ಮಡಿಕೇರಿ, ಜು. ೧೫: ಇಲ್ಲಿನ ನಗರಸಭೆ ಪೌರಾಯುಕ್ತ ರಾಮದಾಸ್ ಅವರನ್ನು ವರ್ಗಾವಣೆ ಮಾಡಿರುವುದನ್ನು ಜಿಲ್ಲಾ ಜೆಡಿಎಸ್ ಮಹಿಳಾ ಘಟಕ ಆಕ್ಷೇಪ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದೆ.
ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಬಿ.ಬಿ. ಪುಷ್ಪಾವತಿ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿ, ಪೌರಾಯುಕ್ತ ರಾಮದಾಸ್ ಅವರು ಜನಪರ ಕೆಲಸವನ್ನು ಮಾಡುತ್ತಿದ್ದರು. ನಗರದ ಅಭಿವೃದ್ಧಿಗೆ ಶ್ರಮಿಸುತ್ತ್ತಿದ್ದರು. ಕೆಲವು ಜನಪ್ರತಿನಿಧಿಗಳು ಹಾಗೂ ಕೆಲವರು ಅಧಿಕಾರಿ ವಿರುದ್ಧ ಹುನ್ನಾರ ನಡೆಸಿ ವರ್ಗಾವಣೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿರುವ ಅವರು, ವರ್ಗಾವಣೆ ತಡೆಹಿಡಿಯಲು ಒತ್ತಾಯಿಸಿದ್ದಾರೆ. ಮನವಿ ಸಲ್ಲಿಕೆ ಸಂದರ್ಭ ಮಹಿಳಾ ಘಟಕದ ಲೀಲಾ ಶೇಷಮ್ಮ, ಇನ್ನಿತರರು ಹಾಜರಿದ್ದರು.