ಮಡಿಕೇರಿ, ಜು.೧೫: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಎಂ.ಎ.ಕೊಡವ ಸ್ನಾತಕೋತ್ತರ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ಕೊಡವ ವ್ಯಾಕರಣ ಪುಸ್ತಕ ಬಿಡುಗಡೆ (ಕೊಡವ ತಕ್ಕ್ರ ಆದ್ಯ ವ್ಯಾಕರಣ ಪುಸ್ತಕ) ಕಾರ್ಯಕ್ರಮವು ತಾ. ೧೬ ರಂದು (ಇಂದು) ಮಧ್ಯಾಹ್ನ ೨ ಗಂಟೆಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ.ಮುತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೇಶವ ಕಾಮತ್, ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಚೌರೀರ ಜಗತ್ ತಿಮ್ಮಯ್ಯ, ರಿಜಿಸ್ಟಾçರ್ ಸಿ.ಗಿರೀಶ್ ಇತರರು ಪಾಲ್ಗೊಳ್ಳಲಿದ್ದಾರೆ.
ಪೂಮಾಲೆ ವಾರಪತ್ರಿಕೆಯ ಸಂಪಾದಕರಾದ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರು ಕೊಡವ ಪಾಜೆಲ್ ವ್ಯಾಕರಣತ್ರ ಮಹತ್ವ ಎಂಬ ವಿಷಯದ ಬಗ್ಗೆ ವಿಚಾರಮಂಡನೆ ಮಾಡಲಿದ್ದಾರೆ. ಜೊತೆಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿತ ಚೀರಮ್ಮನ ವಾಣಿ ಚಂಗುಮ್ಮಯ್ಯ ಅವರು ಬರೆದಿರುವ ಭಾವನೆಲ್ ಪಬ್ಬ್ನ ಬಳ್ಳಿ, ಪಂದ್ಯAಡ ರೇಣುಕಾ ಸೋಮಯ್ಯ ಅವರು ಬರೆದಿರುವ ಪೊಂಬೊಳಿ ಹಾಗೂ ಡಾ.ವಿ. ಅವಿನಾಶ್ ಅವರ ಸಂಶೋಧನಾ ಪ್ರಬಂಧವಾಗಿರುವ ಕೊಡಗಿನಲ್ಲಿ ಸಾಂವಿಧಾನಿಕ ಸುಧಾರಣೆ ಮತ್ತು ರಾಜಕೀಯ ಪರಿವರ್ತನೆಗಳು (ಕ್ರಿ.ಶ.೧೯೨೪-೧೯೪೭) ಈ ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.