ಮಡಿಕೇರಿ, ಜು. ೧೭: ಮಡಿಕೇರಿ ತಾಲೂಕಿನ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಚುನಾವಣೆಯಲ್ಲಿ ಉಮೇದುವಾರರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಮರಗೋಡು ಭಾರತಿ ಪ್ರೌಢಶಾಲೆಯ ಪಿ.ಎಸ್. ರವಿಕೃಷ್ಣ, ಕಾರ್ಯದರ್ಶಿ ಸಿದ್ದಾಪುರ ಶಾಲೆಯ ಬಿ.ಎಸ್. ಪ್ರವೀಣ್, ಕೋಶಾಧಿಕಾರಿಯಾಗಿ ಚೆಟ್ಟಳ್ಳಿ ಪ್ರೌಢಶಾಲೆಯ ಜಿ.ಎಸ್. ಸತ್ಯನಾರಾಯಣ, ರಾಜ್ಯ ಪರಿಷತ್ ಸದಸ್ಯರಾಗಿ ಎನ್.ಕೆ. ಮೆಹಬೂಬ್ ಸಾಬ್ ಆಯ್ಕೆಗೊಂಡರು. ಚುನಾವಣಾಧಿಕಾರಿಯಾಗಿ ಮಡಿಕೇರಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಪಿ.ಕೆ. ನಳಿನಿ ಕಾರ್ಯನಿರ್ವಹಿಸಿದರು.