ಸೋಮವಾರಪೇಟೆ, ಜು. ೧೨: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲೇಕಟ್ಟೆಯಿಂದ ಹಾನಗಲ್ಲು ಬಾಣೆ ಗ್ರಾಮ ಸಂಪರ್ಕ ರಸ್ತೆಯಲ್ಲಿ ಒಣಗಿದ ಮರವೊಂದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಚೌಡ್ಲು ಗ್ರಾಮ ಪಂಚಾಯಿತಿಯ ಶೇ. ೫೦ ರಷ್ಟು ಕುಟುಂಬಗಳಿಗೆ ಕುಡಿಯುವ ನೀರನ್ನು ಒದಗಿಸುವ ಬೋರ್‌ವೆಲ್ ಮೋಟಾರ್ ಅಳವಡಿಸಿರುವ ಜಾಗದಲ್ಲೇ ಈ ಮರವಿದ್ದು, ಗಾಳಿ ಮಳೆಗೆ ನೆಲಕ್ಕುರುಳುವ ಲಕ್ಷಣಗಳು ಕಾಣುತ್ತಿದೆ. ಆಲೇಕಟ್ಟೆಯಿಂದ ಹಾನಗಲ್ಲು ಬಾಣೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಬದಿಯಲ್ಲಿಯೇ ಈ ಮರವಿದ್ದು, ಇದನ್ನು ತೆರವುಗೊಳಿಸಲು ಈವರೆಗೆ ಯಾರೂ ಮುಂದಾಗಿಲ್ಲ.

ರಸ್ತೆಯ ಬದಿಯಲ್ಲಿಯೇ ವಿದ್ಯುತ್ ಮಾರ್ಗ ಹಾದು ಹೋಗಿದ್ದು, ಬೋರ್‌ವೆಲ್‌ಗೂ ಸಹ ಸಂಪರ್ಕ ನೀಡಲಾಗಿದೆ. ಒಂದು ವೇಳೆ ಈ ಮರ ನೆಲಕ್ಕುರುಳಿದರೆ ಭಾರೀ ಪ್ರಮಾಣದ ಹಾನಿಯಾಗುವ ಸಂಭವವಿದೆ. ತಕ್ಷಣ ಸಂಬAಧಿಸಿದ ಚೌಡ್ಲು ಗ್ರಾಮ ಪಂಚಾಯಿತಿ ಈ ಬಗ್ಗೆ ಗಮನ ಹರಿಸಿ ಮರ ತೆರವುಗೊಳಿಸುವಂತೆ ತೋಟದ ಮಾಲೀಕರಿಗೆ ನಿರ್ದೇಶನ ನೀಡಬೇಕೆಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.