ಮಡಿಕೇರಿ, ಜು. ೧೨: ಪ್ರಸಕ್ತ ವರ್ಷ ಮುಂಗಾರು ಆರಂಭ ತಡವಾದರೂ ಕೆಲವೇ ದಿನಗಳಲ್ಲಿ ಸುರಿದ ಭಾರೀ ಮಳೆ ಕಳೆದ ವರ್ಷದ ಮಳೆಯ ಪ್ರಮಾಣವನ್ನು ಮೀರಿಸಿದೆ. ಮಡಿಕೇರಿ ತಾಲೂಕಿಗೆ ಜನವರಿಯಿಂದ ಈತನಕ ೮೧.೮೪ ಇಂಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ೨೧ ಇಂಚಿನಷ್ಟು ಅಧಿಕವಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ ತಾಲೂಕಿಗೆ ೬೦.೦೮ ಇಂಚಿನಷ್ಟು ಮಳೆಯಾಗಿತ್ತು. ಜಿಲ್ಲೆಯಲ್ಲಿ ಈತನಕ ಸರಾಸರಿ ೫೬.೮೪ ಇಂಚು ಮಳೆಯಾಗಿದ್ದು ಕಳೆದ ವರ್ಷಕ್ಕಿಂತ ೧೬ ಇಂಚಿನಷ್ಟು ಹೆಚ್ಚಾಗಿದೆ. ಕಳೆದ ಬಾರಿ ಈ ಅವಧಿಯಲ್ಲಿ ಜಿಲ್ಲಾ ಸರಾಸರಿ ೪೦.೭೦ ಇಂಚಿನಷ್ಟಾಗಿತ್ತು.
ವೀರಾಜಪೇಟೆ ತಾಲೂಕಿನಲ್ಲೂ ಕಳೆದ ಬಾರಿಗಿಂತ ೯ ಇಂಚು ಅಧಿಕ ಮಳೆ ದಾಖಲಾಗಿದೆ. ತಾಲೂಕಿನಲ್ಲಿ ಈ ಬಾರಿ ೪೪.೨೫ ಇಂಚು ಮಳೆಯಾಗಿದ್ದರೆ ಕಳೆದ ವರ್ಷ ಈ ಅವಧಿಯಲ್ಲಿ ೩೫.೧೩ ಇಂಚು ದಾಖಲಾಗಿತ್ತು.
ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಬಾರಿ೨೭.೦೭ ಇಂಚು ಮಳೆ ಯಾಗಿದ್ದರೆ ಈ ಬಾರಿ ೪೪.೧೩ ಇಂಚು ಸುರಿದಿದ್ದು ಕಳೆದ ವರ್ಷಕ್ಕಿಂತ ೧೭.೦೬ ಇಂಚು ಹೆಚ್ಚಾಗಿದೆ.
(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨.೯೦ ಇಂಚು ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ೨.೯೦, ವೀರಾಜಪೇಟೆ ೧.೮೩ ಹಾಗೂ ಸೋಮವಾರಪೇಟೆಗೆ ೩.೯೮ ಇಂಚು ಸರಾಸರಿ
ಗುಡ್ಡೆಹೊಸೂರು : ಗುಡ್ಡೆಹೊಸೂರು ಹಾಗೂ ಕಾವೇರಿ ನದಿಯಂಚಿನಲ್ಲಿರುವ ನೂರಾರು ಪಂಪ್ಹೌಸ್ಗಳು ಕಾವೇರಿ ನದಿ ಪ್ರವಾಹಕ್ಕೆ ಮುಳುಗುವ ಸ್ಥಿತಿಯಲ್ಲಿವೆ.
ತಲಾಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಮಳೆ ಹೆಚ್ಚಾದಲ್ಲಿ ಈ ಭಾಗದ ಹಲವು ಪಂಪ್ಹೌಸ್ಗಳು ಮತ್ತು ವಾಸದ ಮನೆಗಳಿಗೆ ಹಾನಿಯಾಗಲಿವೆ. ಕಳೆದ ೨೦೧೮, ೧೯, ೨೦ ರಲ್ಲಿ ಹಲವು ರೈತರ ಪಂಪ್ಹೌಸ್ಗಳು ಮುಳುಗಿ ಒಂದು ವಾರದ ಕಾಲ ಮೋಟಾರ್ಗಳು ನೀರು ಪಾಲಾಗಿದ್ದವು. ಇದೀಗ ಮತ್ತೆ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ, ಈ ಭಾಗದ ಗಂಧಧಕೋಟೆ, ಮಾದಪಟ್ಟಣ, ಬೆಟ್ಟಗೇರಿ, ಬಾಳುಗೋಡು, ರಂಗಸಮುದ್ರ, ನಂಜರಾಯಪಟ್ಟಣ ವ್ಯಾಪ್ತಿಯ ಹಲವು ಭಾಗಗಳಲ್ಲಿ ಕಾವೇರಿ ನದಿ ನೀರು ಗದ್ದೆಗಳಿಗೆ ಮತ್ತು ಕಾಫಿ ತೋಟಗಳಿಗೆ ನುಗ್ಗಿದೆ. ಅಲ್ಲದೆ ಎಲ್ಲಾ ತೋಡು, ಕೆರೆ, ಹಳ್ಳಗಳು ತುಂಬಿ ಹರಿಯುತ್ತಿವೆ. ಕಾವೇರಿ ನದಿಯ ನೀರಿನ ಪ್ರವಾಹ ಹೆಚ್ಚಾದಲ್ಲಿ ತೆಪ್ಪದಕಂಡಿ, ಮಾದಪಟ್ಟಣದ ಹಲವು ಭಾಗದ ವಾಸದ ಮನೆಗಳಿಗೆ ನೀರು ನುಗ್ಗುವ ಭೀತಿ ಹೆಚ್ಚಿದೆ.ಭಾರೀ ಮಳೆಯಾಗಿದೆ. ಉಳಿದಂತೆ ಮಡಿಕೇರಿ ಹೋಬಳಿ ೨.೯೬, ನಾಪೋಕ್ಲು ೨.೩೬, ಭಾಗಮಂಡಲ೩.೭೨, ಸಂಪಾಜೆ ೨.೫೮ ಇಂಚು ಮಳೆಯಾಗಿದೆ.
ವೀರಾಜಪೇಟೆ ಕಸಬಾ ೨.೧೭, ಹುದಿಕೇರಿ ೩, ಶ್ರೀಮಂಗಲ ೩.೮೫, ಪೊನ್ನಂಪೇಟೆ ೦.೮೪, ಬಾಳೆಲೆ ೦.೮೦, ಸೋಮವಾರಪೇಟೆ ೪.೬೪, ಶನಿವಾರಸಂತೆ ೨.೭೬, ಕೊಡ್ಲಿಪೇಟೆ ೨.೩೫, ಕುಶಾಲನಗರ ೨.೧೨, ಸುಂಟಿಕೊಪ್ಪದಲ್ಲಿ ೨.೯೬ ಇಂಚು ಮಳೆಯಾಗಿದೆ.ಬಿದ್ದು ಹೋಗಿವೆ. ಹೋಬಳಿಯ ಆಲೂರು ಸಿದ್ದಾಪುರ ಶಾಲಾ ಕೆರೆ ಭರ್ತಿಯಾಗಿದೆ. ಮಾಲಂಬಿ ಗ್ರಾಮದಲ್ಲಿ ಭಾರಿ ಮಳೆಯಾಗುತ್ತಿದ್ದು ಇದರಿಂದ ಕೆರೆ ಭರ್ತಿಯಾಗಿದ್ದು ಕೆರೆಯ ಕೋಡೆ ಮತ್ತು ತೂಬುಗಳಲ್ಲಿ ನಾಲೆಯ ಮೂಲಕ ನೀರನ್ನು ಬಿಡಲಾಗಿದೆ. ಕೆರೆಯ ನೀರು ಪಕ್ಕದ ಹಾಸನ ಜಿಲ್ಲೆಗೆ ಸೇರಿದ ತೆರುಗಳಲೆ ಕರೆಗೆ ಕೊಲ್ಲಿಯ ಮೂಲಕ ಹರಿಯುತ್ತದೆ.
