ಮಡಿಕೇರಿ,ಜು.೧೫: ಹಣದ ಆಸೆಗಾಗಿ ನಿಸರ್ಗದತ್ತ ಸ್ವರ್ಗದಂತಿರುವ ಭೂಮಿಯ ಗರ್ಭವನ್ನು ಬಗೆದು ಭೂ ಒಡಲೊಳಗಿರುವ ಬೆಲೆ ಬಾಳುವ ಹರಳು ಕಲ್ಲು ದಂಧೆ ನಡೆದು ಆರು ತಿಂಗಳು ಕಳೆದರೂ ಇನ್ನೂ ಕೂಡ ಅರಣ್ಯ ಇಲಾಖೆ ವತಿಯಿಂದ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ., ಪ್ರಕರಣದಲ್ಲಿ ಆರೋಪಿಗಳೆಂದು ಮೊಕದ್ದಮೆ ದಾಖಲಾಗಿದ್ದರೂ ಇದುವರೆಗೂ ಯಾರನ್ನೂ ಬಂಧಿಸಲಾಗಿಲ್ಲ., ಬದಲಿಗೆ ಮೊಕದ್ದಮೆ ಎದುರಿಸುತ್ತಿರುವವರೆಲ್ಲರೂ ಜಾಮೀನು ಪಡೆದುಕೊಂಡು ರಾಜಾರೋಷವಾಗಿ ಸಮಾಜದಲ್ಲಿ ‘ಗಣ್ಯವ್ಯಕ್ತಿ’ಗಳಾಗಿ ತಿರುಗಾಡಿಕೊಂಡಿದ್ದಾರೆ.., ಇನ್ನು ಮುಂದಕ್ಕೆ ಹರಳು ಕಲ್ಲು ದಂಧೆ ನಡೆಯದಂತೆ ಕಣ್ಗಾವಲು ಇರಿಸುವ ಸಲುವಾಗಿ ಸಿಸಿ ಕ್ಯಾಮರಾ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆಯಾದರೂ ಇನ್ನೂ ಕೂಡ ಅದು ಕೈಗೂಡಿಲ್ಲ., ಕ್ಯಾಮರಾ ಅಳವಡಿಸಲು ತಂದಿರಿಸಲಾಗಿರುವ ಕಬ್ಬಿಣದ ಕಂಬಗಳು ತುಕ್ಕು ಹಿಡಿಯುವ ಸ್ಥಿತಿಯಲ್ಲಿವೆ..!

ಪಟ್ಟಿಘಾಟ್ ರಕ್ಷಿತಾರಣ್ಯ ವ್ಯಾಪ್ತಿಯ ಭಾಗಮಂಡಲ ಅರಣ್ಯ ವಲಯದ, ತೊಡಿಕಾನ ಉಪ ವಲಯದ ತಣ್ಣಿಮಾನಿ ಗ್ರಾಮಕ್ಕೊಳಪಡುವ ನಿಶಾನೆ ಮೊಟ್ಟೆಯ ಅರಣ್ಯ ಇಲಾಖಾ ಭದ್ರತಾ ಕ್ಯಾಂಪ್(ಟೆAಟ್) ಬಳಿಯಲ್ಲಿಯೇ ಬೆಲೆ ಬಾಳುವ ಕೆಂಪು ಹರಳುಕಲ್ಲು ದಂಧೆ ನಡೆದಿದೆ. ದಂಧೆ ನಡೆದಿರುವ ಬಗ್ಗೆ ಕಳೆದ ಜನವರಿ ೨ರಂದು ‘ಶಕ್ತಿ’ ವಿವರವಾದ ವರದಿ ಮೂಲಕ ಗಮನ ಸೆಳೆದ ಬಳಿಕ ಸಹಾಯಕ ವಲಯ ೩ಮೂರನೇ ಪುಟಕ್ಕೆ

