ಮಡಿಕೇರಿ, ಜು. ೧೨: ಪ್ರಸ್ತುತ ೨೦೨೨-೨೩ನೇ ಸಾಲಿನಲ್ಲಿ ಏಪ್ರಿಲ್ ೧ ರಿಂದ ಸೆಪ್ಟೆಂಬರ್ ೩೦ ರವರೆಗೆ, ಸಣ್ಣ ಕಾಫಿ ಬೆಳೆಗಾರರು (೧೦ ಹೆಕ್ಟೇರ್ ಒಳಗಿನ ಕಾಫಿ ತೋಟ ಹೊಂದಿರುವ ಬೆಳೆಗಾರರು) ಕೈಗೊಳ್ಳುವ ಕಾಫಿ ಮರುನಾಟಿ, ಹೊಸದಾಗಿ ಕೆರೆ, ತೆರೆದ ರಿಂಗ್ ಬಾವಿ ತೆಗೆಯಲು ಹಾಗೂ ಹೊಸದಾಗಿ ಸ್ಪಿçಂಕ್ಲರ್/ ಡ್ರಿಪ್ ವ್ಯವಸ್ಥೆ ಅಳವಡಿಸಿಕೊಳ್ಳಲು ಅವಕಾಶವಿದ್ದು, ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ತಾ. ೨೫ ರವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಆದಕಾರಣ, ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕೋರಿದೆ. ಹೆಚ್ಚಿನ ಮಾಹಿತಿಗೆ ಹತ್ತಿರದ ಕಾಫಿ ಮಂಡಳಿಯ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ಉಪ ನಿರ್ದೇಶಕರು ತಿಳಿಸಿದ್ದಾರೆ.