೧೮ ರಿಂದ ೫೯ ವರ್ಷದವರಿಗೆ ಉಚಿತ ಕೋವಿಡ್ ಬೂಸ್ಟರ್ ಡೋಸ್

ನವದೆಹಲಿ, ಜು. ೧೩: ತಾ. ೧೫ ರಿಂದ ಪ್ರಾರಂಭವಾಗುವ ೭೫ ದಿನಗಳ ವಿಶೇಷ ಅಭಿಯಾನದಡಿಯಲ್ಲಿ ೧೮ ವರ್ಷದಿಂದ ೫೯ ವಯಸ್ಸಿನವರಿಗೆ ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಕೋವಿಡ್ ಮುನ್ನೆಚ್ಚರಿಕೆ ಅಥವಾ ಬೂಸ್ಟರ್ ಡೋಸ್ ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೋವಿಡ್ ಮುನ್ನೆಚ್ಚರಿಕೆ ಡೋಸ್ ಅನ್ನು ಹೆಚ್ಚು ಜನರಿಗೆ ನೀಡುವ ಗುರಿಯನ್ನು ಹೊಂದಿರುವ ಈ ಅಭಿಯಾನ ಸ್ವಾತಂತ್ರö್ಯದ ೭೫ನೇ ವಾರ್ಷಿಕೋತ್ಸವವನ್ನು ಆಚರಿಸಲು ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಲ್ಲಿಯವರೆಗೆ ೧೮ ರಿಂದ ೫೯ ವಯೋಮಾನದ ೭೭ ಕೋಟಿ ಜನಸಂಖ್ಯೆಯಲ್ಲಿ ಶೇ. ೧ಕ್ಕಿಂತ ಕಡಿಮೆ ಜನರಿಗೆ ಮುನ್ನೆಚ್ಚರಿಕೆ ಡೋಸ್ ನೀಡಲಾಗಿದೆ. ಭಾರತೀಯ ಜನಸಂಖ್ಯೆಯ ಬಹುಪಾಲು ಜನರು ಒಂಬತ್ತು ತಿಂಗಳ ಹಿಂದೆಯೇ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಮತ್ತು ಇತರ ಅಂರ‍್ರಾಷ್ಟಿçÃಯ ಸಂಶೋಧನಾ ಸಂಸ್ಥೆಗಳ ಅಧ್ಯಯನಗಳು, ಲಸಿಕೆ ಪಡೆದ ಆರು ತಿಂಗಳ ನಂತರ ಪ್ರತಿಕಾಯ ಮಟ್ಟಗಳು ಕ್ಷೀಣಿಸುತ್ತವೆ ಎಂದು ಹೇಳಿವೆ. ಹೀಗಾಗಿ ಕೊರೊನಾದಿಂದ ಮತ್ತಷ್ಟು ರಕ್ಷಣೆ ಪಡೆಯಲು ಬೂಸ್ಟರ್ ಡೋಸ್ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಎಲ್ಲಾ ಫಲಾನುಭವಿಗಳಿಗೆ ಕೋವಿಡ್-೧೯ ಲಸಿಕೆಯ ಎರಡನೇ ಮತ್ತು ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವನ್ನು ಒಂಬತ್ತರಿAದ ಆರು ತಿಂಗಳವರೆಗೆ ಕಡಿಮೆ ಮಾಡಿದೆ. ಇದು ಪ್ರತಿರಕ್ಷಣೆ ಕುರಿತ ರಾಷ್ಟಿçÃಯ ತಾಂತ್ರಿಕ ಸಲಹಾ ಗುಂಪಿನ (ಎನ್‌ಟಿಎಜಿಐ) ಶಿಫಾರಸನ್ನು ಅನುಸರಿಸಿದೆ. ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಮತ್ತು ಬೂಸ್ಟರ್ ಶಾಟ್‌ಗಳನ್ನು ಉತ್ತೇಜಿಸಲು ಸರ್ಕಾರವು ಜೂನ್ ೧ ರಂದು ರಾಜ್ಯಗಳಾದ್ಯಂತ ‘ಹರ್ ಘರ್ ದಸ್ತಕ್ ಅಭಿಯಾನ ೨.೦’ನ ಎರಡನೇ ಸುತ್ತನ್ನು ಪ್ರಾರಂಭಿಸಿತು. ಎರಡು ತಿಂಗಳ ಕಾರ್ಯಕ್ರಮವು ಪ್ರಸ್ತುತ ನಡೆಯುತ್ತಿದೆ. ಸರ್ಕಾರದ ಅಂಕಿಅAಶಗಳ ಪ್ರಕಾರ ಭಾರತದ ಜನಸಂಖ್ಯೆಯ ೯೬ ಪ್ರತಿಶತದಷ್ಟು ಜನರು ಕೋವಿಡ್ ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ.

ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಧ್ಯಕ್ಷ ವಿಕ್ರಮ ಸಿಂಘೆ ಆದೇಶ

ಕೊಲಂಬೋ, ಜು. ೧೩: ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಉಲ್ಬಣವಾಗಿರುವ ನಾಗರಿಕ ಸಂಘರ್ಷವನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತನ್ನಿ ಎಂದು ಶ್ರೀಲಂಕಾ ಭದ್ರತಾಪಡೆಗಳಿಗೆ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಆದೇಶ ನೀಡಿದ್ದಾರೆ. ಹಂಗಾಮಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಆದೇಶ ನೀಡಿದ್ದಾರೆ ಎಂದು ಸುದ್ದಿಸಂಸ್ಥೆಯೊAದು ವರದಿ ಮಾಡಿದೆ. ಪ್ರಸ್ತುತ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಶಸ್ತç ಪಡೆಗಳು ಮತ್ತು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಹೇಳಿದ್ದಾರೆ ಎನ್ನಲಾಗಿದೆ. ಆಕ್ರೋಶಭರಿತ ನಾಗರಿಕರ ಪ್ರತಿಭಟನೆಗೆ ಅಂಜಿ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಮಾಲ್ಡೀವ್ಸ್ಗೆ ಪರಾರಿಯಾದ ಬೆನ್ನಲ್ಲೇ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ವಿಚಾರವನ್ನು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಘೋಷಿಸಿದ್ದರು. ಅಲ್ಲದೆ ಇಂತಹ ಅಧಿಕಾರ ಇದು ಸಂವಿಧಾನದ ೩೭(೧)ನೇ ಪರಿಚ್ಛೇದದ ಅಡಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಶ್ರೀಲಂಕಾದಲ್ಲಿ ಸರ್ಕಾರ ಆಂತರಿಕ ತುರ್ತು ಪರಿಸ್ಥಿತಿ ಹೇರಿದ್ದು, ಇದೀಗ ಪರಿಸ್ಥಿತಿಯನ್ನು ಆದಷ್ಟು ಬೇಗ ನಿಯಂತ್ರಿಸುವAತೆ ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮ ಸಿಂಘೆ ಭದ್ರತಾ ಪಡೆಗಳಿಗೆ ಆದೇಶ ನೀಡಿದ್ದಾರೆ.

