ಗೋಣಿಕೊಪ್ಪಲು, ಜು. ೧೪: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಗೆ ದಕ್ಷಿಣ ಕೊಡಗಿನಾದ್ಯಂತ ಅಲ್ಲಲ್ಲಿ ಮರಗಳು ರಸ್ತೆಗೆ ಉರುಳಿವೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯೊಂದಿಗೆ ಗಾಳಿಯು ಬೀಸುತ್ತಿರುವುದರಿಂದ ಅಲ್ಲಲ್ಲಿ ಮನೆಯ ಶೀಟ್‌ಗಳು, ಪ್ಲಾಸ್ಟಿಕ್ ಹೊದಿಕೆಗಳು ಹಾರಿ ಹೋಗುತ್ತಿವೆ. ಶ್ರೀಮಂಗಲ - ನಾಲ್ಕೇರಿ ಬಳಿ ಇರುವ ಲಕ್ಷö್ಮಣತೀರ್ಥ ನದಿಯ ನೀರು ಹೆಚ್ಚಾದ ಕಾರಣ ಸೇತುವೆ ಮೇಲೆ ನೀರು ಕಾಣಿಸಿ ಕೊಂಡಿದೆ. ಇದರಿಂದ ಈ ಮಾರ್ಗದ ಸಂಪರ್ಕ ಕಡಿತಗೊಂಡಿದೆ. ಖಾಸಗಿ ಬಸ್‌ಗಳು ಬದಲಿ ಮಾರ್ಗದಿಂದ ಸಂಚಾರ ನಡೆಸುವಂತಾಗಿದೆ.

ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಶ್ರೀಮಂಗಲ ಸುತ್ತಮುತ್ತಲಿನ ಕೆಲವು ಶಾಲೆಗಳಿಗೆ ಆಯಾಯ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ರಜೆ ಘೋಷಣೆ ಮಾಡಿದೆ. ಹಲವೆಡೆ ಶಾಲಾ ವಾಹನಗಳು ರಸ್ತೆಯಲ್ಲಿ ಸಂಚರಿಸಲಾಗದೆ ವಾಪಸ್ಸಾಗಿವೆ. ಬಿಡುವಿಲ್ಲದಂತೆ ಸುರಿಯುತ್ತಿರುವ ಮಳೆಯಿಂದಾಗಿ ನಾಗರಿಕರು ಹೆಚ್ಚಾಗಿ ರಸ್ತೆಗಿಳಿಯುವ ಪ್ರಯತ್ನ ಮಾಡುತ್ತಿಲ್ಲ. ಕೂಲಿ ಕಾರ್ಮಿಕರಿಗೆ ಕಾಫಿ ತೋಟದಲ್ಲಿ ಕೆಲಸವಿಲ್ಲದೆ ಮನೆಯಲ್ಲಿಯೆ ಉಳಿದುಕೊಂಡಿದ್ದಾರೆ.

ಅಮ್ಮತ್ತಿ ಹೋಬಳಿಯ ಚೆನ್ನಂಗಿ ಗ್ರಾಮದ ಚೊಟ್ಟೆಪಾರೆ ಗಿರಿಜನ ಹಾಡಿಯಲ್ಲ್ಲಿ ವಾಸವಿರುವ ಜೇನುಕುರುಬರ ಲಕ್ಷಿö್ಮ ಎಂಬವರು ಮಲಗಿದ್ದ ವೇಳೆ ದಿಢೀರನೆ ಸುರಿದ ಮಳೆ, ಗಾಳಿಯಿಂದಾಗಿ ಗುಡಿಸಲಿಗೆ ಹೊದಿಸಲಾಗಿದ್ದ ಪ್ಲಾಸ್ಟಿಕ್ ಟಾರ್ಪಲ್ ಗಾಳಿಗೆ ಹಾರಿ ಹೋಗಿದ್ದು, ಈ ವೇಳೆ ಗುಡಿಸಲಿನಲ್ಲಿದ್ದ ಆಹಾರ ಸಾಮಗ್ರಿಗಳು ಸಂಪೂರ್ಣ ಹಾಳಾಗಿವೆ. ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ತಟ್ಟೆಕೆರೆ ಗಿರಿಜನ ಹಾಡಿಯ ನಿವಾಸಿ ಜೇನುಕುರುಬರ ಕುಳ್ಳಿ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರ ಬಿದ್ದ ಪರಿಣಾಮ ಮನೆಯ ಗೋಡೆ ಭಾಗಶಃ ಕುಸಿದು ಬಿದ್ದಿದೆ. ಸ್ಥಳಕ್ಕೆ ನಿಟ್ಟೂರು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಪಡಿಂಞÁ್ಞರAಡ ಕವಿತಪ್ರಭು, ಗ್ರಾ.ಪಂ. ಸದಸ್ಯರಾದ ಚೆಕ್ಕೇರ ಸೂರ್ಯ ಅಯ್ಯಪ್ಪ ಹಾಗೂ ಕಾಟಿಮಾಡ ಶರೀನ್ ಮುತ್ತಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮೀಣ ಭಾಗದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆ ಇನ್ನೊಂದೆಡೆ ರಭಸವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಮರಗಳು ಬುಡ ಸಹಿತ ಬೀಳುತ್ತಿವೆ. ಇದರಿಂದ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳು ಬೀಳುತ್ತಿದ್ದು, ಇದರಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ನೀಡಲು ಇಲಾಖೆ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಪೂರೈಕೆ ಮಾಡಲು ಶ್ರಮಿಸುತ್ತಿದ್ದಾರೆ. ಆದರೂ, ಆಗಿಂದಾಗ್ಗೆ ಬೀಸುವ ಗಾಳಿಗೆ ಮರಗಳು ವಿದ್ಯುತ್ ಕಂಬಗಳ ಮೇಲೆ ಬೀಳುತ್ತಿರುವುದ ರಿಂದ ಸಮಸ್ಯೆ ಎದುರಾಗಿದೆ. ಸುರಿಯುತ್ತಿರುವ ಮಳೆಯಿಂದಾಗಿ ನಿಟ್ಟೂರು, ಬಾಳೆಲೆ ಸಂಪರ್ಕ ಲಕ್ಷö್ಮಣತೀರ್ಥ ನದಿಯ ನೀರು ಸೇತುವೆಯ ಸಮೀಪಕ್ಕೆ ತಲುಪಿದೆ. ಮತ್ತಷ್ಟು ಮಳೆ ಸಂಭವಿಸಿದರೆ ಸೇತುವೆ ಮೇಲೆ ನೀರು ಹರಿಯಬಹುದಾದ ಸಾಧ್ಯತೆ ಹೆಚ್ಚಿದೆ.

-ಹೆಚ್.ಕೆ. ಜಗದೀಶ್