ಮಡಿಕೇರಿ, ಜು. ೧೭: ಗೋಣಿಕೊಪ್ಪ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಶನ್, ಕಾಲ್ಸ್ ವಿದ್ಯಾಸಂಸ್ಥೆಯ ೫ ವಿದ್ಯಾರ್ಥಿಗಳು ೧೦೦ ಮೀಟರ್ ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಿ - ನ್ಯಾಷನಲ್ಸ್ಗೆ ಆಯ್ಕೆಗೊಂಡಿದ್ದಾರೆ. ಬೆಂಗಳೂರಿನ ಸಾಯಿ ಶೂಟಿಂಗ್ ರೇಂಜ್‌ನಲ್ಲಿ ಕರ್ನಾಟಕ ಸ್ಟೇಟ್ ರೈಫಲ್ ಅಸೋಸಿಯೇಷನ್ ವತಿಯಿಂದ ನಡೆದ ಯೂತ್ ಹಾಗೂ ಸಬ್ ಯೂತ್ ಶೂಟಿಂಗ್ ಸ್ಪರ್ಧೆಯಲ್ಲಿ ಕಾಲ್ಸ್ ವಿದ್ಯಾರ್ಥಿಗಳಾದ ನೇಹಾ ಪ್ರಶಾಂತ್, ಅಭಿಷೇಕ್ ಎಸ್., ನಿಷ್ಮ ನೀಲಮ್ಮ, ಮುತ್ತಮ್ಮ ಹಾಗೂ ವಿದ್ಯಾ ಅರುಣ್ ಅವರುಗಳು ಭಾಗವಹಿಸಿ ಒಟ್ಟು ೪೦೦ ಪಾಯಿಂಟ್ಸ್ಗಳಿಗೆ ೩೭೧, ೩೬೯, ೩೬೫, ೩೫೭ ಹಾಗೂ ೩೫೦ ಪಾಯಿಂಟ್ಸ್ಗಳನ್ನು ಕ್ರಮವಾಗಿ ಪಡೆದು ಪ್ರಿ ನ್ಯಾಷನಲ್ಸ್ಗೆ ಆಯ್ಕೆಗೊಂಡಿದ್ದಾರೆ .