂತರಿಸಿದ ಒಂದು ದಿನದ ನಂತರ, ಪುಟಿನ್ ತನ್ನ ರಾಜಕೀಯ ಪ್ರಾಬಲ್ಯವನ್ನು ಉಳಿಸಿಕೊಂಡು ರಷ್ಯಾದ ಪ್ರಧಾನ ಮಂತ್ರಿಯಾಗಿ ಎರಡನೇ ಬಾರಿ ನೇಮಕಗೊಂಡರು.

೨೦೧೨-೨೦೧೮: ಮೂರನೇ ಅಧ್ಯಕ್ಷೀಯ ಅವಧಿ

೨೪ ಸೆಪ್ಟೆಂಬರ್ ೨೦೧೧ ರಂದು, ಯುನೈಟೆಡ್ ರಷ್ಯಾ ಪಕ್ಷದ ಕಾಂಗ್ರೆಸ್ನಲ್ಲಿ ಮಾತನಾಡುವಾಗ, ಆಗ ಅಧ್ಯಕ್ಷರಾಗಿದ್ದ ಮೆಡ್ವೆಡೆವ್ ಅವರು ಪುಟಿನ್ ಅವರನ್ನು ಮತ್ತೆ ಮುಂದಿನ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಪಕ್ಷವನ್ನು ಶಿಫಾರಸು ಮಾಡುವುದಾಗಿ ಘೋಷಿಸಿದರು. ೨೦೧೨ ಮಾರ್ಚ್ ೪ ರಂದು, ಪುಟಿನ್ ೨೦೧೨ ರ ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಮೊದಲ ಸುತ್ತಿನಲ್ಲಿ ೬೩.೬% ಮತಗಳೊಂದಿಗೆ ಗೆದ್ದರು, ಒಂದು ಅವಧಿ ಬಿಡುವಿನ ಬಳಿಕ ಮತ್ತೆ ಮೂರನೇ ಬಾರಿಗೆ ಅಧ್ಯಕ್ಷ ಗಾದಿ ಹಿಡಿದರು.

