ಸಿದ್ದಾಪುರ, ಜು. ೧೭: ಸಿದ್ದಾಪುರ ಗ್ರಾ.ಪಂ. ವತಿಯಿಂದ ಸಂಜೀವಿನಿ ಒಕ್ಕೂಟಗಳ ನೂತನ ತರಬೇತಿ ಸಭಾಂಗಣ ಹಾಗೂ ಗ್ರಾ.ಪಂ. ನೂತನ ಕಟ್ಟಡದ ಭೂಮಿಪೂಜೆ ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷೆ ರೀನಾ ತುಳಸಿ ನೆರವೇರಿಸಿದರು. ನಂತರ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಸ್ತಿçÃಯರು ಆರ್ಥಿಕವಾಗಿ ಮುಂದುವರೆಯಲು ನಾನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಸ್ತಿçà ಸಬಲೀಕರಣದ ಧ್ಯೇಯದೊಂದಿಗೆ ಗ್ರಾ.ಪಂ.ಗೆ ಸೇರಿದ ಜಾಗದಲ್ಲಿ ರೂ. ೧೭.೬೫ ಲಕ್ಷ ವೆಚ್ಚದ ಸುಸಜ್ಜಿತ ಸಭಾಂಗಣ ನಿರ್ಮಿಸಿ ಸಿದ್ದಾಪುರ ಗ್ರಾಮ ವ್ಯಾಪ್ತಿಯ ಮಹಿಳಾ ಸಂಘಟನೆಗಳಿಗೆ ವಿವಿಧ ತರಬೇತಿಗಳಿಗಾಗಿ ಸಭಾಂಗಣ ಸದುಪಯೋಗಗೊಳ್ಳಲಿದೆ.

ಉದ್ಯೋಗ ಖಾತ್ರಿ ಯೋಜನೆಯ ಮೂಲಕ ನೂತನ ಕಟ್ಟಡದ ಕಾಮಗಾರಿಯು ನಡೆಯಲಿದ್ದು, ಅತಿ ಶೀಘ್ರದಲ್ಲಿ ಕಾಮಗಾರಿಯು ಪೂರ್ಣಗೊಳ್ಳಲಿದೆ. ಅಲ್ಲದೆ ಸಿದ್ದಾಪುರ ಗ್ರಾ.ಪಂ. ಕಟ್ಟಡವು ಶಿಥಿಲಗೊಂಡಿದೆ. ಈ ನಿಟ್ಟಿನಲ್ಲಿ ಪಂಚಾಯಿತಿಯ ವಿವಿಧ ಅನುದಾನದಲ್ಲಿ ನೂತನ ಸುಸಜ್ಜಿತ ಗ್ರಾ.ಪಂ. ಕಟ್ಟಡದ ಕಾಮಗಾರಿಯು ನಡೆಯಲಿದೆ. ಹಳೆಯ ಕಟ್ಟಡವನ್ನು ನೆಲಸಮಗೊಳಿಸುವ ಹಿನ್ನೆಲೆಯಲ್ಲಿ ಇದೀಗ ತಾತ್ಕಾಲಿಕವಾಗಿ ಪಂಚಾಯಿತಿ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಗೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಸಿದ್ದಾಪುರ ಗ್ರಾ.ಪಂ. ಪಿಡಿಓ ಮನ್ ಮೋಹನ್, ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕುಮಾರ್, ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕ ಸೋಮಶೇಕರ್, ಗ್ರಾ.ಪಂ. ಕಾರ್ಯದರ್ಶಿ ಮೋಹನ್, ಗ್ರಾ.ಪಂ. ಸದಸ್ಯರಾದ ದೇವಜಾನು, ಪ್ರೇಮ, ಆನಂದ, ಪೂರ್ಣಿಮ, ಪ್ರಮೀಳ, ಹಸನ್, ಜಯಂತ್ ಇನ್ನಿತರರು ಹಾಜರಿದ್ದರು.