ಮಡಿಕೇರಿ, ಜು.೧೫: ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮಡಿಕೇರಿ ಉಪ ವಿಭಾಗದ ಮೂರ್ನಾಡು ಗ್ರಾ.ಪಂ. ಸಭಾಂಗಣ, ಗೋಣಿಕೊಪ್ಪಲು ಉಪ ವಿಭಾಗದ ತಿತಿಮತಿ ಗ್ರಾ.ಪಂ.ಸಭಾAಗಣ, ವೀರಾಜಪೇಟೆ ಉಪ ವಿಭಾಗದ ಮಾಲ್ದಾರೆ ಕಲ್ಲಾಳ ಸರ್ಕಾರಿ ಆಸ್ಪತ್ರೆ ಸಭಾಂಗಣ, ಕುಶಾಲನಗರ ಉಪ ವಿಭಾಗದ ಯಡವನಾಡು ಸಮುದಾಯ ಭವನ, ಸೋಮವಾರಪೇಟೆ ಉಪ ವಿಭಾಗದ ಸಂಪಿಗೆದಾಳು ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಸಂಗಯ್ಯನಪುರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಾ. ೧೬ ರಂದು (ಇಂದು) ಬೆಳಗ್ಗೆ ೧೧ ಗಂಟೆಯಿAದ ವಿದ್ಯುತ್ ಅದಾಲತ್ ನಡೆಯಲಿದೆ. ಆದ್ದರಿಂದ ಈ ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರು ಸಭೆಗೆ ಹಾಜರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸುವಂತೆ ಸೆಸ್ಕ್ ಇಇ ಎಸ್.ಅನಿತಾ ಬಾಯಿ ಅವರು ತಿಳಿಸಿದ್ದಾರೆ.