ಮಡಿಕೇರಿ, ಜು. ೧೫: ಜುಲೈಯಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿರುವ, ಪವಿತ್ರ ಕ್ಷೇತ್ರವೂ ಆಗಿರುವ ತಲಕಾವೇರಿಗೆ ಈ ಸಾಲಿನಲ್ಲಿ ಈತನಕ ೧೨೬ ಇಂಚಿನಷ್ಟು ಮಳೆಯಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಇಲ್ಲಿ ೧೧.೨೦ ಇಂಚಿನಷ್ಟು ಭಾರೀ ಮಳೆಯಾಗಿದೆ. ತಲಕಾವೇರಿ ಸನಿಹದ ಭಾಗಮಂಡಲ ವಿಭಾಗದಲ್ಲೂ ಈಗಾಗಲೇ ೧೦೬ ಇಂಚಿಗೂ ಅಧಿಕ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗುವ ಸೂರ್ಲಬ್ಬಿ ವಿಭಾಗದಲ್ಲೂ ೧೦೦ ಇಂಚಿಗೂ ಅಧಿಕ ಮಳೆ ಈಗಾಗಲೇ ಸುರಿದಿದೆ. ಶಾಂತಳ್ಳಿ, ಬಿರುನಾಣಿ, ಇರ್ಪು- ಬೀರುಗ ವ್ಯಾಪ್ತಿಯಲ್ಲೂ ಮಳೆ ೧೦೦ ಇಂಚು ತಲುಪುವತ್ತ ಸಾಗಿದೆ. ನಾಪೋಕ್ಲು, ಮುಕ್ಕೋಡ್ಲು, ತೆರಾಲು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಈತನಕ ಭಾರೀ ಮಳೆಯಾಗಿದೆ. ಅದರಲ್ಲೂ ಕಳೆದ ಮೂರು - ನಾಲ್ಕು ದಿನಗಳಲ್ಲಿ ಗಾಳಿ ಸಹಿತವಾಗಿ ನಿರಂತರವಾಗಿ ಮಳೆಯಾಗುತ್ತಿದೆ.

ಈ ತನಕದ ಗಾಳಿ - ಮಳೆಯಿಂದಾಗಿ ವ್ಯಾಪಕ ಕಷ್ಟ-ನಷ್ಟಗಳು ಉಂಟಾಗಿವೆ. ಬಹುತೇಕ ಗ್ರಾಮೀಣ ಭಾಗದಲ್ಲಿ ದಿನಗಟ್ಟಲೆಯಿಂದ ವಿದ್ಯುತ್ ಸಂಪರ್ಕ ಇಲ್ಲದಂತಾಗಿದೆ. ವಿದ್ಯುತ್ ಇಲ್ಲದೆ ದೂರವಾಣಿ, ಮೊಬೈಲ್ ಸೇವೆಯೂ ಸ್ಥಗಿತಗೊಂಡಿದ್ದು, ಜನರು ತೀರಾ ಸಮಸ್ಯೆ ಎದುರಿಸುತ್ತಿದ್ದಾರೆ.

ತಾ.೧೪ರಂದೂ ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೩.೩೮ ಇಂಚಿನಷ್ಟು ಧಾರಾಕಾರ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ನಾಲ್ಕು ಇಂಚಿಗೂ ಅಧಿಕ ಮಳೆಯಾಗಿದ್ದರೆ, ವೀರಾಜಪೇಟೆಯಲ್ಲಿ ೩.೩೩, ಸೋಮವಾರಪೇಟೆಯಲ್ಲಿ ೨.೭೪ ಇಂಚು ಮಳೆ ಬಿದ್ದಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ತಲಕಾವೇರಿಗೆ ೧೧.೨೦ ಇಂಚು, ಭಾಗಮಂಡಲ ೮ ಇಂಚು ಮಳೆ ಸುರಿದಿದೆ. ಹುದಿಕೇರಿ ಹೋಬಳಿ ಯಲ್ಲೂ ೮ ಇಂಚಿನಷ್ಟು ಧಾರಾಕಾರ ಮಳೆಯಾಗಿದೆ. ಉಳಿದಂತೆ ಮಡಿಕೇರಿ ಹೋಬಳಿ ೨.೩೬, ನಾಪೋಕ್ಲು ೪.೨೯, ಸಂಪಾಜೆಯಲ್ಲಿ ೧.೬೬ ಇಂಚು ಮಳೆಯಾಗಿದೆ. ವೀರಾಜಪೇಟೆ ಕ.ಸ.ಬಾ. ೨.೧೮, ಶ್ರೀಮಂಗಲ ೩.೪೦, ಪೊನ್ನಂಪೇಟೆ ೩.೩೮, ಅಮ್ಮತ್ತಿ ೨.೩೨, ಬಾಳೆಲೆ ಹೋಬಳಿಯಲ್ಲಿ ೧.೨೦ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ೨.೯೪, ಶನಿವಾರಸಂತೆ ೧.೫೨, ಶಾಂತಳ್ಳಿ ೭.೧೨, ಕೊಡ್ಲಿಪೇಟೆ ೩.೬೮, ಸುಂಟಿಕೊಪ್ಪ ೧ ಇಂಚು ಮಳೆಯಾಗಿದೆ.

ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ನೀರಿನ ಮಟ್ಟ ಯಥಾಸ್ಥಿತಿಯಲ್ಲಿದೆ. ಬಹಳಷ್ಟು ಕಡೆಗಳಲ್ಲಿ ಮರಬಿದ್ದು ಸಂಚಾರಕ್ಕೆ ಅಡಚಣೆಯಾಗಿದ್ದರೆ ಮನೆಗಳಿಗೆ ಹಾನಿ, ವಿದ್ಯುತ್ ವ್ಯವಸ್ಥೆಗೆ ಧಕ್ಕೆ, ಬರೆ ಕುಸಿತದಂತಹ ಪ್ರಕರಣಗಳು ಇನ್ನೂ