ಸೋಮವಾರ ರಾತ್ರಿ ಭಾರಿ ಮಳೆಗೆ ಶನಿವಾರಸಂತೆ ಹೋಬಳಿಯ ಮಾದ್ರೆ ಗ್ರಾಮದ ಗುಂಡಪ್ಪ ಎಂಬುವರ ವಾಸದ ಮನೆ ಬಿದ್ದು ಹೋಗಿದೆ. ಮನೆ ಕುಸಿಯುತ್ತಿದ್ದ ಸಂದರ್ಭದಲ್ಲಿ ಮನೆಯೊಳಗಿದ್ದ ಗುಂಡಪ್ಪ, ಅವರ ಪತ್ನಿ, ಇಬ್ಬರು ಮಕ್ಕಳು ಮನೆಯಿಂದ ಹೊರಬಂದು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಮಂಗಳವಾರ ಬೆಳಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿದ್ದರು.ಕರಿಕೆ : ಭಾಗಮಂಡಲ - ಕರಿಕೆ ಅಂತರ್ ರಾಜ್ಯ ಹೆದ್ದಾರಿ ಬಾಚಿಮಲೆ ಬಳಿ ಕಳೆದ ರಾತ್ರಿ ಬ್ರಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಣಾಮವಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿ ವಾಹನ ಸವಾರರು ಪರದಾಡಿದ ಘಟನೆ ನಡೆಯಿತು. ಈ ಬಗ್ಗೆ 'ಶಕ್ತಿ'ಗೆ ಮಾಹಿತಿ ದೊರಕಿದ ಕೂಡಲೆ ಭಾಗಮಂಡಲ ವಲಯ ಅರಣ್ಯಾಧಿಕಾರಿ ಕೊಟ್ರೆಸ್ ಅವರ ಗಮನಕ್ಕೆ ತಂದ ಬಳಿಕ ತಮ್ಮ ವ್ಯಾಪ್ತಿಯ ಎರಡು ವಾಹನಗಳು ಮತ್ತು ಸಿಬ್ಬಂದಿಗಳು ಹಾಗೂ ಎರಡು ಮರ ಕತ್ತರಿಸುವ ಯಂತ್ರಗಳ ಸಹಾಯದಿಂದ ಮರ ಕತ್ತರಿಸಿ ಸುಮಾರು ಎರಡುವರೆ ಗಂಟೆಗಳ ಕಾಲ ಹತ್ತಕ್ಕೂ ಅಧಿಕ ಅರಣ್ಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಹರಸಾಹಸ ಪಟ್ಟು ಮರವನ್ನು ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಸಾರಿಗೆ ಬಸ್ ಸೇರಿದಂತೆ ಸುಮಾರು ಮೂವತ್ತಕ್ಕೂ ಅಧಿಕ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಕೊನೆಗೆ ಲೋಕೋಪಯೋಗಿ ಇಲಾಖೆ ಎಕ್ಸ್ಕವೇಟರ್ ಯಂತ್ರ ಕಳುಹಿಸಿ ಉಳಿದ ಮರವನ್ನು ಯಂತ್ರದ ಸಹಾಯದಿಂದ ಪಕ್ಕಕ್ಕೆ ಸರಿಸಲಾಯಿತು.ಚೆಟ್ಟಳ್ಳಿ : ಚೆಟ್ಟಳ್ಳಿ ಅಬ್ಯಾಲದ ಮೂಲಕ ಮಡಿಕೇರಿಗೆ ಬರುವಾಗ ಹಲವಾರು ಜಲಧಾರೆಗಳನ್ನು ರಸ್ತೆಬದಿಯಲ್ಲಿ ನೋಡಬಹುದು. ಆದರೆ ಅದೆಲ್ಲದಿಕ್ಕಿಂತ ಜೋರಾಗಿ ಬಹಳ ಎತ್ತರದಿಂದ ಬೀಳುವ ಜಲಪಾತವೊಂದು ಇದೀಗ ಸೃಷ್ಟಿಯಾಗಿದೆ.