೨೦೧೪ ರಲ್ಲಿಯೇ ಉಕ್ರೇನ್ ಸಮರ

೨೦೧೪ ನವೆಂಬರ್‌ನಲ್ಲಿ, ಉಕ್ರೇನಿಯನ್ ಮಿಲಿಟರಿಯು ಪೂರ್ವ ಉಕ್ರೇನ್ನ ಪ್ರತ್ಯೇಕತಾವಾದಿ-ನಿಯಂತ್ರಿತ ಭಾಗಗಳಿಗೆ ರಷ್ಯಾದಿಂದ ಪಡೆಗಳು ಮತ್ತು ಉಪಕರಣಗಳ ತೀವ್ರ ಚಲನೆಯಾಯಿತು. ಗುರುತು ಹಾಕದ ಮಿಲಿಟರಿ ಮಾನಿಟರ್ಗಳು ಮದ್ದುಗುಂಡುಗಳನ್ನು ಸಾಗಿಸುವ ವಾಹನಗಳು ಮತ್ತು ಸೈನಿಕರ ಮೃತ ದೇಹಗಳನ್ನು ಮಾನವೀಯತೆ-ಸಹಾಯದ ನೆಪದಲ್ಲಿ ಬೆಂಗಾವಲುಗಳ ಸೋಗಿನಲ್ಲಿ ರಷ್ಯಾವು-ಉಕ್ರೇನಿಯನ್ ಗಡಿಯನ್ನು ದಾಟುವುದನ್ನು ಪ್ರಾರಂಭಿಸಿತು. ೨೦೧೪ ರ ಫೆಬ್ರವರಿಯಲ್ಲಿ, ರಷ್ಯಾ ಉಕ್ರೇನಿಯನ್ ಪ್ರದೇಶದೊಳಗೆ ಹಲವಾರು ಮಿಲಿಟರಿ ಆಕ್ರಮಣಗಳನ್ನು ಮಾಡಿತು. ಯುರೋಮೈಡಾನ್ ಪ್ರತಿಭಟನೆಗಳು ಮತ್ತು ಆಗಿನ ಉಕ್ರೇನಿಯನ್ ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಅವರ ಪತನದ ನಂತರ, ಅಧಿಕೃತ ಯೋಧರ ಚಿಹ್ನೆಗಳಿಲ್ಲದ ರಷ್ಯಾದ ಸೈನಿಕರು ಉಕ್ರೇನಿಯನ್ ಪ್ರದೇಶದ ಕ್ರೆöÊಮಿಯಾದಲ್ಲಿನ ಆಯಕಟ್ಟಿನ ಸ್ಥಾನಗಳು ಮತ್ತು ಮೂಲ ಸೌಕರ್ಯಗಳ ನಿಯಂತ್ರಣವನ್ನು ಪಡೆದರು. ಜನಾಭಿಪ್ರಾಯ ಸಂಗ್ರಹಣೆಯ ನಂತರ ರಷ್ಯಾ ಕ್ರೆöÊಮಿಯಾ ಮತ್ತು ಸೆವಾಸ್ಟೊಪೋಲ್ ಅನ್ನು ಸ್ವಾಧೀನಪಡಿಸಿ ಕೊಂಡಿತು, ಇದರಲ್ಲಿ ಅಧಿಕೃತ ಫಲಿತಾಂಶಗಳ ಪ್ರಕಾರ, ಕ್ರೆöÊಮಿಯನ್ನರು ರಷ್ಯಾದ ಒಕ್ಕೂಟಕ್ಕೆ ಸೇರಲು ಮತ ಹಾಕಿದರು. ತರುವಾಯ, ಉಕ್ರೇನ್ನ ಡಾನ್ಬಾಸ್ ಪ್ರದೇಶದಲ್ಲಿ ರಷ್ಯಾದ ಪರ ಗುಂಪುಗಳಿAದ ಉಕ್ರೇನಿಯನ್ ರಾಡಾ ಶಾಸಕಾಂಗ ಕ್ರಮಗಳ ವಿರುದ್ಧದ ಪ್ರದರ್ಶನಗಳು ಉಲ್ಬಣಗೊಂಡವು. ಉಕ್ರೇನಿಯನ್ ಸರ್ಕಾರ ಮತ್ತು ಸ್ವಯಂ ಘೋಷಿತ ಡೊನೆಟ್ಸ÷್ಕ ಮತ್ತು ಲುಹಾನ್ಸ÷್ಕ ಪೀಪಲ್ಸ್ ರಿಪಬ್ಲಿಕ್ನ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿ ಪಡೆಗಳ ನಡುವಿನ ರುಸ್ಸೋ-ಉಕ್ರೇನಿಯನ್ ಯುದ್ಧ ಆರಂಭಗೊAಡಿತು. ೨೦೧೪ ರ ಆಗಸ್ಟ್ನಲ್ಲಿ, ರಷ್ಯಾದ ಮಿಲಿಟರಿ ವಾಹನಗಳು ಡೊನೆಟ್ಸ÷್ಕ ಒಬ್ಲಾಸ್ಟö್ನ ಹಲವಾರು ಸ್ಥಳಗಳಲ್ಲಿ ಗಡಿಯನ್ನು ದಾಟಿದವು. ರಷ್ಯಾದ ಸೇನೆಯ ಆಕ್ರಮಣವು ಸೆಪ್ಟೆಂಬರ್ ಆರಂಭದಲ್ಲಿ ಉಕ್ರೇನಿಯನ್ ಪಡೆಗಳ ಸೋಲಿಗೆ ಕಾರಣವಾಯಿತೆಂದು ಉಕ್ರೇನಿಯನ್ ಅಧಿಕಾರಿಗಳು ಗಮನಿಸಿದರು. ಆಗಲೂ ಪುಟಿನ್ ಅಧ್ಯಕ್ಷರಾಗಿದ್ದು ಅವರ ಹದ್ದುಗಣ್ಣು ಆಗಿನಿಂದಲೇ ಉಕ್ರೇನ್ ಆಡಳಿತದ ಮೇಲಿತ್ತು ಎಂಬದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ.