ಪಿಎಸ್‌ಐ ನೇಮಕಾತಿ ಅಕ್ರಮ: ಅಮೃತ್ ಪೌಲ್ ೩ ದಿನ ಸಿಐಡಿ ವಶಕ್ಕೆ

ಬೆಂಗಳೂರು, ಜು. ೧೩: ೫೪೫ ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣ ಸಂಬAಧ ಬಂಧನಕ್ಕೀಡಾಗಿರುವ ಮಾಜಿ ಎಡಿಜಿಪಿ ಅಮೃತ್ ಪೌಲ್‌ರನ್ನು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿದೆ. ಪೊಲೀಸ್ ನೇಮಕಾತಿ ವಿಭಾದ ಎಜಿಡಿಪಿಯಾಗಿದ್ದ ಅಮೃತ್ ಪೌಲ್‌ರ ಸಿಐಡಿ ಕಸ್ಟಡಿ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ಪೌಲ್‌ರನ್ನು ೧ನೇ ಎಸಿಎಂಎA ಕೋರ್ಟ್ ಮುಂದೆ ಹಾಜರುಪಡಿಸಿದ್ದು ನ್ಯಾಯಾಲಯ ಮತ್ತೆ ಮೂರು ದಿನಗಳ ಕಾಲ ಸಿಐಡಿ ವಶಕ್ಕೆ ನೀಡಿ ಆದೇಶಿಸಿದೆ. ಎಡಿಜಿಪಿ ಅಮೃತ್ ಪೌಲ್ ಹಾಗೂ ಆರೋಪಿ ಶಾಂತಕುಮಾರ್ ನಡುವೆ ೧.೩೬ ಕೋಟಿ ರೂಪಾಯಿ ಹಣ ವರ್ಗಾವಣೆ ಆಗಿದೆ. ಮೊಬೈಲ್ ದತ್ತಾಂಶವನ್ನು ಅಳಿಸಿ ಹಾಕಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಇನ್ನು ಐದು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಐಡಿ ಪರ ವಕೀಲರು ಕೋರಿದ್ದರು. ಪ್ರಕರಣಕ್ಕೆ ಸಂಬAಧಿಸಿದAತೆ ಸತತ ಮೂರು ಬಾರಿ ವಿಚಾರಣೆ ಎದುರಿಸಿದ್ದ ಅಮೃತ್ ಪೌಲ್‌ರನ್ನು ಕಳೆದ ಜುಲೈ ೪ ರಂದು ಸಿಐಡಿ ಅಧಿಕೃತವಾಗಿ ಬಂಧಿಸಿತ್ತು. ಅಮೃತ್ ಪೌಲ್ ೨೫ ಅಭ್ಯರ್ಥಿಗಳ ಜೊತೆ ೩೦ ಲಕ್ಷ ರೂಪಾಯಿ ಡೀಲ್ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬAಧಿಸಿದAತೆ ಮತ್ತಷ್ಟು ವಿಚಾರಣೆ ನಡೆಸಲು ಸಿಐಡಿ ಅವರನ್ನು ಬಂಧಿಸಿತ್ತು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ನಡೆಯುತ್ತಿರುವ ತನಿಖೆಗೆ ಸಂಬAಧಿಸಿದAತೆ ಇಂದು ಕಾರ್ಲ್ಟನ್ ಹೌಸ್‌ನಲ್ಲಿರುವ ಸಿಐಡಿ ಕಚೇರಿಗೆ ೧೯೯೫ ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪೌಲ್ ಅವರನ್ನು ಮೂರನೇ ಬಾರಿ ವಿಚಾರಣೆಗೆ ಕರೆಯಲಾಗಿತ್ತು. ಹಗರಣದಲ್ಲಿ ಪೌಲ್ ಸೇರಿದಂತೆ ೭೯ ಜನರನ್ನು ಬಂಧಿಸಿರುವ ಸಿಐಡಿ ಇದುವರೆಗೆ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅವರು ನೇಮಕಾತಿ ಎಡಿಜಿಪಿ ಆಗಿದ್ದ ಸಂದರ್ಭದಲ್ಲಿ ಪರೀಕ್ಷೆಗಳು ನಡೆದಿದ್ದವು. ಡಿವೈಎಸ್‌ಪಿ ಹಾಗೂ ಎಫ್‌ಡಿಎಯೊಂದಿಗೆ ಸೇರಿ ಅಮೃತ್ ಪೌಲ್ ಡೀಲ್ ಮಾಡಿಸಿದ್ದಾರೆ ಎಂಬ ಆರೋಪವಿದೆ.