(ಮೊದಲ ಪುಟದಿಂದ) ಅರಣ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳು ಎರಡು, ಮೂರು ಬಾರಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದರೂ ಗಣಿಗಾರಿಕೆ ನಡೆದ ಸ್ಥಳ ಪತ್ತೆಯಾಗಿರಲಿಲ್ಲ. ನಂತರದಲ್ಲಿ ಪಶ್ಚಿಮಘಟ್ಟ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರ ಸೂಚನೆ ಮೇರೆಗೆ ಉಪ ಸಂರಕ್ಷಣಾಧಿಕಾರಿ ಪೂವಯ್ಯ ಅವರ ನಿರ್ದೇಶನದಂತೆ ಅರಣ್ಯ ಸಂಚಾರಿ ದಳದ ಉಪಸಂರಕ್ಷಣಾಧಿಕಾರಿ ಸೀಮಾ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದಾಗ ಅರಣ್ಯ ಕ್ಯಾಂಪ್ ಬಳಿಯಲ್ಲಿಯೇ ಭಾರೀ ಹೊಂಡ ತೋಡಿ ಗಣಿಗಾರಿಕೆ ನಡೆಸಿರುವದು ಪತ್ತೆಯಾಗಿತ್ತು. ಈ ಸಂಬAಧ ಕರ್ತವ್ಯ ಲೋಪದಡಿ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಓರ್ವ ಉಪ ವಲಯ ಅರಣ್ಯಾಧಿಕಾರಿ ಹಾಗೂ ಅರಣ್ಯ ರಕ್ಷಕನನ್ನು ಅಮಾನತ್ತುಗೊಳಿಸಲಾಗಿತ್ತು. ಪ್ರಕರಣಕ್ಕೆ ಸಂಬAಧಿಸಿದAತೆ ಎಂಟು ಮಂದಿ ಆರೋಪಿಗಳ ವಿರುದ್ಧ ಆಗಿನ ವಲಯ ಅರಣ್ಯಾಧಿಕಾರಿ ದೇವರಾಜು ಅವರು ಮೊಕದ್ದಮೆ ದಾಖಲಿಸಿದ್ದರು. ಆದರೆ ಇದುವರೆಗೂ ಆರೋಪಿಗಳ ಬಂಧನವಾಗಲೀ, ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಕೂಡ ಸಲ್ಲಿಕೆಯಾಗಿಲ್ಲ. ಬದಲಿಗೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂಬ ನೆಪದ ಕಾರಣ ಮಾತ್ರ ನೀಡಲಾಗಿತ್ತು. ಇದರಿಂದಾಗಿ ಆರೋಪಿಗಳು ಮುಂಜಾಗ್ರತಾ ಜಾಮೀನು ಪಡೆದುಕೊಳ್ಳಲು ಸದವಕಾಶ ಮಾಡಿಕೊಟ್ಟಂತಾಗಿದೆ..!

ಅಳವಡಿಕೆಯಾಗದ ಕ್ಯಾಮರಾ..!

