ಮಡಿಕೇರಿ, ಜು. ೧೩: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಇನ್ನು ಮುಂದೆ ಡಿಜಿಟಲ್ ರಶೀದಿಗಳನ್ನು ಸೃಜಿಸಿ ಸಾರ್ವಜನಿಕರಿಗೆ ನೀಡಿ ತೆರಿಗೆ, ದರ ಮತ್ತು ಫೀಜುಗಳನ್ನು ಸಂಗ್ರಹಣೆ ಮಾಡುವಂತೆ ರಾಜ್ಯ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ. ಎಲ್ಲಾ ಪಂಚಾಯಿತಿಗಳು ಈ ಕ್ರಮವನ್ನು ಕಡ್ಡಾಯವಾಗಿ ಜುಲೈ ೬ ರಿಂದಲೇ ಪಾಲಿಸುವಂತೆ ಆದೇಶದಲ್ಲಿ ನಿರ್ದೇಶಿಸಲಾಗಿದೆ.

ಪಂಚತAತ್ರ ತಂತ್ರಾAಶದ ಮೂಲಕ ೨೦೧೧ ರಿಂದ ಗ್ರಾಮೀಣ ಸೇವೆಗಳು ಲಭ್ಯವಿದ್ದು, ಇದೀಗ ಈ ತಂತ್ರಾAಶವನ್ನು ಉನ್ನತೀಕರಣಗೊಳಿಸಿ ಪಂಚತAತ್ರ ೨.೦ ಎಂದು ನಾಮಕರಣ ಮಾಡಲಾಗಿದೆ. ಈ ತಂತ್ರಾAಶದ ತೆರಿಗೆ ಸಂಗ್ರಹ ಮಾಡ್ಯುಲ್‌ನಲ್ಲಿ ತೆರಿಗೆ, ದರ, ಫೀಜುಗಳನ್ನು ವಿಧಿಸಿ ಸಂಗ್ರಹಕ್ಕೆ ಸಾರ್ವಜನಿಕರಿಗೆ ಡಿಜಿಟಲ್ ರಶೀದಿಯನ್ನೇ ನೀಡಬೇಕಾಗಿದ್ದು, ಜುಲೈ ೬ ರಿಂದ ಇದು ಕಡ್ಡಾಯಗೊಳಿಸಲಾಗಿದೆ. ಇದರೊಂದಿಗೆ ಪಂಚತAತ್ರ ೨.೦ ತಂತ್ರಾAಶದಲ್ಲಿನ ‘ನಾಗರಿಕ ಸೇವೆಗಳು’ ಮಾಡ್ಯುಲ್‌ಗಳನ್ನು ಮತ್ತು ‘ಬಾಪೂಜಿ ಸೇವಾ ಕೇಂದ್ರ’ ತಂತ್ರಾAಶವನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅನುಷ್ಠಾನಗೊಳಿಸುವಂತೆಯೂ ಆದೇಶದಲ್ಲಿ ವಿವರಿಸಲಾಗಿದೆ.

ಸರಕಾರಿ ಮುದ್ರಣಾಲಯದಿಂದ ಅಥವಾ ಜಿಲ್ಲಾ ಪಂಚಾಯಿತಿ ಮೂಲಕ ನಮೂನೆ-೩ ಮುದ್ರಿತ ರಶೀದಿ ಪುಸ್ತಕಗಳನ್ನು ಗ್ರಾಮ ಪಂಚಾಯಿತಿಗಳು ಪಡೆಯುವಂತಿಲ್ಲ, ಬದಲಿಗೆ ಪಂಚತAತ್ರ ೨.೦ ತಂತ್ರಾAಶದ ಮೂಲಕವೇ ರಶೀದಿ ಸೃಜಿಸಿ ಸಾರ್ವಜನಿಕರಿಗೆ ವಿತರಣೆ ಮಾಡಬೇಕಾಗುತ್ತದೆ. ಸಾರ್ವಜನಿಕರು ಬಾಪೂಜಿ ಸೇವಾ ಕೇಂದ್ರ

