ಕುಶಾಲನಗರ, ಜು. ೧೫: ಈ ಬಾರಿಯ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳ ಮಾಹಿತಿ ಸಂಗ್ರಹಿಸುವ ಸಂಬAಧ ಮೈಸೂರಿನಿಂದ ಹಿರಿಯ ಅರಣ್ಯ ಅಧಿಕಾರಿಗಳ ತಂಡ ತಿತಿಮತಿ, ದುಬಾರೆ, ಆನೆಕಾಡು ಮತ್ತಿತರ ಸಾಕಾನೆಗಳ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೈಸೂರಿನ ಹಿರಿಯ ಅರಣ್ಯ ಅಧಿಕಾರಿ ಕರಿಕಾಳನ್ ನೇತೃತ್ವದಲ್ಲಿ ಆಗಮಿಸಿದ ಅರಣ್ಯ ಅಧಿಕಾರಿಗಳ ತಂಡ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಶಿಬಿರದ ೧೦ ಆನೆಗಳನ್ನು ಸಾಕಾನೆಗಳ ಶಿಬಿರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಮೈಸೂರಿನ ಹಿರಿಯ ಅರಣ್ಯ ಅಧಿಕಾರಿ ಕರಿಕಾಳನ್ ನೇತೃತ್ವದಲ್ಲಿ ಆಗಮಿಸಿದ ಅರಣ್ಯ ಅಧಿಕಾರಿಗಳ ತಂಡ ದುಬಾರೆ ಸಾಕಾನೆ ಶಿಬಿರಕ್ಕೆ ಭೇಟಿ ನೀಡಿ ಶಿಬಿರದ ೧೦ ಆನೆಗಳನ್ನು ಗುರುತಿಸಿದ್ದು, ಇದರಲ್ಲಿ ದುಬಾರೆಯ ಎಂಟು ಆನೆಗಳು ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳುವುದು ಖಚಿತಗೊಂಡಿದೆ.
ಅಧಿಕಾರಿಗಳ ತಂಡ ಜಿಲ್ಲೆಯ ತಿತಿಮತಿ, ಆನೆಕಾಡು ಮತ್ತು ಸಮೀಪದ ರಾಣಿಗೇಟ್ ಶಿಬಿರಗಳಿಗೆ ಭೇಟಿ ನೀಡಿ ಶಿಬಿರದ ಆನೆಗಳ ಮಾಹಿತಿಯನ್ನು ಕಲೆಹಾಕಿದೆ.
ಈ ಸಂದರ್ಭ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್, ಉಪ ವಲಯ ಅರಣ್ಯ ಅಧಿಕಾರಿ ಕನ್ನಂಡ ರಂಜನ್, ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿ ಅನನ್ಯ ಕುಮಾರ್ ಮತ್ತು ಸಿಬ್ಬಂದಿಗಳು ಇದ್ದರು.
-ಚಂದ್ರಮೋಹನ್