ಮಡಿಕೇರಿ, ಜು. ೧೨: ಭಾರೀ ಮಳೆಯಿಂದ ಹಾನಿಯಾದ ಮನೆ ಮಾಲೀಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೂ. ೧.೦೫ ಲಕ್ಷದ ಪರಿಹಾರ ಚೆಕ್ ವಿತರಿಸಿದರು.
ಮಲ್ಲಿಕಾರ್ಜುನ ನಗರದ ಗೋಪಾಲ ಎಂಬವರಿಗೆ ಸೇರಿದ ಮನೆ ಮಡಿಕೇರಿ, ಜು. ೧೨: ಭಾರೀ ಮಳೆಯಿಂದ ಹಾನಿಯಾದ ಮನೆ ಮಾಲೀಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೂ. ೧.೦೫ ಲಕ್ಷದ ಪರಿಹಾರ ಚೆಕ್ ವಿತರಿಸಿದರು.
ಮಲ್ಲಿಕಾರ್ಜುನ ನಗರದ ಗೋಪಾಲ ಎಂಬವರಿಗೆ ಸೇರಿದ ಮನೆ ಮನೆಹಾನಿಗೆ ರೂ. ೯೫ ಸಾವಿರ, ವಸ್ತುಗಳ ಹಾನಿಗೆ ರೂ. ೧೦ ಸಾವಿರ ಪರಿಹಾರದ ಚೆಕ್ ಅನ್ನು ಈ ಸಂದರ್ಭ ವಿತರಿಸಿ, ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್, ಕಂದಾಯ ಸಚಿವ ಆರ್.ಅಶೋಕ್, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಪೌರಾಯುಕ್ತ ರಾಮದಾಸ್ ಹಾಜರಿದ್ದರು.