ವೀರಾಜಪೇಟೆ, ಜು. ೧೪: ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತ ಕೊಡಗು ಸಮಾಚಾರ ಪತ್ರಿಕೆಯ ಸಂಪಾದಕ ಬಿ.ಎನ್. ಮನು ಶೆಣೈ ಅವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರಗತಿಪರ ಚಿಂತಕರ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಾಮಾಜಿಕ ಹೋರಾಟಗಾರ ಚೇರಂಡ ನಂದ ಸುಬ್ಬಯ್ಯ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮನು ಶೆಣೈ ನೆನಪಿನ ಕೊಡಗು ಸಮಾಚಾರ ವಾರಪತ್ರಿಕೆಯ ವಿಶೇಷ ಸಂಚಿಕೆಯನ್ನು ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಬಿಡುಗಡೆ ಮಾಡಿದರು. ಕೊಡಗು ಗೌಡ ಸಮಾಜದ ಪ್ರಮುಖ ಸೂರ್ತಲೆ ಸೋಮಣ್ಣ, ವಿ.ಪಿ. ಶಶಿಧರ್, ಡಿ.ಎಸ್. ನಿರ್ವಾಣಪ್ಪ, ಕೆ.ಎಂ. ಗಣೇಶ್, ಸಾಮಾಜಿಕ ಹೋರಾಟಗಾರ ಡಾ. ಐ.ಆರ್. ದುರ್ಗಾ ಪ್ರಸಾದ್, ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್, ಎಸ್.ಐ. ಮುನೀರ್ ಅಹಮದ್, ಕೆ.ಟಿ. ಬೇಬಿ ಮಾಥ್ಯು, ಕಾರ್ತಿಕ್ ಶೆಣೈ ವೇದಿಕೆಯಲ್ಲಿದ್ದರು. ಕೆ.ಆರ್. ವಿದ್ಯಾಧರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆರವಂಡ ಉಮೇಶ್ ವಂದಿಸಿದರು.