ವೀರಾಜಪೇಟೆ, ಜು. ೧೫: ಕೊಡಗು ಪುಟ್ಟ ಜಿಲ್ಲೆಯಾದರು ಸರಕಾರ ವಕೀಲರ ಸಂಘದ ಮನವಿಗೆ ಸ್ಪಂದಿಸಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿಗೆ ವೀರಾಜಪೇಟೆಯಲ್ಲಿ ಎ.ಸಿ ಕೋರ್ಟ್ ಪ್ರಾರಂಭಿಸಿರುವುದರಿAದ ಎರಡು ತಾಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದು ಕೊಡಗು ಉಪ ವಿಭಾಗಾಧಿಕಾರಿ ಡಾ. ಯತೀಶ್ ಉಲ್ಲಾಳ ಹೇಳಿದರು.

ವೀರಾಜಪೇಟೆ ಮಿನಿ ವಿಧಾನ ಸೌಧ ಸಭಾಂಗಣದಲ್ಲಿ ನೂತನ ಎಸಿ ಕೋರ್ಟ್ ಪ್ರ‍್ರಾರಂಭದ ಮೊದಲ ದಿನ ಆಗಮಿಸಿದ್ದ ಉಪ ವಿಭಾಗಾಧಿಕಾರಿಗೆ ವಕೀಲರ ಸಂಘ ಸ್ವಾಗತಿಸಿತ್ತು. ಬಳಿಕ ಉಪವಿಭಾಗಾಧಿಕಾರಿ ಮಾತನಾಡಿ, ಸೋಮವಾರ ಮತ್ತು ಗುರುವಾರ ಮಡಿಕೇರಿಯಲ್ಲಿ ಹಾಗೂ ವೀರಾಜಪೇಟೆ ಮತ್ತು ಪೊನ್ನಂಪೇಟೆ ವ್ಯಾಪ್ತಿಗೆ ಪ್ರತಿ ಬುಧವಾರ ವೀರಾಜಪೇಟೆಯಲ್ಲಿ ಕೋರ್ಟ್ ಕಾರ್ಯನಿರ್ವಹಿಸಲಿದ್ದು ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದರು.

ವಕೀಲರ ಸಂಘದ ಅಧ್ಯಕ್ಷ ಐ.ಆರ್.ಪ್ರಮೋದ್ ಮಾತನಾಡಿ, ವೀರಾಜಪೇಟೆಯಲ್ಲಿ ಎಸಿ ನ್ಯಾಯಾಲಯ ಪ್ರಾರಂಭಿಸಿರುವುದರಿAದ ಗ್ರಾಮೀಣ ಭಾಗದ ಜನರು ದೂರದ ಮಡಿಕೇರಿಗೆ ಹೋಗಿ ಬರುವುದು ತಪ್ಪಿದಂತಾಗಿದೆ ಎಂದರು.

ವೀರಾಜಪೇಟೆ ತಾಲೂಕು ತಹಶೀಲ್ದಾರ್ ಆರ್.ಯೋಗಾನಂದ, ಅಪರ ಸರಕಾರಿ ಅಭಿಯೋಜಕರಾದ ಅನಿತಾ, ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ದಿನೇಶ್, ಉಪಸ್ಥಿತರಿದ್ದರು. ವಕೀಲರ ಸಂಘದ ಖಜಾಂಚಿ ವಿ.ಜಿ.ರಾಕೇಶ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ವಕೀಲರುಗಳು ಹಾಜರಿದ್ದರು.