ಮಡಿಕೇರಿ, ಜು. ೧೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ತ್ರೆöÊಮಾಸಿಕ ಪೊಂಗುರಿ ಸಂಚಿಕೆಯನ್ನು ಸಾಹಿತಿ ಕಲಾವಿದರಿಗೆ ಅವಕಾಶ ನೀಡುವ ಸಲುವಾಗಿ ಪ್ರಕಟಿಸುತ್ತಿದೆ. ಈಗಾಗಲೇ ಹಲವಾರು ಸಂಚಿಕೆಗಳು ಬಿಡುಗಡೆಯಾಗಿದೆ.
ಆದ್ದರಿಂದ ಎಲ್ಲಿಯೂ ಪ್ರಕಟವಾಗದ ತಮ್ಮ ಸ್ವಂತ ರಚನೆಯ ಕೊಡವ ಭಾಷೆಯಲ್ಲಿ ರಚಿಸಿದ ಕಥೆ, ಕವನ, ಚುಟುಕ, ವೈಚಾರಿಕ ಲೇಖನ, ನಗೆಹನಿ, ಪ್ರಬಂಧ, ಸಂಶೋಧನಾ ಲೇಖನಗಳನ್ನು ನುಡಿ ಫಾಂಟ್ನಲ್ಲಿ ಟೈಪ್ ಮಾಡಿ ಅಥವಾ ಕೈ ಬರಹದಲ್ಲಿ ಅಚ್ಚುಕಟ್ಟಾಗಿ ಬರೆದು ತಾ. ೩೦ ರೊಳಗೆ ಅಧ್ಯಕ್ಷರು/ ರಿಜಿಸ್ಟಾçರ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮ್ಯಾನ್ಸ್ ಕಾಂಪೌAಡ್, ಮಡಿಕೇರಿ ಈ ಕಚೇರಿಗೆ ತಲುಪಿಸಲು ಕೋರಿದೆ.
ಅರ್ಹವಾದುದ್ದನ್ನು ಮುಂದಿನ ಪೊಂಗುರಿ ಸಂಚಿಕೆಯಲ್ಲಿ ಪ್ರಕಟಿಸಲಾಗುವುದು. ಬರಹಗಾರರು ಬರೆದು ಕಳುಹಿಸುವಾಗ ಹೆಸರು ಮತ್ತು ಪೂರ್ಣ ವಿಳಾಸ ನಮೂದಿಸಬೇಕು ಮತ್ತು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಬ್ಯಾಂಕ್ ಖಾತೆಯ ವಿವರವುಳ್ಳ ಪಾಸ್ಬುಕ್ನ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಹೆಚ್ಚಿನ ಮಾಹಿತಿಗೆ ಅಕಾಡೆಮಿ ಕಚೇರಿ ದೂ. ೦೮೨೭೨-೨೨೯೦೭೪ ಯನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.