೨೦೧೫ ರ ಸೆಪ್ಟೆಂಬರ್ ೨೯ರಂದು ಪುಟಿನ್ ನ್ಯೂಯಾರ್ಕ್ ನಗರದಲ್ಲಿ ಆಗಿನ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮರನ್ನು ಭೇಟಿಯಾಗಿ ಸಿರಿಯನ್ ಅಂತರ್ಯುದ್ಧದಲ್ಲಿ ರಷ್ಯಾದ ಮಿಲಿಟರಿ ಹಸ್ತಕ್ಷೇಪವನ್ನು ಅಧಿಕೃತ ಗೊಳಿಸಿದರು, ಬಂಡಾಯ ಮತ್ತು ಜಿಹಾದಿಸ್ಟ್ ಗುಂಪುಗಳ ವಿರುದ್ಧ ಮಿಲಿಟರಿ ಸಹಾಯಕ್ಕಾಗಿ ವಿನಂತಿಸಿದರು.

ರಷ್ಯಾದ ಮಿಲಿಟರಿ ಚಟುವಟಿಕೆಗಳು ವೈಮಾನಿಕ ದಾಳಿಗಳು, ಕ್ರೂಸ್ ಕ್ಷಿಪಣಿ ದಾಳಿಗಳು ಸಿರಿಯನ್ ಸರ್ಕಾರವನ್ನು ವಿರೋಧಿಸುವ ಉಗ್ರಗಾಮಿ ಗುಂಪುಗಳ ವಿರುದ್ಧವಾಗಿತ್ತು ಎಂದು ಘೋಷಿಸಿದರು. ಪುಟಿನ್ ನಾಲ್ಕನೇ ಬಾರಿಗೆ ಮರು ಆಯ್ಕೆ

ಪುಟಿನ್ ೨೦೧೮ ರಲ್ಲಿ ಮತ್ತೆ ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ೭೬% ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದರು. ಅವರ ನಾಲ್ಕನೇ ಅವಧಿಯು ೨೦೧೮ರ ಮೇ ೭ರಲ್ಲಿ ಪ್ರಾರಂಭವಾಯಿತು, ಅವರ ಈ ಅವಧಿ ಇನ್ನೂ ೨೦೨೪ ರ ವರೆಗೆ ಇರುತ್ತದೆ. ೨೦೧೮ ರ ಮೇನಲ್ಲಿ ತಾವು ಅಧ್ಯಕ್ಷರಾದ ಅದೇ ದಿನ, ಪುಟಿನ್ ಹೊಸ ಸರ್ಕಾರವನ್ನು ರಚಿಸಲು ಆಗಿನ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ಅವರನ್ನು ಆಹ್ವಾನಿಸಿದರು.

೨೦೨೦ ರ ಜನವರಿ ೧೫ರಂದು, ಫೆಡರಲ್ ಅಸೆಂಬ್ಲಿಯಲ್ಲಿ ಪುಟಿನ್ ಅವರ ೨೦೨೦ರ ಅಧ್ಯಕ್ಷೀಯ ಭಾಷಣದ ನಂತರ ಮೆಡ್ವೆಡೆವ್ ಮತ್ತು ಅವರ ಸಂಪೂರ್ಣ ಸರ್ಕಾರ ಅವಧಿ ಮುಗಿದುದರಿಂದ ರಾಜೀನಾಮೆ ನೀಡಿತು. ಬಳಿಕ ಪುಟಿನ್ ದೇಶದ ಫೆಡರಲ್ ತೆರಿಗೆ ಸೇವೆಯ ಮುಖ್ಯಸ್ಥ ಮಿಖಾಯಿಲ್ ಮಿಶುಸ್ಟಿನ್ ಅವರನ್ನು ಪ್ರಧಾನ ಮಂತ್ರಿ ಹುದ್ದೆಗೆ ನಾಮನಿರ್ದೇಶನ ಮಾಡಿದರು. ಈ ನಡುವೆ ಅಧ್ಯಕ್ಷರಾದ ನಂತರ ಅವರ ರಾಜಕೀಯ ಅಧಿಕಾರವನ್ನು ವಿಸ್ತರಿಸ ಬಹುದಾದ ಪ್ರಮುಖ ಸಾಂವಿಧಾನಿಕ ತಿದ್ದುಪಡಿಗಳನ್ನು ಪುಟಿನ್ ಸೂಚಿಸಿದರು.