ಮಳೆಗೆ ಹರಿಯುವ ನೀರು ಸರಾಗವಾಗಿ ರಸ್ತೆ ಬೆಟ್ಟ ಗುಡ್ಡ ಕೊರೆಯದಂತೆ ಹಾದು ಹೋಗುವ ಸಲುವಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸಿದ ಅವೈಜ್ಞಾನಿಕ ಕಾಮಗಾರಿಯೊಂದು ಈ ಅವಾಂತರ ಸೃಷ್ಟಿಮಾಡಿದೆ. ನೀರು ಮೇಲಿಂದ ಬೀಳುತ್ತಿರುವ ರಭಸಕ್ಕೆ ರಸ್ತೆ ಕೆಳಬದಿಯಲ್ಲಿ ಮಣ್ಣು ಕೊರೆತ ಶುರುವಾಗಿದೆ. ಮುಂದೊAದು ದಿನ ಮಾಡಿದ ಕಾಮಗಾರಿಯ ಜೊತೆಯಲ್ಲೇ ರಸ್ತೆಯೂ ಕೊಚ್ಚಿಹೋಗುವ ಸಾಧ್ಯತೆ ಇದೆ. ಕಾದುನೋಡಬೇಕು.
-ಪಪ್ಪು ತಿಮ್ಮಯ್ಯ ಕೂಡಿಗೆ, ಜು. ೧೨: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮದಲ್ಲಿರುವ ಮೋಹನ ಎಂಬುವರ ವಾಸದ ಮನೆ ಗೋಡೆ ಮಳೆ ಗಾಳಿಯಿಂದಾಗಿ ಕುಸಿತಗೊಂಡು ನಷ್ಟವಾಗಿದೆ.
ಸ್ಧಳಕ್ಕೆ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಜಯಶೀಲಾ, ಅನಂತ್, ಅಭಿವೃದ್ಧಿ ಅಧಿಕಾರಿ ಎಂ.ಕೆ. ಅಯಿಷಾ, ಕಾರ್ಯದರ್ಶಿ ಪುನಿತ್, ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶನಿವಾರಸಂತೆ: ಪಟ್ಟಣ ಹಾಗೂ ಹೋಬಳಿಯಾದ್ಯಂತ ಮಂಗಳವಾರ ಗಾಳಿಯ ಆರ್ಭಟದೊಂದಿಗೆ ಉತ್ತಮ ಮಳೆಯಾಗಿದೆ. ರಭಸವಾಗಿ ಬೀಸುತ್ತಿರುವ ಗಾಳಿಗೆ ಅಲ್ಲಲ್ಲಿ ಮರಗಳು ನೆಲಕಚ್ಚಿವೆ.
ಹೋಬಳಿಯ ಗುಡುಗಳಲೆ, ಗೋಪಾಲಪುರ, ಶಾಂತವೇರಿ, ದೊಡ್ಡಬಿಳಾಹ, ಕಿರಿಬಿಳಾಹ, ಕಾಜೂರು, ಕೂಜಗೇರಿ, ಚಿನ್ನಳ್ಳಿ, ಕೆರೆಹರ್ಳಳಿ, ಮಾದೆಗೋಡು, ನಿಡ್ತ, ಮುಳ್ಳೂರು, ಸಿಡಿಗಳಲೆ ಗ್ರಾಮಗಳಲ್ಲಿ ಧಾರಾಕಾರ ಮಳೆಯಾಗಿದೆ. ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆ ಚುರುಕಾಗಿ ನಡೆದಿದೆ.
ಕೆಲವೆಡೆ ಕಾಫಿ ತೋಟಗಳಲ್ಲಿ ಕೆಲಸ ಸ್ಥಗಿತಗೊಂಡಿದೆ. ಬೆರಳೆಣಿಕೆಯ ಏಲಕ್ಕಿ ಬೆಳೆಗಾರರು ಮಾತ್ರ ಮಳೆ ಲೆಕ್ಕಿಸದೆ ನಿರಾತಂಕವಾಗಿ ಏಲಕ್ಕಿ ಕಾಯಿ ಕೊಯ್ಲು ಮಾಡುತ್ತಿದ್ದಾರೆ. ತೋಟಗಳಲ್ಲಿ ಕೆಲವಿದ್ದರೂ ಕಾರ್ಮಿಕರು ಮಳೆಗಾಳಿಗೆ, ಉರುಳುವ ಮರಗಳಿಗೆ ಅಂಜಿ ಕೆಲಸಕ್ಕೆ ಹಾಜರಾಗುತ್ತಿಲ್ಲ.ಸುಂಟಿಕೊಪ್ಪ: ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ತೀವ್ರ ಮಳೆ ಗಾಳಿಯ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ.
