ಮಡಿಕೇರಿ, ಜು. ೧೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವಪೂರ್ಣ ಯೋಜನೆಯಾದ ರಂಗಮAದಿರ ಕಾಯ್ದಿರಿಸುವಿಕೆ ಮತ್ತು ದತ್ತಾಂಶ ಸಂಗ್ರಹವನ್ನು ಆನ್ಲೈನ್ ಮೂಲಕ ನೋಂದಾಯಿಸುವ ಯೋಜನೆಯಡಿ ಲೋಕಾರ್ಪಣೆಗೊಳಿಸಿದ್ದು, ಕಲಾವಿದರ ದತ್ತಾಂಶ ಸಂಗ್ರಹ ಯೋಜನೆಯಡಿ ಕೊಡವ ಸಾಹಿತಿ/ ಕಲಾವಿದರುಗಳು ಸೇವಾಸಿಂಧು ಪೋರ್ಟಲ್ sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ತಮ್ಮ ಮಾಹಿತಿಯನ್ನು ತಾ. ೧೫ ರೊಳಗೆ ನೋಂದಾಯಿಸಿಕೊಳ್ಳಬಹುದು.
ನಿಗದಿತ ಅರ್ಜಿಯನ್ನು ಆನ್ಲೈನ್ನಲ್ಲೇ ಭರ್ತಿ ಮಾಡಬೇಕು. ಕಲಾವಿದರು, ಸಾಹಿತಿಗಳು ಅರ್ಜಿ ಸಲ್ಲಿಸಲು ಕನಿಷ್ಟ ವಯೋಮಿತಿ ೮ ವರ್ಷಗಳು, ಕಲಾಕ್ಷೇತ್ರ ಕನಿಷ್ಟ ೫ ವರ್ಷಗಳ ಕಲಾ ಸೇವೆ ಸಲ್ಲಿಸಿರಬೇಕು. ಸಾಹಿತಿಗಳು ಕನಿಷ್ಟ ಒಂದು ಪುಸ್ತಕ ಪ್ರಕಟಿಸಿರಬೇಕು. ಅರ್ಜಿಯಲ್ಲಿ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರ ಸ್ಪಷ್ಟವಾಗಿ ನಮೂದಿಸಬೇಕು. ಈ ನೋಂದಾವಣೆಯನ್ನು ತಮ್ಮ ಸಮೀಪದ ಸೇವಾಸಿಂಧು ಸೇವಾಕೇಂದ್ರ ಮೂಲಕ ಮಾಡಬಹುದು.
ಕೊಡವ ಸಾಹಿತಿ ಕಲಾವಿದರುಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ದತ್ತಾಂಶ ಸಂಗ್ರಹ ಯೋಜನೆಯಡಿ ನೋಂದಾಯಿಸಿಕೊಳ್ಳಲು ಕೋರಿದೆ. ಪ್ಯಾನ್, ಆಧಾರ್, ಬ್ಯಾಂಕ್ ವಿವರಗಳು, ಪ್ರಮಾಣಪತ್ರಗಳು, ಛಾಯಾಚಿತ್ರಗಳು, ವೀಡಿಯೋ ಕೊಂಡಿಗಳು ಈ ಪೂರಕ ದಾಖಲೆಗಳು ನೋಂದಾವಣೆ ಸಂದರ್ಭದಲ್ಲಿ ಅಗತ್ಯವಾಗಿ ಲಭ್ಯವಿರತಕ್ಕದ್ದು. ಈ ಬಗ್ಗೆ ತಮ್ಮ ಸಂಪರ್ಕದಲ್ಲಿರುವ ಸಾಹಿತಿ / ಕಲಾವಿದರಿಗೂ ಮಾಹಿತಿ ನೀಡಿ ಹೆಚ್ಚು ಮಂದಿ ಇದರ ಪ್ರಯೋಜನ ಪಡೆಯಲು ಸಹಕರಿಸಬೇಕಾಗಿ ಕೋರಿದೆ. ಹಾಗೂ ಸರಿಯಾದ ಕ್ಷೇತ್ರಗಳನ್ನು ಆರಿಸಿ ಅರ್ಜಿ ಭರ್ತಿ ಮಾಡಬೇಕು.
ಅರ್ಹತೆ: ಅನ್ವಯವಾಗುವುದಿಲ್ಲ / ಅರ್ಜಿ ಶುಲ್ಕ ಇಲ್ಲ / ಸೇವಾ ಶುಲ್ಕ(ಆನ್ಲೈನ್ ಅರ್ಜಿ ಸಲ್ಲಿಕೆಗೆ ಸೇವಾ ಶುಲ್ಕವಿಲ್ಲ) ಇಲ್ಲ, ವಿತರಣಾ ಸಮಯ (ದಿನಗಳು) ೩೦ ಕೆಲಸದ ದಿನಗಳು. ಹೆಚ್ಚಿನ ಮಾಹಿತಿಗೆ ಅಕಾಡೆಮಿಯ ದೂ. ೦೮೨೭೨-೨೨೯೦೭೪ ನ್ನು ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಯ ಒಂದು ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಕಲಾವಿದರು ಅಕಾಡೆಮಿ ಕಚೇರಿಗೆ ಸಲ್ಲಿಸಬೇಕು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ತಿಳಿಸಿದ್ದಾರೆ.