(ಮೊದಲ ಪುಟದಿಂದ)ತAತ್ರಾAಶದ ಅಥವಾ ಬಾಪೂಜಿ ಸೇವಾ ಕೇಂದ್ರ ಮೊಬೈಲ್ ಆ್ಯಪ್ ಮೂಲಕ ಗ್ರಾಮ ಪಂಚಾಯಿತಿಗಳ ಆಸ್ತಿ ತೆರಿಗೆಯನ್ನು ಪಾವತಿಸಬಹುದಾಗಿದೆ. ಬಾಪೂಜಿ ಸೇವಾ ಕೇಂದ್ರ ತಂತ್ರಾAಶ ಅಥವಾ ಆ್ಯಪ್ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ೧೫ ಸೇವೆಗಳನ್ನು ಸಹ ಸಾರ್ವಜನಿಕರು ಬಳಸಬಹುದಾಗಿದೆ.

ಕಟ್ಟಡ ನಿರ್ಮಾಣ ಲೈಸೆನ್ಸ್, ಸ್ವಾಧೀನ ಪತ್ರ, ಹೊಸ ನಲ್ಲಿ ನೀರಿನ ಸಂಪರ್ಕ, ನಲ್ಲಿ ನೀರು ಸಂಪರ್ಕ ಕಡಿತ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪದ ನಿರ್ವಹಣೆ, ಗ್ರಾಮ ನೈರ್ಮಲ್ಯದ ನಿರ್ವಹಣೆ, ನಮೂನೆ ೯/೧೧ ಆ, ನಮೂನೆ ೧೧ ಬಿ, ವಾಣಿಜ್ಯ, ವ್ಯಾಪಾರ, ವಸತಿಯೇತರ ವ್ಯವಹಾರದ ಲೈಸೆನ್ಸ್, ಕೈಗಾರಿಕ/ಕೃಷಿ ಆಧಾರಿತ ಉತ್ಪಾದನಾ ಘಟಕ ಸ್ಥಾಪನೆಗೆ ಅನುಮತಿ, ನಿರಾಕ್ಷೇಪಣಾ ಪತ್ರ, ರಸ್ತೆ ಅಗೆತದ ಅನುಮತಿ, ಕೌಶಲ್ಯ ರಹಿತ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದು, ಮಹಾತ್ಮ ಗಾಂಧೀಜಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೌಶಲ್ಯ ರಹಿತ ಕಾರ್ಮಿಕರಿಗೆ ಜಾಬ್ ಕಾರ್ಡ್ ವಿತರಣೆ - ಈ ೧೫ ಸೇವೆಗಳನ್ನು ಬಾಪೂಜಿ ಸೇವಾ ಕೇಂದ್ರ ತಂತ್ರಾAಶದ ಮೂಲಕ ಸಾರ್ವಜನಿಕರು ಪಡೆಯಬಹುದಾಗಿದೆ.

ಪ್ರಮಾಣ ಪತ್ರಗಳಿಗೂ ಡಿಜಿಟಲ್ ಸಹಿ

ಗ್ರಾಮ ಪಂಚಾಯಿತಿಗಳಲ್ಲಿ ಸಕಾಲ ಅಧಿನಿಯಮದ ಉಲ್ಲಂಘನೆಯನ್ನು ತಡೆಗಟ್ಟಲು ಸಕಾಲ ಅರ್ಜಿ ಸಂಖ್ಯೆ (ಜಿ.ಎಸ್.ಸಿ) ಇಲ್ಲದೆ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಡಿಜಿಟಲ್ ಸಹಿ ಇಲ್ಲದೆ ವಿತರಿಸಲಾಗುವ ಯಾವುದೇ ಪ್ರಮಾಣ ಪತ್ರಗಳು ಕಾನೂನು ಬದ್ಧವಾಗಿ ಮಾನ್ಯವಾಗುವುದಿಲ್ಲ ಎಂಬುದಾಗಿಯೂ ಆದೇಶದಲ್ಲಿ ತಿಳಿಸಲಾಗಿದೆ.