ಸುAಟಿಕೊಪ್ಪ ಹೋಬಳಿಯ ಕೊಡಗರಹಳ್ಳಿ ಮಾರುತಿ ನಗರದ ಸೈದು ಮತ್ತು ಗಣೇಶ್ ಎಂಬವರುಗಳ ಮನೆಯ ಗೋಡೆ ಕುಸಿತಕ್ಕೆ ಒಳಗಾಗಿ ಸಾವಿರಾರು ರೂ. ನಷ್ಟವುಂಟಾಗಿದೆ. ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಲೇರಿ ಚಾಮುಂಡೇಶ್ವರಿ ಕಾಲೋನಿಯ ಅಂಬಿಕಾ ನಾರಾಯಣ ಎಂಬವರ ಮನೆಯವರನ್ನು ಭೂಕುಸಿತದ ಹಿನ್ನೆಲೆ ಪುನರ್ ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನಾಕೂರು ಶಿರಂಗಾಲ ವ್ಯಾಪ್ತಿಯಲ್ಲಿ ಈ.ಕೆ. ಶ್ರೀನಿವಾಸ್ ಎಂಬವರ ಮನೆಯ ಮೇಲೆ ಭಾರೀ ಗಾತ್ರದ ಮರವೊಂದು ಮನೆಯ ಬಿದ್ದ ಪರಿಣಾಮ ಮೇಲ್ಚಾವಣಿ, ಹಾನಿಗೊಳಗಾಗಿದ್ದು, ಸುಮಾರು ರೂ. ೪೦ ಸಾವಿರ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಸ್ಥಳಕ್ಕೆ ಸುಂಟಿಕೊಪ್ಪ ನಾಡಕಚೇರಿಯ ಕಂದಾಯ ಪರಿವೀಕ್ಷಕರಾದ ಪ್ರಶಾಂತ್, ಗ್ರಾಮಲೆಕ್ಕಿಗರಾದ ರೂಪಶ್ರೀ, ನಸೀಮ ಹಾಗೂ ಗ್ರಾಮ ಸಹಾಯಕರು ತೆರಳಿ ಪರಿಶೀಲಿಸಿ ಹಾಗೂ ಅಪಾಯದ ಅಂಚಿನಲ್ಲಿರುವ ಕುಟುಂಬವನ್ನು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಮಳೆಯ ಬಿರುಸು ಕಡಿಮೆಯಾಗಿತ್ತು. ನಾಪೋಕ್ಲು ಮೂರ್ನಾಡು ಸಂಪರ್ಕ ರಸ್ತೆಯ ಬೊಳಿಬಾಣೆ ಎಂಬಲ್ಲಿ ಮಧ್ಯಾಹ್ನದವರೆಗೆ ರಸ್ತೆ ಜಲಾವೃತಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿತ್ತು. ಅಪರಾಹ್ನ ನೀರಿನ ಹರಿವು ಕಡಿಮೆಯಾಗಿ ವಾಹನಗಳು ಸಂಚರಿಸಿದವು. ಕೊಟ್ಟಮುಡಿಯಲ್ಲಿ ಕಾವೇರಿ ನದಿ ಪ್ರವಾಹದಿಂದಾಗಿ ಶೆಡ್ಡೊಂದು ಮುಳುಗಡೆ ಯಾಗಿದೆ. ಜಲಾವೃತ ಗೊಂಡಿದ್ದ ಹಲವು ತಗ್ಗು ಪ್ರದೇಶಗಳಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು ಸಂಚಾರ ಸಾಧ್ಯವಾಗಿದೆ.