ಚೀನಾ ಮೂಲದ ಒಪ್ಪೊಗೆ ಭಾರತ ನೋಟೀಸ್

ನವದೆಹಲಿ, ಜು. ೧೩: ರೂ. ೪,೩೮೯ ಕೋಟಿ ಆಮದು ಸುಂಕ ವಂಚಿಸಿದ ಆರೋಪದ ಮೇಲೆ ಚೀನಾದ ಫೋನ್ ತಯಾರಕ ಕಂಪೆನಿ ಒಪ್ಪೊದ ಭಾರತ ಘಟಕಕ್ಕೆ ನೋಟೀಸ್ ಜಾರಿ ಮಾಡಲಾಗಿದೆ ಎಂದು ಹಣಕಾಸು ಸಚಿವಾಲಯ ಬುಧವಾರ ತಿಳಿಸಿದೆ. ಕೆಲವು ಆಮದುಗಳು ಮತ್ತು ವಿವಿಧ ಎಂಎನ್‌ಸಿಗಳಿಗೆ ರಾಯಧನ ಮತ್ತು ಪರವಾನಗಿ ಶುಲ್ಕಗಳ ರವಾನೆಗಳ ವಿವರಣೆಯಲ್ಲಿ ಉದ್ದೇಶಪೂರ್ವಕ ತಪ್ಪು ಘೋಷಣೆಯನ್ನು ಸೂಚಿಸುವ ದಾಖಲೆಗಳು ಪತ್ತೆಯಾಗಿದ್ದು, ಒಪ್ಪೊ ಇಂಡಿಯಾಗೆ ಶೋಕಾಸ್ ನೋಟೀಸ್ ಜಾರಿಗೊಳಿಸಲಾಗಿದೆ. ಗುವಾಂಗ್‌ಡಾAಗ್ ಒಪ್ಪೊ ಮೊಬೈಲ್ ಟೆಲಿಕಮ್ಯು ನಿಕೇಶನ್ಸ್ ಕಾರ್ಪೊರೇಷನ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ಒಪ್ಪೊ ಮೊಬೈಲ್ಸ್ ಇಂಡಿಯಾ ಪ್ರೆöÊವೆಟ್ ಲಿಮಿಟೆಡ್‌ನ ತನಿಖೆಯ ಸಮಯದಲ್ಲಿ, ಕಂದಾಯ ಗುಪ್ತಚರ ನಿರ್ದೇಶನಾಲಯ ಸುಮಾರು ೪,೩೮೯ ಕೋಟಿ ರೂಪಾಯಿಗಳ ಕಸ್ಟಮ್ಸ್ ಸುಂಕ ವಂಚನೆಯನ್ನು ಪತ್ತೆಹಚ್ಚಿದೆ ಎಂದು ಸಚಿವಾ ಲಯ ಪ್ರಕಟಣೆ ತಿಳಿಸಿದೆ. ನೋಟೀಸ್ ಬಗ್ಗೆ ಪ್ರತಿಕ್ರಿಯಿಸಿದ ಒಪ್ಪೊ ಇಂಡಿಯಾ, ಶೋಕಾಸ್ ನೋಟೀಸ್‌ನಲ್ಲಿ ಉಲ್ಲೇಖಿಸಲಾದ ಆರೋಪಗಳ ಬಗ್ಗೆ ವಿಭಿನ್ನ ದೃಷ್ಟಿಕೋನ ಹೊಂದಿದೆ ಮತ್ತು ಕಾನೂನು ಪರಿಹಾರಗಳು ಸೇರಿದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಿದೆ. ಒಪ್ಪೊ ಇಂಡಿಯಾ ಶೋಕಾಸ್ ನೋಟೀಸ್ ಪರಿಶೀಲಿಸುತ್ತಿದೆ ಮತ್ತು ನಾವು ನೋಟೀಸ್‌ಗೆ ಪ್ರತ್ಯುತ್ತರ ನೀಡಲಿದ್ದೇವೆಯೆಂದು ಚೀನಾ ಮೊಬೈಲ್ ಕಂಪೆನಿ ತಿಳಿಸಿದೆ.

೪೫ ಪಿಸ್ತೂಲ್‌ಗಳನ್ನು ಹೊಂದಿದ್ದ ಭಾರತೀಯ ದಂಪತಿ ಬಂಧನ

ನವದೆಹಲಿ, ಜು. ೧೩: ದೆಹಲಿಯ ಇಂದಿರಾಗಾAಧಿ ಅಂರ‍್ರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ೪೫ ಪಿಸ್ತೂಲ್‌ಗಳನ್ನು ಹೊತ್ತಿದ್ದ ಇಬ್ಬರು ಭಾರತೀ ಯರನ್ನು ಕಸ್ಟಮ್ಸ್ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಬಂದೂಕುಗಳು ನಿಜವೇ ಅಥವಾ ಅಲ್ಲವೇ ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಘಟಕ ಎನ್‌ಎಸ್‌ಜಿ ಬಂದೂಕುಗಳು ಸಂಪೂರ್ಣವಾಗಿ ನೈಜವಾಗಿ ಕಾಣುತ್ತವೆ ಎಂದು ವರದಿ ಮಾಡಿದೆ. ಬಂಧಿತ ಇಬ್ಬರನ್ನು ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ಎಂದು ಗುರುತಿಸಲಾಗಿದ್ದು, ಅವರು ದಂಪತಿ ಗಳೆಂಬುದು ತಿಳಿದುಬಂದಿದೆ. ದಂಪತಿಗಳು ಜುಲೈ ೧೦ ರಂದು ವಿಯೆಟ್ನಾಂ ನಿಂದ ಭಾರತಕ್ಕೆ ಮರಳಿದ್ದರು. ತನ್ನ ಸಹೋದರ ಮಂಜಿತ್ ಸಿಂಗ್ ನೀಡಿದ ಬ್ಯಾಗ್‌ಗಳನ್ನು ಜಗಜಿತ್ ಸಿಂಗ್ ಹಿಡಿದಿದ್ದರು. ಅದರಲ್ಲಿ ಪಿಸ್ತೂಲ್‌ಗಳನ್ನು ತುಂಬಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂದೂಕುಗಳ ಒಟ್ಟು ಬೆಲೆ ಸುಮಾರು ರೂ. ೨೨,೫೦,೦೦೦ ಎಂದು ಹೇಳಲಾಗಿದೆ. ಈ ಹಿಂದೆ ಟರ್ಕಿಯಿಂದ ೨೫ ಪಿಸ್ತೂಲ್‌ಗಳನ್ನು ಭಾರತಕ್ಕೆ ತಂದಿದ್ದಾಗಿ ಇಬ್ಬರೂ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.