ಶ್ರೀಮಂಗಲ, ಜು. ೧೫: ಕುಲಮಾತೆ ಕಾವೇರಿ ಹಾಗೂ ಕೊಡವ ಜನಾಂಗವನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿರುವುದನ್ನು ಖಂಡಿಸಿ ಕೊಡವ ಸಮಾಜಗಳ ಒಕ್ಕೂಟದ ನೇತೃತ್ವದಲ್ಲಿ ಎಲ್ಲಾ ಕೊಡವ ಸಮಾಜಗಳು, ಕೊಡವ ಸಂಘಟನೆಗಳ ಬೆಂಬಲದೊAದಿಗೆ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯನ್ನು ತಾ. ೨೨ ಬದಲಾಗಿ ೨೯ ರಂದು ಆಯೋಜಿಸಲು ನಿರ್ಧರಿಸಲಾಗಿದೆ.
ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಶುಕ್ರವಾರ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಸಿದ ಪೊನ್ನಂಪೇಟೆ ತಾಲೂಕಿನ ಎಲ್ಲಾ ಕೊಡವ ಸಮಾಜ ಹಾಗೂ ಕೊಡವ ಸಂಘಟನೆಗಳು ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ೯ ಕೊಡವ ಸಮಾಜಗಳು ಮತ್ತು ವಿವಿಧ ಕೊಡವ ಸಂಘಟನೆಗಳು ಇತರ ಪ್ರಮುಖರು ಭಾಗವಹಿಸಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಅಪ್ಪಚಟ್ಟೋಳಂಡ ಮನು ಮುತ್ತಪ್ಪ ಸಾಮಾಜಿಕ ಜಾಲತಾಣದಲ್ಲಿ ಕೊಡವರನ್ನು ಮತ್ತು ಕಾವೇರಿ ಮಾತೆಯನ್ನು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಅವಹೇಳನ ಮಾಡಲಾಗುತ್ತಿದೆ. ಕೊಡವರು ರಾಜಕೀಯ ಪಕ್ಷದ ಸಮಾವೇಶ, ಕೊಡವ ಸಾಂಸ್ಕöÈತಿಕ ಮೇಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಆದರೆ, ಕೊಡವರ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಸಿಡಿದೇಳುವ ಅಗತ್ಯತೆ ಇದೆ. ರಾಜಕೀಯ ರಹಿತವಾಗಿ ಹಮ್ಮಿಕೊಂಡಿರುವ ಈ ಪ್ರತಿಭಟನೆಗೆ ಸಮುದಾಯದ ಎಲ್ಲರೂ ಭಾಗವಹಿಸುವಂತೆ ಕರೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಡೆಪAಡ ಸುಜಾ ಕುಶಾಲಪ್ಪ ಅವರು ಮಾತನಾಡಿ, ಕೊಡವ ಜನಾಂಗದ ವಿರುದ್ಧದ ದೌರ್ಜನ್ಯವನ್ನು ಎಂದಿಗೂ ಸಹಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯ ರಹಿತವಾಗಿ ನಡೆಯುವ ಈ ಪ್ರತಿಭಟನೆಯಲ್ಲಿ ಪ್ರತಿ ಗ್ರಾಮದಿಂದ ಜನಾಂಗದ ಮಹಿಳೆಯರು ಸೇರಿದಂತೆ ಎಲ್ಲರು ಸೇರಬೇಕು. ಕೊಡವರ ಮೇಲೆ ದೌರ್ಜನ್ಯವಾದರೆ ಕೇಳುವವರೇ ಇಲ್ಲ ಎಂಬ ಭಾವನೆ ದೂರವಾಗಬೇಕು. ಈಗಾಗಲೇ ಕಾವೇರಿ ಮಾತೆ ಮತ್ತು ಕೊಡವ ಜನಾಂಗದ ವಿರುದ್ಧ ಅವಹೇಳನೆ ಮಾಡಿರುವುದನ್ನು ಜಿಲ್ಲೆಯ ಬಹುತೇಕ ಎಲ್ಲಾ ಜನಾಂಗಗಳು ಖಂಡಿಸಿ ಕೊಡವ ಜನಾಂಗಕ್ಕೆ ನೈತಿಕ ಬೆಂಬಲ ನೀಡಿರುವುದು ಉನ್ನತ ನಾಗರೀಕ ಪ್ರಜ್ಞೆಯಾಗಿದೆ ಎಂದ ಅವರು ಈ ಪ್ರತಿಭಟನೆ ಸರಕಾರ, ಪೊಲೀಸ್ ಇಲಾಖೆ, ಯಾವುದೇ ಕೋಮು, ಧರ್ಮ, ಜಾತಿಯ ವಿರುದ್ಧ ಅಲ್ಲ. ಕೊಡವ ಜನಾಂಗದ ಭಾವನೆಗೆ ಉಂಟಾದ ನೋವನ್ನು ವಿಶ್ವಮಟ್ಟದಲ್ಲಿ ದಾಖಲಿಸುವ ನಿಟ್ಟಿನಲ್ಲಿ ಈ ಪ್ರತಿಭಟನೆ ನಡೆಸಲಾಗುವುದು ಎಂದರು.
ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಮತ್ತು ಕುಟ್ಟ ಕೊಡವ ಸಮಾಜದ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಮಾತನಾಡಿ, ಎಲ್ಲಾ ಕೊಡವ ಜನಾಂಗವನ್ನು ಪ್ರತಿನಿಧಿಸುವ ೩೨ ಕೊಡವ ಸಮಾಜಗಳು ಮತ್ತು ಇತರ ಎಲ್ಲಾ ಕೊಡವ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಜನಾಂಗವನ್ನು ನಿಂದಿಸಿದ ಪ್ರಕರಣದ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಆರೋಪಿಯನ್ನು ಬಂಧಿಸಿದರೂ ಸಹ ಜನಾಂಗಕ್ಕೆ ಉಂಟಾಗಿರುವ ನೋವು, ಅವಮಾನಗಳ ವಿರುದ್ಧ ಸ್ವಾಭಿಮಾನದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಈ ನಿಟ್ಟಿನಲ್ಲಿ ಎಲ್ಲ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕೊಡವ ಸಮಾಜ ವ್ಯಾಪ್ತಿಯಲ್ಲಿ ಸಭೆ ನಡೆಸಿ ಸಂಘಟನೆ ಮಾಡಲು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅವರು, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯ ಕೊಡವ ಸಮಾಜದ ಸಭೆ ಇಂದು ನಡೆದಿದ್ದು, ಈಗಾಗಲೇ ಮಡಿಕೇರಿ ತಾಲೂಕು ವ್ಯಾಪ್ತಿಯ ಕೊಡವ ಸಮಾಜಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗಿದೆ. ಹಾಗೆಯೇ ವೀರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕಿನ ಸಭೆಯ ತೀರ್ಮಾನವನ್ನು ಸಂಗ್ರಹಿಸಿ ಪ್ರತಿಭಟನೆಯ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಕೊಡವ ಸಮಾಜಗಳ ಒಕ್ಕೂಟದ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಸಭೆಯಲ್ಲಿ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಕುಪುö್ಪಡೀರ ಪೊನ್ನು ಮುತ್ತಪ್ಪ, ಕಾರ್ಯದರ್ಶಿ ಅಯ್ಯಮಾಡ ಮುತ್ತಣ್ಣ, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಯಂಡಮಾಡ ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಕುಟ್ಟ ಕೊಡವ ಸಮಾಜದ ಉಪಾಧ್ಯಕ್ಷ ಕೊಂಗಡ ಸುರೇಶ್ದೇವಯ್ಯ, ಬಾಳೆಲೆ ಕೊಡವ ಸಮಾಜದ ಉಪಾಧ್ಯಕ್ಷ ಮಾಚಂಗಡ ಭೀಮಯ್ಯ, ಕಾರ್ಯದರ್ಶಿ ಆದೇಂಗಡ ಶೇಖರ್, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಿದೇರಿರ ನವೀನ್, ಖಜಾಂಚಿ ಕಿರುಂದAಡ ಪ್ರವೀಣ್, ಪೊನ್ನಂಪೇಟೆ ಕೊಡವ ಸಮಾಜದ ಕಾರ್ಯದರ್ಶಿ ಕೊಟೇರ ಕಿಶನ್ ಉತ್ತಪ್ಪ, ಜಂಟಿ ಕಾರ್ಯದರ್ಶಿ ಅಲೇಮಾಡ ಸುಧೀರ್, ಖಜಾಂಚಿ ಕಟ್ಟಿ ಪೂಣಚ್ಚ, ನಿರ್ದೇಶಕರಾದ ಚೀರಂಡ ಕಂದಾ ಸುಬ್ಬಯ್ಯ, ಮೂಕಳಮಾಡ ಅರಸು ನಂಜಪ್ಪ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಮೂಕಳೇರ ಕಾವ್ಯಮಧು, ಗೋಣಿಕೊಪ್ಪ ಕೊಡವ ಸಮಾಜದ ಉಪಾಧ್ಯಕ್ಷ ಚೆಪುö್ಪಡೀರ ಪ್ರಥ್ವಿ ಪೂಣಚ್ಚ, ಕಾರ್ಯದರ್ಶಿ ಚೊಟ್ಟೆಯಂಡಮಾಡ ಮಾದಪ್ಪ, ಯುಕೊ ಸಂಘಟನೆಯ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕಿಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ಉಪಾಧ್ಯಕ್ಷ ಚಕ್ಕೇರ ರಮೇಶ್, ಕಾರ್ಯದರ್ಶಿ ಗಾಂಡAಗಡ ಕೌಶಿಕ್, ತಿತಿಮತಿ ಇಗ್ಗುತಪ್ಪ ಕೊಡವ ಕೂಟದ ಕಾರ್ಯದರ್ಶಿ ಬೊಳ್ಳಿಮಾಡ ವಸಂತ್ ನಂಜಪ್ಪ, ಕಾವೇರಿ ಭಕ್ತ ಸಂಘದ (ತಿಂಗಕೊರ್ ಮೊಟ್ಟ್ ತಲಕಾವೇರಿಕ್) ಮಲ್ಲಪನ್ನೇರ ವಿನು ಚಿಣ್ಣಪ್ಪ, ಅಣ್ಣೀರ ಹರೀಶ್ ಮಾದಪ್ಪ, ಚಂಗುಲAಡ ಅಯ್ಯಪ್ಪ, ಚಂಗುಲAಡ ವಿನಯ್ ಪೊನ್ನಣ್ಣ, ಜಬ್ಬೂಮಿ ಸಂಘಟನೆಯ ಮಲ್ಲಮಾಡ ಪ್ರಭುಪೂಣಚ್ಚ, ಅಖಿಲ ಕೊಡವ ಸಮಾಜ ಯೂತ್ ವಿಂಗ್ನ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಗೋಣಿಕೊಪ್ಪ ಇಗ್ಗುತ್ತಪ್ಪ ಕೊಡವ ಸಂಘದ ಪೊನ್ನಿಮಾಡ ಸುರೇಶ್, ಕೊಣಿಯಂಡ ಬೋಜಮ್ಮ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೊಟ್ಟಂಗಡ ವಿಜು ದೇವಯ್ಯ, ಕೊಡವ ಸಮಾಜ ಒಕ್ಕೂಟದ ಮಹಿಳಾ ಕೂಟದ ಜಂಟಿ ಕಾರ್ಯದರ್ಶಿ ಬಲ್ಲಣಮಾಡ ರೀಟಾ ಸೇರಿದಂತೆ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು.
ಸಭೆಯಲ್ಲಿ ಮಲ್ಲಮಾಡ ಪ್ರಭುಪೂಣಚ್ಚ, ಚೀರಂಡ ಕಂದಾಸುಬ್ಬಯ್ಯ, ಚಿಮ್ಮಣಮಾಡ ಕೃಷ್ಣ ಗಣಪತಿ, ಕಾಯಪಂಡ ಸುನಿಲ್ ಮಾತನಾಡಿ ಸಲಹೆ ನೀಡಿದರು. ಉಳುವಂಗಡ ಲೋಹಿತ್ ಭೀಮಯ್ಯ ಪ್ರಾರ್ಥಿಸಿ, ಕಾಳಿಮಾಡ ಮೋಟಯ್ಯ ಸ್ವಾಗತಿಸಿದರು. ಕಳ್ಳಿಚಂಡ ಕಟ್ಟಿ ಪೂಣಚ್ಚ ವಂದಿಸಿದರು.