ಮಡಿಕೇರಿ, ಜು. ೧೩: ವ್ಯಾನ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಚಾಲಕ ಸಾವನ್ನಪ್ಪಿ, ಮತ್ತೋರ್ವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮಕ್ಕಂದೂರು ಗ್ರಾಮದ ಲತೀಶ್ ಎಂಬಾತ ತನ್ನ ದೊಡ್ಡಪ್ಪ ಕೋಟಿ ಎಂಬವರೊAದಿಗೆ ಪಲ್ಸರ್ ಬೈಕ್ (ಕೆಎ ೧೨ ಯು ೨೪೭೦)ನಲ್ಲಿ ಸಿದ್ದಾಪುರಕ್ಕೆ ಕೆಲಸಕ್ಕೆಂದು ತೆರಳುತ್ತಿದ್ದ ವೇಳೆ ಕತ್ತಲೆಕಾಡು ತಿರುವಿನಲ್ಲಿ ಚೆಟ್ಟಳ್ಳಿಯಿಂದ ಮಡಿಕೇರಿಗೆ ಬರುತ್ತಿದ್ದ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪ ಕೇಂದ್ರದ ವ್ಯಾನ್ (ಕೆಎ ೧೨ ಬಿ ೦೯೯೦) ಡಿಕ್ಕಿಯಾಗಿದೆ. ಪರಿಣಾಮ ಲತೀಶ್ ಹಾಗೂ ಕೋಟಿ ಇಬ್ಬರೂ ನೆಲಕ್ಕುರುಳಲ್ಪಟ್ಟಿದ್ದಾರೆ. ಇಬ್ಬರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಲತೀಶ್ (೨೨) ಕೊನೆಯುಸಿರೆಳೆದಿದ್ದಾನೆ. ಕೋಟಿ ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.