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರವಿ ಕುಶಾಲಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ಗಣಿಕಾರಿಕೆ ನಡೆಸಲಾದ ಗುಂಡಿಯನ್ನು ಮುಚ್ಚುವಂತೆ ಹಾಗೂ ಇನ್ನು ಮುಂದಕ್ಕೆ ಗಣಿಗಾರಿಕೆ ನಡೆಯದಂತೆ ನಿಗಾ ವಹಿಸುವ ಸಲುವಾಗಿ ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಗಣಿಗಾರಿಕೆ ನಡೆದ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ ಅವರು ಕ್ರಮ ಕೈಗೊಂಡಿದ್ದರು. ಈ ಸಲುವಾಗಿ ಬೆಟ್ಟದ ತುದಿಗೆ ಕಬ್ಬಿಣದ ಕಂಬ, ವಯರ್‌ಗಳನ್ನು ಹೊತ್ತೊಯ್ದು ಕೆಲವು ಕಂಬಗಳನ್ನು ಗುಂಡಿ ತೆಗೆದು ನಿಲ್ಲಿಸಲಾಗಿದೆ. ಇನ್ನೂ ಕೆಲವು ಕಂಬಗಳನ್ನು ಬೆಟ್ಟದ ಮೇಲೆ ರಾಶಿ ಹಾಕಲಾಗಿದೆ. ಮೊದಲೇ ಮಳೆನಾಡು ಎಂದೇ ಹೆಸರು ಗಳಿಸಿರುವ ಭಾಗಮಂಡಲ ವ್ಯಾಪ್ತಿಯ ಮಳೆ, ಗಾಳಿಗೆ ಈ ಕಂಬಗಳು ತುಕ್ಕು ಹಿಡಿಯಲಾರಂಭಿಸಿವೆ. ಇನ್ನೂ ವಯರ್‌ಗಳನ್ನು ಅಲ್ಲೇ ರಾಶಿ ಹಾಕಲಾಗಿದ್ದು, ಅವುಗಳು ಮಳೆಯಲ್ಲಿ ನೆನೆದು ಇನ್ನು ಮುಂದಕ್ಕೆ ಬಳಕೆಗೆ ಬರುತ್ತವೆಯೋ ಎಂಬದೇ ಸಂಶಯವಾಗಿದೆ..!

ನಿರ್ಲಕ್ಷö್ಯವೋ., ಒತ್ತಡವೋ..?

ದಕ್ಷಿಣ ಕನ್ನಡ ಜಿಲ್ಲೆಗೆ ಒತ್ತಿನಲ್ಲಿರುವ ಕೊಡಗು ಜಿಲ್ಲಾ ಗಡಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಗಡಿಭಾಗಗಳಲ್ಲಿ ನಿರಂತರವಾಗಿ ಅಕ್ರಮ ಹರಳುಕಲ್ಲು ದಂಧೆ ನಡೆಯುತ್ತಿರುವದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿದಿರುವ ವಿಚಾರವೇ. ಕಾನೂನು ಪ್ರಕಾರ ಅರಣ್ಯ ಪ್ರದೇಶದಲ್ಲಿ ಹರಳುಕಲ್ಲು ಗಣಿಗಾರಿಕೆಗೆ ಅವಕಾಶವಿಲ್ಲದಿದ್ದರೂ ಅಧಿಕಾರಿಗಳ, ಕೆಲವು ಜನಪ್ರತಿನಿಧಿಗಳ, ಸಾರ್ವಜನಿಕ ಮುಖಂಡರ ಬೆಂಬಲದೊAದಿಗೆ ಅಕ್ರಮ ಗಣಿಗಾರಿಕೆ ನಡೆಯುತ್ತಲೇ ಇದೆ. ಪ್ರಾಣಕ್ಕೆ ಕುತ್ತು ತರುವಂತಹ ಗಣಿಗಾರಿಕೆಯಲ್ಲಿ ನಿರತರಾಗಿರುವವರು ಹೊರ ಜಿಲ್ಲೆಯ ಕಾರ್ಮಿಕರ ಸಹಕಾರದೊಂದಿಗೆ ಈ ಕಾನೂನು ಬಾಹಿರ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಪಿಗಳು ಯಾರೆಂದು ಅಧಿಕಾರಿಗಳಿಂದ ಹಿಡಿದು ಜನಪ್ರತಿನಿಧಿಗಳಿಗೂ ಗೊತ್ತಿದ್ದರೂ ಯಾರ ಮೇಲೆಯೂ ಯಾವದೇ ರೀತಿಯ ಕ್ರಮಗಳಾಗುತ್ತಿಲ್ಲ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷö್ಯವೋ ಅಥವಾ ಅಧಿಕಾರಿಗಳಿಗೆ ಯಾರಿಂದಾದರೂ ಒತ್ತಡವಿದೆಯೋ ಎಂಬದೇ ಯಕ್ಷ ಪ್ರಶ್ನೆ..!? ?ಕುಡೆಕಲ್ ಸಂತೋಷ್