ಗೋಣಿಕೊಪ್ಪ, ಜು. ೧೬: ಪಟ್ಟಣದ ವರ್ತಕರಿಗೆ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ತಂಡ ಜಾಗೃತಿ ಮೂಡಿಸಿತು.

ಅಧ್ಯಕ್ಷೆ ಚೈತ್ರ ಬಿ. ಚೇತನ್ ನೇತೃತ್ವದಲ್ಲಿ ವ್ಯಾಪಾರ ಮಳಿಗೆಗಳಿಗೆ ತೆರಳಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧ ಮಾಡುವಂತೆ ಸೂಚಿಸಲಾಯಿತು. ಪ್ಲಾಸ್ಟಿಕ್ ಬಳಕೆ ಕಂಡುಬAದಲ್ಲಿ ದಂಡ ವಿಧಿಸುವುದರ ಜತೆಗೆ ಪರವಾನಗಿ ರದ್ದುಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಜೊತೆಗೆ ಸರ್ಕಾರಿ ತೆರಿಗೆ ಕಟ್ಟದೆ ಮತ್ತು ಪರವಾನಗಿ ಹೊಂದದೆ ಇರುವ ವ್ಯಾಪಾರ ಮಳಿಗೆಗಳನ್ನು ಮುಚ್ಚಿಸುವ ಮೂಲಕ ಕ್ರಮ ಕೈಗೊಂಡರು.

ಜಾಗೃತಿ ಅಭಿಯಾನದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಎನ್. ಪ್ರಕಾಶ್, ರಾಜೇಶ್ ಕೆ., ಹಕ್ಕಿಂ, ಸೌಮ್ಯ ಬಾಲು, ಗೀತಾ ಜಿ.ಕೆ., ವಿವೇಕ್ ರಾಯ್ಕರ್, ಪುಷ್ಪ ಮನೋಜ್, ರಾಮಕೃಷ್ಣ ಭಟ್, ಗೋಣಿಕೊಪ್ಪ ಪೊಲೀಸ್ ಠಾಣೆಯ ಎಎಸ್‌ಐ ನಂಜಪ್ಪ ಹಾಗೂ ಪಂಚಾಯಿತಿ ಸಿಬ್ಬಂದಿ ಇದ್ದರು.