ವೀರಾಜಪೇಟೆ, ಜು. ೧೭: ಆಟೋ ಚಾಲಕರು ತಮ್ಮ ಕೆಲಸದೊಂದಿಗೆ ಸಮಾಜ ಸೇವೆಯಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಜೈಭಾರತ್ ಆಟೋ ಚಾಲಕರ ಸಂಘದ ಅಧ್ಯಕ್ಷ ಎನ್.ಎನ್ ಶಿವು ಹೇಳಿದರು.
ಹೆಗ್ಗಳದ ರಾಮನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಮಕ್ಕಳಿಗೆ ಸಂಘದ ವತಿಯಿಂದ ಕೊಡೆ, ನೋಟ್ ಪುಸ್ತಕ, ಸೋಪ್, ಪೇಸ್ಟ್ನಂತಹ ದಿನಬಳಕೆ ವಸ್ತುಗಳನ್ನು ನೀಡಿ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಮಕ್ಕಳು ಹಾಗೂ ಮಕ್ಕಳ ಪೋಷಕರು ಆರ್ಥಿಕ ಪರಿಸ್ಥಿತಿಯಿಂದ ಹಿಂದುಳಿದಿದ್ದಾರೆ. ಸಮಾಜ ಸೇವೆ ಮಾಡುವ ಮೂಲಕ ಅವರ ಕಷ್ಟಗಳಿಗೆ ಆಟೋ ಚಾಲಕರು ಸ್ಪಂದಿಸುತ್ತಿರುವುದು ಸಾಮಾಜಿಕ ಸೇವೆಗಳಿಗೆ ಹಿಡಿದ ಕೈಗನ್ನಡಿ ಎಂದು ಹೆಳೀದರು.ಸಂಘದ ಗೌರವ ಅಧ್ಯಕ್ಷ ತೋರೆರ ಪ್ರಭು ಕುಟ್ಟಪ್ಪ, ಉಪಾಧ್ಯಕ್ಷ ಅರ್ಜುನ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ದೀಪು, ಖಜಾಂಚಿ ಸೋಮಶೇಖರ್, ಗೌರವ ಸಲಹೆಗಾರ ಪ್ರವೀಣ್ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.