ವೀರಾಜಪೇಟೆ, ಜು. ೧೪: ವೀರಾಜಪೇಟೆಯಲ್ಲಿ ನೂತನವಾಗಿ ಸೌಭಾಗ್ಯ ವಿಶೇಷಚೇತನರ ಪತ್ತಿನ ಸಹಕಾರ ಸಂಘ ಉದ್ಘಾಟನೆಗೊಂಡಿದೆ. ಮಲಬಾರ್ ರಸ್ತೆಯ ಹೆಚ್.ಎಂ. ರಾಯಲ್ ಕಟ್ಟಡದಲ್ಲಿ ನೂತನ ಶಾಖೆಯನ್ನು ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರು, ಸಮಾಜದಲ್ಲಿ ಸಿಗುವ ಸವಲತ್ತುಗಳನ್ನು ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಅವರು ಸಲಹೆಯಿತ್ತರು.

ಸಂಘದ ಉಪಾಧ್ಯಕ್ಷೆ ಆಯಿಷಾ ಮಾತನಾಡಿ, ನಮಗೂ ಕೂಡ ಎಲ್ಲರಂತೆ ಬದುಕಲು ಅವಕಾಶವಿದೆ. ಜೀವನದಲ್ಲಿ ಛಲ ಇರಬೇಕು ಎಂದು ಹೇಳಿದರು. ಪುರಸಭೆ ಸದಸ್ಯೆ ಆಶಾ ಸುಬ್ಬಯ್ಯ ಅವರು ಮಾತನಾಡಿದರು.

ವೇದಿಕೆಯಲ್ಲಿ ಸಂಘದ ಅಧ್ಯಕ್ಷ ಭರತ್ ಗೌಡ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಿರಾಜುದ್ದಿನ್ ಉಪಸ್ಥಿತರಿದ್ದರು.