೨೦೨೦ ಜನವರಿ ೨೧ರಂದು, ಮಿಶುಸ್ಟಿನ್ ತನ್ನ ಕ್ಯಾಬಿನೆಟ್ ರಚನೆಯ ಕರಡು ರಚನೆಯನ್ನು ಪುಟಿನ್ ಅವರಿಗೆ ಪ್ರಸ್ತುತಪಡಿಸಿದರು. ಅದೇ ದಿನ, ಅಧ್ಯಕ್ಷರು ಕ್ಯಾಬಿನೆಟ್ ರಚನೆಯ ಸುಗ್ರೀವಾಜ್ಞೆಗೆ ಸಹಿ ಹಾಕಿದರು ಮತ್ತು ಉದ್ದೇಶಿತ ಮಂತ್ರಿಗಳನ್ನು ನೇಮಿಸಿದರು. ಹೀಗಾಗಿ ವ್ಲಾಟಿಮೀರ್ ಪುಟಿನ್ ಇಡೀ ಆಡಳಿತ ಯಂತ್ರವನ್ನು ಹತೋಟಿ ಯಲ್ಲಿರಿಸಿಕೊಳ್ಳುವಲ್ಲ್ಲಿ ಸಫಲರಾಗಿ ರಷ್ಯಾ ದೇಶದ ಸಾರ್ವಭೌಮ ಸ್ವತಂತ್ರರೆನಿಸಿಕೊAಡರು.

ಪುಟಿನ್ ರಷ್ಯಾದ ಸಂವಿಧಾನಕ್ಕೆ ಅಧಿಕೃತವಾಗಿ ತಿದ್ದುಪಡಿಗಳನ್ನು ಸೇರಿಸಲು ೨೦೨೦ ರ ಜುಲೈ ೩ ರಂದು ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದರು, ಇದು ಎರಡು ಹೆಚ್ಚುವರಿ ಆರು ವರ್ಷಗಳ ಅವಧಿಗೆ ಅವರು ಅಧಿಕಾರ ಚಲಾಯಿಸಲು ಅವಕಾಶ ಮಾಡಿಕೊಟ್ಟಿತು.

ಮತ್ತೆ ಉಕ್ರೇನ್ ಮೇಲೆ ಸವಾರಿಗೆ ತಯಾರಿ

೨೦೨೧ ಸೆಪ್ಟೆಂಬರ್‌ನÀಲ್ಲಿ, ಉಕ್ರೇನ್ ನ್ಯಾಟೋ ಪಡೆಗಳೊಂದಿಗೆ ಮಿಲಿಟರಿ ತರಬೇತಿಯನ್ನು ನಡೆಸಿತು. ಆಗಲೇ ಪುಟಿನ್ ಅವರು ಉಕ್ರೇನ್ ಮೇಲೆ ಆಕ್ರಮಣಕ್ಕೆ ತಯಾರಿ ನಡೆಸಿದರು. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್‌ನ ಈ ನಿರ್ಧಾರಕ್ಕೆ ಬೆದರದೆ ಸವಾಲೆಸೆದರು.

-‘‘ಚಕ್ರವರ್ತಿ’’