ಜು. ೧೨: ಬಕ್ರಿದ್ ಹಬ್ಬದ ಪ್ರಯುಕ್ತ ದುಬಾ ಯಿಯ ಇಂಡೋರ್ ಸ್ಟೇಡಿಯಂನಲ್ಲಿ ಅನಿವಾಸಿ ಕೊಡಗಿನ ಯುವಕರಿಗೆ ವಾಲಿಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿತ್ತು.
ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಎಮ್ಮೆಮಾಡುವಿನ ಆರ್ವೈಸಿ ತಂಡವು ಪಡೆದು ಕೊಂಡರೆ, ಪ್ರೊಂಟ್ ಕೊಂಡAಗೇರಿ ತಂಡವು ದ್ವಿತೀಯ ಸ್ಥಾನ ಪಡೆಯಿತು. ಉತ್ತಮ ಹೊಡೆತಗಾರನಾಗಿ ಆಶಿಕ್ ಎಮ್ಮೆಮಾಡು, ಪಾಸರ್ ಆಗಿ ಲತೀಫ್ ಕೊಂಡAಗೇರಿ ಪ್ರಶಸ್ತಿಗೆ ಭಾಜನರಾದರು.
ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜೀ ಮೇಕ್ ಗಪೂರ್ ಎಮ್ಮೆಮಾಡು, ಝಕರಿಯ ಗುಂಡಿಕೆರೆ, ಹಸನ್ ಹಾಜಿ ಚಾಮಿಯಾಲ, ಪಯಾಝ್ ಕೂವಲೆರ, ಹಂಝ ಎಮ್ಮೆಮಾಡು, ಅಲಿ ಎಮ್ಮೆಮಾಡು ಮತ್ತಿತರರು ಉಪಸ್ಥಿತರಿದ್ದರು.